ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ಆತಂಕಕಾರಿ ವೈರಸ್

Last Updated 30 ಜೂನ್ 2020, 9:11 IST
ಅಕ್ಷರ ಗಾತ್ರ

ಶಾಂಘೈ: ಜಗತ್ತೇ ಕೊರೊನಾವೈರಸ್‌ ಸೋಂಕಿನಿಂದ ತತ್ತರಿಸುತ್ತಿರುವ ಹೊತ್ತಲ್ಲಿ ಚೀನಾದಲ್ಲಿ ಮತ್ತೊಂದುಅಪಾಯಕಾರಿ ವೈರಸ್‌ ಕಾಣಿಸಿಕೊಂಡಿದೆ. ಇತ್ತೀಚೆಗಷ್ಟೇ ಈ ವೈರಸ್ ಕಾಣಿಸಿಕೊಂಡಿದ್ದು, ಹಂದಿಗಳೇ ವೈರಸ್ ವಾಹಕಗಳಾಗಿವೆ. ಮನುಷ್ಯನಿಗೂ ಈ ವೈರಸ್ ಸೋಂಕುತಗುಲಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ವೈರಸ್‌ಗಳು ಬೆಳವಣಿಗೆ ಹೊಂದುತ್ತಾ ಹೋಗಿ ಮನುಷ್ಯನಿಂದ ಮನುಷ್ಯನಿಗೆ ಹರಡಿ ಸಾಂಕ್ರಾಮಿಕವಾಗುವ ಸಾಧ್ಯತೆ ಬಗ್ಗೆ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ಇದು ತಕ್ಷಣದ ಸಮಸ್ಯೆ ಏನೂ ಇಲ್ಲ. ಇವು ಮನುಷ್ಯರನ್ನು ಬಾಧಿಸುತ್ತವೆಯೇ ಎಂಬುದನ್ನು ನಿಗಾ ಇರಿಸಬೇಕಿದೆ. ಈ ವೈರಸ್ ಹೊಸತು.ಒಂದು ವೇಳೆ ಇದುಮನುಷ್ಯರಿಗೆ ತಗುಲಿದರೆ ಅದನ್ನು ಎದುರಿಸುವ ಸಾಮರ್ಥ್ಯ ಮನುಷ್ಯರಲ್ಲಿ ಅತ್ಯಂತ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವ ಸ್ಥಿತಿಯಲ್ಲಿ ಇರಬಹುದು.

ಪ್ರೊಸೀಡಿಂಗ್ಸ್ ಆಫ್‌ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ನಿಯತಕಾಲಿಕದಲ್ಲಿ ಪ್ರಕಟವಾದ ವರದಿ ಪ್ರಕಾರ ಹಂದಿಗಳಲ್ಲಿ ಕಂಡು ಬಂದ ವೈರಸ್ ನಿಯಂತ್ರಣಕ್ಕಾಗಿ ಕ್ರಮ ಕೈಗೊಂಡಿದ್ದು, ಹಂದಿ ಸಾಕಾಣಿಕೆ ಕ್ಷೇತ್ರದ ಕಾರ್ಮಿಕರ ಮೇಲೆ ತೀವ್ರ ನಿಗಾ ಇರಿಸಲಾಗಿದೆ.

ಸಾಂಕ್ರಾಮಿಕ ರೋಗದ ಆತಂಕ
ಸದ್ಯ ಕೊರೊನಾವೈರಸ್‌ನಿಂದ ಮುಕ್ತಿ ಪಡೆಯಲು ತಜ್ಞರು ಯತ್ನಿಸುತ್ತಿರುವ ಹೊತ್ತಿನಲ್ಲಿಯೇ ಹೊಸ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೀಡು ಮಾಡಿದೆ. 2009ರಲ್ಲಿ ಹಂದಿ ಜ್ವರ ಜಗತ್ತಿನಲ್ಲಿ ತಲ್ಲಣವನ್ನುಂಟು ಮಾಡಿತ್ತು. ಹೊಸತಾಗಿ ಪತ್ತೆಯಾಗಿರುವ ಈ ವೈರಸ್ ಚೀನಾದಲ್ಲಿ 2009ರಲ್ಲಿ ಕಂಡು ಬಂದ ಹಂದಿ ಜ್ವರದ ವೈರಸ್ ರೀತಿಯೇಇದ್ದರೂ ಕೆಲವು ಬದಲಾವಣೆಯನ್ನೊಳಗೊಂಡಿದೆ. ಸದ್ಯ ಇದರ ಬಗ್ಗೆ ಆತಂಕಪಡುವ ಅಗತ್ಯ ಇಲ್ಲದೇ ಇದ್ದರೂ ಪ್ರೊಫೆಸರ್ ಕಿನ್ ಚೌ ಮತ್ತು ಅವರ ಸಹೋದ್ಯೋಗಿಗಳು ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.

ವೈರಸ್ ಬಗ್ಗೆ ಯಾಕೆ ಎಚ್ಚರ ವಹಿಸಬೇಕು?
ಅಧ್ಯಯನಕಾರರು ಈ ವೈರಸ್‌ನ್ನು G4 EA H1N1 ಎಂದು ಕರೆದಿದ್ದು, ಈ ವೈರಸ್ ಕೋಶಗಳು ದ್ವಿಗುಣವಾಗುತ್ತಾ ಬೆಳೆಯುತ್ತವೆ. ಹಂದಿ ಸಾಕಾಣಿಕೆ ಕಾರ್ಮಿಕರ ಬಗ್ಗೆ 2011- 2018ರ ಅಂಕಿ ಅಂಶಗಳನ್ನು ಪರಿಶೀಲಿಸಿದರೆ ಈ ವೈರಸ್ ಅವರಲ್ಲಿ ಪತ್ತೆಯಾಗಿರುವುದಕ್ಕೆ ಸಾಕ್ಷ್ಯವಿದೆ. ಆದಾಗ್ಯೂ, ಈ ವೈರಸ್ ತಕ್ಷಣಕ್ಕೆ ಸಮಸ್ಯೆ ಉಂಟು ಮಾಡದೇ ಇದ್ದರೂ ಇದನ್ನು ಕಡೆಗಣಿಸುವಂತಿಲ್ಲ ಎಂದು ಅಧ್ಯಯನಕಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT