ಭಾನುವಾರ, ಜೂಲೈ 5, 2020
22 °C

Covid-19 World update | ವಿಶ್ವದಾದ್ಯಂತ ಭಾನುವಾರ ದಾಖಲೆಯ 1.89 ಲಕ್ಷ ಪ್ರಕರಣ

ಎಪಿ Updated:

ಅಕ್ಷರ ಗಾತ್ರ : | |

prajavani

ಜಿನಿವಾ: ವಿಶ್ವದಾದ್ಯಂತ ಕಳೆದ 24 ಗಂಟೆಗಳಲ್ಲಿ 1.89 ಲಕ್ಷ ಕೋವಿಡ್‍ ಪ್ರಕರಣಗಳು ಪತ್ತೆಯಾಗಿವೆ. ಇದು, ಈವರೆಗೆ ದಾಖಲಾಗಿರುವ ಗರಿಷ್ಠ ಪ್ರಕರಣಗಳಾಗಿವೆ ಎಂದು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯೂಎಚ್ಒ) ಪ್ರಕಟಿಸಿದೆ.

ಈ ಹಿಂದೆ 1.83 ಲಕ್ಷ ಪ್ರಕರಣಗಳು ದಾಖಲಾಗಿದ್ದೇ ದಾಖಲೆಯಾಗಿತ್ತು. ಜಗತ್ತಿನಾದ್ಯಂತ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಈ ಅವಧಿಯಲ್ಲಿ ಬ್ರೆಜಿಲ್‍ನಲ್ಲಿ ಗರಿಷ್ಠ 46,800 ಪ್ರಕರಣಗಳು ಮತ್ತು ಅಮೆರಿಕದಲ್ಲಿ 44,400 ಪ್ರಕರಣಗಳು ದಾಖಲಾಗಿವೆ.

ಗರಿಷ್ಠ ಪ್ರಕರಣಗಳ ಸಂಖ್ಯೆಯಲ್ಲಿ ಅಮೆರಿಕ ಮುಂಚೂಣಿಯಲ್ಲಿದ್ದು, ಅಲ್ಲಿ ಒಟ್ಟಾರೆ 24.5 ಲಕ್ಷ ಜನರಿಗೆ ಸೋಂಕು ತಗುಲಿದೆ ಎಂದು ವಿಶ್ವ ಆರೋಗ್ಯ ಸಂಘಟನೆಯ ವರದಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು