ಭಾನುವಾರ, ಆಗಸ್ಟ್ 1, 2021
25 °C

ನ್ಯೂಜಿಲೆಂಡ್: ಉಪಗ್ರಹ ಉಡಾವಣೆ ವಿಫಲ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಾಂಗ್‌ಬೀಚ್‌ (ಅಮೆರಿಕ): ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವುದರಲ್ಲಿ ಪರಿಣತಿ ಪಡೆದಿರುವ ರಾಕೆಟ್‌ ಲ್ಯಾಬ್‌ ಸಂಸ್ಥೆಯು ಶನಿವಾರ ನಡೆಸಿದ್ದ ಉಡಾವಣಾ ಪ್ರಯತ್ನವೊಂದು ವಿಫಲಗೊಂಡಿದೆ. ಏಳು ಉಪಗ್ರಹಗಳನ್ನು ಹೊತ್ತಿದ್ದ ರಾಕೆಟ್‌ ಭೂಮಿಯಿಂದ ಮೇಲೆದ್ದು ಕೆಲವೇ ಕ್ಷಣದಲ್ಲಿ ವಿಫಲಗೊಂಡಿದೆ.

‘ನ್ಯೂಜಿಲೆಂಡ್‌ನ ಮಾಹಿಯದಿಂದ ಏಳು ಉಪಗ್ರಹಗಳ ಉಡಾವಣೆ ನಡೆಸಲಾಗಿತ್ತು. ಉಡಾವಣೆಯ ನಾಲ್ಕು ನಿಮಿಷಗಳ ನಂತರ, ಎರಡನೆ ಹಂತದ ಇಂಧನ ಸುಡುವಿಕೆಯ ಸಂದರ್ಭದಲ್ಲಿ ಸಮಸ್ಯೆ ಕಾಣಿಸಿದೆ. ಈ ಹಿಂದೆ ನಡೆಸಿದ್ದ ಸತತ 11 ಉಡಾವಣೆಗಳು ಯಶಸ್ವಿಯಾಗಿದ್ದವು. ಈ ಬಾರಿಯ ವೈಫಲ್ಯಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ’ ಎಂದು ರಾಕೆಟ್‌ ಲ್ಯಾಬ್‌ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

2021ರವರೆಗೂ ಪ್ರತಿ ತಿಂಗಳೂ ಒಂದೊಂದು ಉಡಾವಣೆಯನ್ನು ನಡೆಸುವುದಾಗಿ ಈ ಸಂಸ್ಥೆ ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು