ಸೋಮವಾರ, ಆಗಸ್ಟ್ 3, 2020
24 °C

ಸಿದ್ಧಗಂಗಾಮಠ: ವಸತಿ ಶಾಲೆ ಪ್ರವೇಶಕ್ಕೆ ಪೋಷಕರು, ಮಕ್ಕಳ ಜಂಗುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸಿದ್ದಗಂಗಾಮಠದ ವಸತಿ ಶಾಲೆಯ ವಿವಿಧ ತರಗತಿ ಪ್ರವೇಶಕ್ಕೆ ಅರ್ಜಿ ಪಡೆದ ಸಾವಿರಾರು  ಪೋಷಕರು ಮಕ್ಕಳೊಂದಿಗೆ ಭಾನುವಾರ ಮಠದಲ್ಲಿ ನಡೆದ ಪ್ರವೇಶ ಪೂರ್ವ ಸಂದರ್ಶನಕ್ಕೆ ಹಾಜರಾಗಿದ್ದರು.

ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಅವರೇ ಮಕ್ಕಳು ಮತ್ತು ಪೋಷಕರ ಸಂದರ್ಶನ ನಡೆಸುತ್ತಾರೆ. ಭಾನುವಾರ ರಾಜ್ಯದ ವಿವಿಧ ಕಡೆಯ ಪೋಷಕರು ಪ್ರವೇಶಕ್ಕೆ ಮಕ್ಕಳನ್ನು ಕರೆ ತಂದಿದ್ದರು.

ಸ್ವಾಮೀಜಿ ಅವರ ಆಡಳಿತ ಕೊಠಡಿ ಮುಂಭಾಗದ ಆವರಣದಲ್ಲಿ ಸಾಲುಗಟ್ಟಿ ನಿಂತಿದ್ದರು.  ಸುಡುಬಿಸಿಲಲ್ಲೇ ಗಂಟೆಗಟ್ಟಲೆ ಕಾದು ನಿಂತಿದ್ದರು. ಭಾನುವಾರ ಮಠದ ಆವರಣ ಪೋಷಕರು, ಮಕ್ಕಳಿಂದ ತುಂಬಿತ್ತು.

ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಈ ಬಾರಿ ವಿದ್ಯಾರ್ಥಿ ಪ್ರವೇಶ ಕಡಿಮೆ ಮಾಡಿದ್ದು, ಎಂಟುವರೆ ಸಾವಿರ ಅರ್ಜಿ ವಿತರಿಸಿ ಸ್ಥಗಿತ ಮಾಡಲಾಗಿದೆ ಎಂದು  ಹದಿನೈದು ದಿನಗಳ ಹಿಂದೆಯೇ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಹೇಳಿದ್ದರು.

ಆದಾಗ್ಯೂ ಮಠದ ವಸತಿ ಶಾಲೆಗೆ ಪ್ರವೇಶ ಕೋರಿ ಪೋಷಕರು, ಮಕ್ಕಳು ಬರುತ್ತಲೇ ಇದ್ದಾರೆ. ದೂರವಾಣಿ ಮೂಲಕ ವಿಚಾರಿಸುತ್ತಿದ್ದಾರೆ.
 


ಸಿದ್ಧಗಂಗಾಮಠದ ವಸತಿ ಶಾಲೆ ಪ್ರವೇಶ ಪೂರ್ವ ಸಂದರ್ಶನಕ್ಕೆ ಭಾನುವಾರ ಬಂದ ಪೋಷಕರು ಮತ್ತು ಮಕ್ಕಳು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು