ಸೋಮವಾರ, ಸೆಪ್ಟೆಂಬರ್ 28, 2020
25 °C

ಡೊನಾಲ್ಡ್‌ ಟ್ರಂಪ್‍ ವರ್ಣಭೇದ ಚಿಂತನೆಯ ‘ಪ್ರಥಮ’ ಅಧ್ಯಕ್ಷ: ಜೋ ಬಿಡೆನ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‍: ಡೊನಾಲ್ಡ್ ಟ್ರಂಪ್‍ ದೇಶ ಕಂಡ ವರ್ಣಭೇದ ನಿಲುವುಳ್ಳ ‘ಪ್ರಥಮ’ ಅಧ್ಯಕ್ಷ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್‍ ಟೀಕಿಸಿದ್ದಾರೆ.

ಸರ್ವೀಸ್‍ ಎಂಪ್ರಾಯಿಸ್‍ ಇಂಟರ್ ನ್ಯಾಷನಲ್‍ ಯೂನಿಯನ್ ಆಯೋಜಿಸಿದ್ದ ವರ್ಚುವಲ್ ಜಾಥಾದಲ್ಲಿ ಮಾತನಾಡುತ್ತಿದ್ದಾಗ, ಸಭಿಕರೊಬ್ಬರು, ‘ಚೀನಾ ವೈರಸ್ ಎಂದು ಟ್ರಂಪ್‍ ಕರೆದಿದ್ದರಿಂದ ಕೊರೊನಾ ಸಮಸ್ಯೆಗೂ ಜನಾಂಗೀಯ ಚಿಂತನೆ ಆವರಿಸಿತು’ ಎಂದು ಗಮನಸೆಳೆದರು. ಅದಕ್ಕೆ ‍‍‍ಪ್ರತಿಕ್ರಿಯಿಸಿದ ಬಿಡೆನ್‌, ‘ಅವರು ವರ್ಣಭೇದ ನೀತಿ ಮನೋಭಾವ ಬೆಳೆಸುತ್ತಿದ್ದಾರೆ’ ಎಂದು ದೂರಿದರು.

‘ವರ್ಣ, ರಾಷ್ಟ್ರೀಯ ಮೂಲದ ಆಧಾರದಲ್ಲಿ ಅವರು ಜನರ ಜೊತೆಗೆ ವ್ಯವಹರಿಸುವುದು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಹಿಂದೆ ಯಾವುದೇ ಅಧ್ಯಕ್ಷರು ಹೀಗೇ ನಡೆದುಕೊಂಡಿರಲಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು