ಶನಿವಾರ, ಜುಲೈ 31, 2021
26 °C

ನಿಜವಾದ ಅಯೋಧ್ಯೆ ಇರುವುದು ನೇಪಾಳದಲ್ಲಿ, ಶ್ರೀರಾಮ ನೇಪಾಳಿ: ನೇಪಾಳದ ಪ್ರಧಾನಿ ಒಲಿ

ಎಎನ್ಐ Updated:

ಅಕ್ಷರ ಗಾತ್ರ : | |

ಕಠ್ಮಂಡು: ಲಿಪುಲೇಶ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಒಳಗೊಂಡ ರಾಜಕೀಯ ಮತ್ತು ಆಡಳಿತಾತ್ಮಕ ಪರಿಷ್ಕೃತ ನಕಾಶೆಯನ್ನು ಬಿಡುಗಡೆ ಮಾಡಿ ವಿವಾದ ಸೃಷ್ಟಿಸಿದ್ದ ನೇಪಾಳ ಇದೀಗ ರಾಮ ಜನ್ಮಭೂಮಿ ಅಯೋಧ್ಯೆ ಇರುವುದು ನೇಪಾಳದಲ್ಲಿ ಎಂದು ಹೇಳಿದೆ.

ಅಯೋಧ್ಯೆ ಇರುವುದು ನೇಪಾಳದಲ್ಲಿ. ರಾಮ ನೇಪಾಳಿ ಎಂದು ನೇಪಾಳದ ಪ್ರಧಾನಿ ಕೆ.ಪಿ ಶರ್ಮ ಒಲಿ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ನಿಜವಾದ ಅಯೋಧ್ಯೆ ಇರುವುದು ಬಿರ್‌ಗುಂಜ್‌ನ ಪಶ್ಚಿಮ ಭಾಗದಲ್ಲಿರುನ ಥೋರಿ ನಗರದಲ್ಲಿ. ರಾಮ ಭಾರತದಲ್ಲಿ ಹುಟ್ಟಿದ್ದು ಎಂದು ಭಾರತ ಹೇಳುತ್ತಲೇ ಇದ್ದುದರಿಂದ ಸೀತಾದೇವಿ ಭಾರತದ ರಾಜಕುಮಾರ ರಾಮನನ್ನು ವಿವಾಹವಾಗಿದ್ದಳು ಎಂದು ನಾವು ನಂಬಿದ್ದೆವು. ವಾಸ್ತವ ಏನೆಂದರೆ ಅಯೋಧ್ಯೆ ಎಂಬ ಗ್ರಾಮ ಬಿರ್‌ಗುಂಜ್‌ನಲ್ಲಿದೆ ಎಂದು ಪ್ರಧಾನಿ ಒಲಿ ಸೋಮವಾರ ತಮ್ಮ ನಿವಾಸದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಭೂಪಟ ಮಾರ್ಪಡಿಸುವ ಮಸೂದೆಗೆ ನೇಪಾಳ ಅಸ್ತು

ನಕಲಿ ಅಯೋಧ್ಯೆಯೊಂದನ್ನು ಸೃಷ್ಟಿಸಿ ಭಾರತ ಸಾಂಸ್ಕೃತಿಕ ಅತಿಕ್ರಮಣ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಬಾಲ್ಮೀಕಿ ಆಶ್ರಮ ನೇಪಾಳದಲ್ಲಿದಲ್ಲಿದೆ. ರಾಜ ದಶರಥ ಪುತ್ರನನ್ನು ಪಡೆಯಲು ಧಾರ್ಮಿಕ ವಿಧಿಗಳನ್ನು ನೆರವೇರಿಸಿದ್ದು ರಿಧಿಯಲ್ಲಿ. ದಶರಥನ ಮಗ ರಾಮ ಭಾರತೀಯನಲ್ಲ, ಅಯೋಧ್ಯೆ ಇರುವುದು ನೇಪಾಳದಲ್ಲಿ ಎಂದಿದ್ದಾರೆ.

ಆದಾಗ್ಯೂ, ಯಾವುದೇ ಸಂಪರ್ಕ  ವ್ಯವಸ್ಥೆ ಇಲ್ಲದೇ ಇರುವಾಗ ರಾಮ ಸೀತೆಯನ್ನು ಮದುವೆಯಾಗಲು ಜನಕಪುರ್‌ಗೆ ಹೇಗೆ ಬಂದ? ಇದೀಗ ಭಾರತದಲ್ಲಿರುವ ಅಯೋಧ್ಯೆಯಿಂದ ರಾಮ ಜನಕ್‌ಪುರ್‌ಗೆ ಬರುವುದು ಅಸಾಧ್ಯ. ಜನಕ್‌ಪುರ್ ಇರುವುದು ಇಲ್ಲಿ ಮತ್ತು ಅಯೋಧ್ಯೆ ಇರುವುದು ಅಲ್ಲಿ.  ಟೆಲಿಫೋನ್ ಅಥವಾ ಮೊಬೈಲ್ ಇಲ್ಲದ ಸಮಯದಲ್ಲಿ ವಿವಾಹ ಮಾತುಕತೆ ನಡೆಯುತ್ತದೆ. ರಾಮನಿಗೆ ಜನಕ್‌ಪುರ್ ಬಗ್ಗೆ ಹೇಗೆ ಗೊತ್ತು?  ಎಂದು ನೇಪಾಳದ ಪ್ರಧಾನಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನೇಪಾಳ: ಒಲಿ ಭವಿಷ್ಯ ನಿರ್ಧರಿಸುವ ಸಭೆ ಮತ್ತೆ ಮುಂದಕ್ಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು