ಬೆಂಗಳೂರು: ರಾಜ್ಯದ ಎಲ್ಲಾ 10 ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಆನ್ಲೈನ್ ಮೂಲಕ ಪಾವತಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಇ–ಆಸ್ತಿ ಪೋರ್ಟಲ್ ಮೂಲಕ ತೆರಿಗೆಪಾವತಿಯ ಜತೆಗೆ ಖಾತಾ ಬದಲಾವಣೆ ಸೇವೆಯನ್ನೂ ಜಾರಿ ಮಾಡಲಾಗಿದೆ. ನಗರಪಾಲಿಕೆಗಳಲ್ಲದೆ, ಪಟ್ಟಣ ಪಂಚಾಯ್ತಿ ಮತ್ತು ಗ್ರಾಮಪಂಚಾಯ್ತಿಗಳಲ್ಲೂ ಈ ವ್ಯವಸ್ಥೆ ಜಾರಿಯಾಗಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆನ್ಲೈನ್ನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಈ ಸೇವೆಗೆ ಈಗ ರಾಜ್ಯದಾದ್ಯಂತ ವಿಸ್ತರಣೆಗೊಳ್ಳಲಿದೆ.

ಆಸ್ತಿ ತೆರಿಗೆ ಪಾವತಿಯಲ್ಲದೆ, ಅರ್ಜಿ ನಮೂನೆ 3/2ರ ಪರಿಶೀಲನೆ, ವಿವಿಧ ಬಗೆಯ ಸ್ವತ್ತುಗಳ ಹುಡುಕಾಟಕ್ಕೂ ಅವಕಾಶವಿದೆ. ಅನುಮೋದಿತ ಸ್ವತ್ತುಗಳು, ಜಿಲ್ಲಾವಾರು ಅನುಮೋದಿತ ಸ್ವತ್ತುಗಳ ಮಾಹಿತಿಯೂ ಇ–ಆಸ್ತಿಯಲ್ಲಿ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.