ಸೋಮವಾರ, ಆಗಸ್ಟ್ 2, 2021
28 °C

ಅಮೆರಿಕ: ವಿಮೋಚನಾ ಸ್ಮಾರಕ ತೆರವಿಗೆ ನಿರ್ಧಾರ

ಎಪಿ Updated:

ಅಕ್ಷರ ಗಾತ್ರ : | |

Prajavani

ಬೋಸ್ಟನ್‌: ವಿಮುಕ್ತಿ ಪಡೆದ ಗುಲಾಮನೊಬ್ಬ ಮಂಡಿಯೂರಿ, ಅಬ್ರಹಾಂ ಲಿಂಕನ್‌ ಅವರಿಗೆ ನಮಿಸುವ ಭಂಗಿಯಲ್ಲಿರುವ ಪ್ರತಿಮೆಯೊಂದನ್ನು ತೆರವುಗೊಳಿಸಲು ಅಮೆರಿಕದ ಕಲಾ ಆಯೋಗ ಒಮ್ಮತದ ತೀರ್ಮಾನ ತೆಗೆದುಕೊಂಡಿದೆ.

ದೇಶವು ಜನಾಂಗೀಯ ನ್ಯಾಯದ ಸಮಸ್ಯೆ ಎದುರಿಸುತ್ತಿರುವ ಈಗಿನ ಸಂದರ್ಭದಲ್ಲಿ, ವಿಮೋಚನಾ ಸ್ಮಾರಕ ಅಥವಾ ವಿಮೋಚನಾ ಗುಂಪು ಮತ್ತು ಫ್ರೀಡ್‌ಮ್ಯಾನ್ಸ್‌ ಸ್ಮಾರಕ ಎಂದು ಗುರುತಿಸಲಾಗುವ ಈ ಸ್ಮಾರಕ ಸ್ಥಾಪನೆಯನ್ನು ವಿರೋಧಿಸಿ ಸಾಕಷ್ಟು ದೂರುಗಳು ಬಂದಿದ್ದವು. ವಾಷಿಂಗ್ಟನ್‌ ಡಿಸಿಯಲ್ಲಿ ಇಂಥದ್ದೇ ಒಂದು ಪ್ರತಿಮೆ ಇದ್ದು, ಅದನ್ನು ಮಾದರಿಯಾಗಿಟ್ಟು ಮೂರು ವರ್ಷಗಳ ಹಿಂದೆ ಬಾಸ್ಟನ್‌ನಲ್ಲಿ ಈ ಪ್ರತಿಮೆ ಸ್ಥಾಪಿಸಲಾಗಿತ್ತು.

ಅಮೆರಿಕದಲ್ಲಿ ಗುಲಾಮರ ಮುಕ್ತಿಯ ಸಂಕೇತವಾಗಿ ಇದನ್ನು ಪ್ರತಿಷ್ಠಾಪಿಸಿದ್ದರೂ, ಕಪ್ಪು ವರ್ಣೀಯ ವ್ಯಕ್ತಿಯೊಬ್ಬ ಅಧ್ಯಕ್ಷ ಲಿಂಕನ್‌ ಅವರ ಮುಂದೆ ಮಂಡಿಯೂರಿ ಕುಳಿತಿರುವ ಇದರ ವಿನ್ಯಾಸವು ಅನೇಕರ ಆಕ್ಷೇಪಕ್ಕೆ ಕಾರಣವಾಗಿದೆ.

‘ಈ ಸ್ಮಾರಕವನ್ನು ನೋಡುವಾಗ ಹಲವರಿಗೆ ವೇದನೆಯಾಗುತ್ತಿದೆ ಎಂಬುದು ನನಗೆ ತಿಳಿದುಬಂದಿದೆ. ಯಾವುದೇ ಜನ ಸಮುದಾಯಕ್ಕೆ ನೋವು, ಅಪಮಾನ ಉಂಟುಮಾಡುವ ಕಲಾಕೃತಿಗಳನ್ನು ನಾವು ಹೊಂದಬಾರದು’ ಎಂದು ಕಲಾ ಆಯೋಗದ ಅಧ್ಯಕ್ಷ ಎಕುವಾ ಹಾಲ್ಮ್ಸ್‌ ಹೇಳಿದ್ದಾರೆ.

ಈ ಪ್ರತಿಮೆಯನ್ನು ತೆರವುಗೊಳಿಸಬೇಕು ಎಂಬ ಅರ್ಜಿಗೆ 12,000ಕ್ಕೂ ಹೆಚ್ಚು ಜನರು ಸಹಿ ಮಾಡಿದ್ದಾರೆ. ತೆರವುಗೊಳಿಸುವ ದಿನಾಂಕವನ್ನು ಅಧಿಕಾರಿಗಳು ಇನ್ನೂ ನಿಗದಿ ಮಾಡಿಲ್ಲ. ಜುಲೈ 14ರಂದು ನಡೆಯುವ ಸಭೆಯಲ್ಲಿ ಈ ಕುರಿತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು