ಬುಧವಾರ, ಜನವರಿ 22, 2020
19 °C
ಮಂಗಳೂರಿನಲ್ಲಿ ಮುಖ್ಯಮಂತ್ರಿ

ಗೋಲಿಬಾರ್‌‌ಗೆ ಬಲಿಯಾದ ಕುಟುಂಬದವರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಸರ್ಕಿಟ್ ಹೌಸ್‌‌ನಲ್ಲಿ ಸಭೆ ನಡೆಸಲು ಆಗಮಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪೊಲೀಸರ ಗೋಲಿಬಾರ್‌ನಲ್ಲಿ ಸಾವನ್ನಪ್ಪಿದ ಇಬ್ಬರು ವ್ಯಕ್ತಿಗಳ ಕುಟುಂಬದವರು ಭೇಟಿ ಮಾಡಿದ್ದಾರೆ.

ಸರ್ಕಿಟ್ ಹೌಸ್‌‌ಗೆ ಶಾಸಕ ಯು.ಟಿ.ಖಾದರ್ ಅವರ ಜೊತೆಯಲ್ಲಿ ಆಗಮಿಸಿರುವ ಮೃತರೊಬ್ಬರ ಪತ್ನಿ ಹಾಗೂ ಮಕ್ಕಳು, ಮತ್ತೊಬ್ಬ  ಯುವಕನ ಸೋದರರು ಮುಖ್ಯಮಂತ್ರಿಗಳ ಭೇಟಿಗೆ ಆಗಮಿಸಿದ್ದಾರೆ. ಅಧಿಕಾರಿಗಳು ಮುಖ್ಯಮಂತ್ರಿಗಳ ಭೇಟಿಗೆ ವ್ಯವಸ್ಥೆ ಮಾಡಿದ್ದು, ಯಡಿಯೂರಪ್ಪ ಅವರಿಗೆ ಈ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಮುಖಂಡರ ಭೇಟಿ

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲಾ ರಾಜಕೀಯ ಮುಖಂಡರ ಜೊತೆ ಸಭೆ ನಡೆಸಲಿದ್ದು, ಶಾಸಕ ಐವಾನ್ ಡಿಸೋಜಾ, ಕೆ.ಹರೀಶ್ ಕುಮಾರ್, ಮಾಜಿ ಶಾಸಕರಾದ ಮೊಯೀನುದ್ದೀನ್ ಬಾವಾ, ಜೆ.ಆರ್.ಲೋಬೋ, ದಕ್ಷಿಣ ಕನ್ನಡ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಹಮದ್ ಮಸೂದ್, ಕ್ರೈಸ್ತ್ ಧರ್ಮಗುರುಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಬೆಳಿಗ್ಗೆ ಸಹಜ ಸ್ಥಿತಿ: 8ರ ನಂತರ ಕರ್ಫ್ಯೂ ಬಿಸಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು