ವಿಜಯಪುರ: ‘ಎಲ್ಲರೂ ಚುನಾವಣೆ ವೇಳೆ ಹಣ ಹಂಚಿ, ಆಮಿಷ ಒಡ್ಡುವರು. ಆದರೆ, ನಾನು ದೀಪಾವಳಿ ಆಚರಿಸಲು ಕ್ಷೇತ್ರದ 11 ಸಾವಿರ ಕುಟುಂಬಗಳಿಗೆ ತಲಾ ₹2 ಸಾವಿರ ನೀಡಲು ನಿರ್ಧರಿಸಿದ್ದೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ನಗರದಲ್ಲಿ ಸೋಮವಾರ ರಾತ್ರಿ ನಡೆದ ಸರ್ವ ಗಜಾನನ ಮಂಡಳಿಗಳಿಗೆ ಸನ್ಮಾನ ಸಮಾವೇಶದಲ್ಲಿ ಮಾತನಾಡಿದ ಅವರು, ‘ಸನಾತನ ಧರ್ಮ ಯಾರಿಂದಲೂ ನಾಶ ಪಡಿಸಲು ಆಗದು. ಸಾಕಷ್ಟು ಜನ ಬಂದು ಹೋದರೂ ಏನು ಮಾಡಲು ಆಗಿಲ್ಲ. ಉಳಿದ ಧರ್ಮಗಳಿಗೆ ಸಂಸ್ಥಾಪಕರು ಇದ್ದಾರೆ. ಆದರೆ, ನಮ್ಮ ಸನಾತನ ಹಿಂದೂ ಧರ್ಮ ದೇವರಿಂದ ಹುಟ್ಟಿಕೊಂಡಿದೆ. ಬ್ರಹ್ಮ, ವಿಷ್ಣು, ಮಹೇಶ್ವರರೇ ಸಂಸ್ಥಾಪಕರು. ನಮ್ಮ ಧರ್ಮ ಯಾರಿಗೂ ಅನ್ಯಾಯ ಮಾಡಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.