ಸಿಂಗಪುರ: ಲೀ ಸೇನ್ ಲೂಂಗ್ ಅವರು ಮತ್ತೊಮ್ಮೆಸಿಂಗಪುರದ ಪ್ರಧಾನಮಂತ್ರಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಕೋವಿಡ್–19ರಮಧ್ಯೆಯು ನಡೆದ ಚುನಾವಣೆಯಲ್ಲಿ ಲೀ ಅವರ ಪೀಪಲ್ಸ್ ಆ್ಯಕ್ಷನ್ ಪಾರ್ಟಿ (ಪಿಎಪಿ) ಮತ್ತೊಮ್ಮೆ ಸ್ಪಷ್ಟ ಬಹುತಮದೊಂದಿಗೆ ಅಧಿಕಾರಕ್ಕೆ ಬಂದಿದೆ. 93 ಸಂಸತ್ತು ಸ್ಥಾನಗಳಲ್ಲಿ ಲೀ ಅವರ ಪಕ್ಷ 83 ಸ್ಥಾನಗಳನ್ನು ಗೆದ್ದುಕೊಂಡಿದೆ. ಉಳಿದ 10 ಸ್ಥಾನಗಳನ್ನು ವರ್ಕರ್ಸ್ ಪಾರ್ಟಿ ಗೆದ್ದುಕೊಂಡಿದೆ. ಈ ಪಕ್ಷ ಕಳೆದ ಚುನಾವಣೆಯಲ್ಲಿ 6 ಸ್ಥಾನಗಳನ್ನು ಪಡೆದುಕೊಂಡಿತ್ತು.

ಆಡಳಿತ ಪಕ್ಷವು 1965ರಲ್ಲಿ ಸ್ವಾತಂತ್ರ್ಯ ಬಂದ ನಂತರದಿಂದಲೂ ಅಧಿಕಾರದಲ್ಲೇ ಇದೆ. ಈ ಬಾರಿಯ ಚುನಾವಣೆಯಲ್ಲಿ ಒಟ್ಟು ಮನದಾನದ ಶೇ 61.24ರಷ್ಟು ಮತಗಳನ್ನು ಪಕ್ಷ ಪಡೆದುಕೊಂಡರೆ, 2015ರ ಚುನಾವಣೆಯಲ್ಲಿ ಶೇ 69.9ರಷ್ಟು ಮತಗಳನ್ನು ಪಡೆದುಕೊಂಡಿತ್ತು.

‘ನಮಗೆ ಈ ಬಾರಿ ಸ್ಪಷ್ಟ ಬಹುಮತ ಸಿಕ್ಕಿದೆ. ಆದರೆ, ನನ್ನ ಲೆಕ್ಕಾಚಾರದಂತೆ ಶೇಕಡವಾರು ಮತಗಳು ಲಭ್ಯವಾಗಿಲ್ಲ’ ಎಂದು 68 ವರ್ಷದ ಲೀ ಅವರು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.ವರ್ಕರ್ಸ್ ಪಕ್ಷದ ಪ್ರಧಾನ ಕಾರ್ಯದರ್ಶಿ, ಭಾರತೀಯ ಪ್ರೀತಂ ಸಿಂಗ್ ಅವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಎಲ್ಲ ಸಹಕಾರವನ್ನು ನೀಡುವುದಾಗಿ ಲೀ ಹೇಳಿದ್ದಾರೆ.

‘ಕೋವಿಡ್–19ನಿಂದ ಬಂದೊದಗಿರುವ ಸಂಕಷ್ಟವನ್ನು ಹಾಗೂ ಆರ್ಥಿಕ ಹಿಂಜರಿತವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಸಿಂಗಪುರದ ಜನರನ್ನು ಈ ಸಂಕಷ್ಟದಿಂದ ಹೊರತರುವುದಾಗಿ’ ಲೀ ವಾಗ್ದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.