ಮಂಗಳವಾರ, ಮೇ 18, 2021
28 °C

Apple Event: ಹೊಸ ಐಫೋನ್ 12, ಐಪ್ಯಾಡ್ ಪ್ರೊ, ಏರ್‌ಟ್ಯಾಗ್, ಐಮ್ಯಾಕ್ ಬಿಡುಗಡೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

Apple.Inc

ಬೆಂಗಳೂರು: ಆ್ಯಪಲ್ ಮಂಗಳವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ನೂತನ ಸರಣಿಯ ಐಮ್ಯಾಕ್, ಐಪ್ಯಾಡ್ ಪ್ರೋ, ಏರ್‌ಟ್ಯಾಗ್, ಆ್ಯಪಲ್ ಟಿವಿ 4K ಮತ್ತು ಐಫೋನ್ 12 ಪರ್ಪಲ್ ಆವೃತ್ತಿ ಬಿಡುಗಡೆ ಮಾಡಿದೆ.

ಮಾರುಕಟ್ಟೆಗೆ ಬಹುನಿರೀಕ್ಷಿತ ಏರ್‌ಟ್ಯಾಗ್

ಆ್ಯಪಲ್ ಬ್ಲೂಟೂತ್ ಟ್ರ್ಯಾಕರ್ ಏರ್‌ಟ್ಯಾಗ್, ಕೊನೆಗೂ ಬಿಡುಗಡೆಯಾಗಿದೆ. ವೃತ್ತಾಕಾರದ ವಿನ್ಯಾಸ ಹೊಂದಿರುವ ಏರ್‌ಟ್ಯಾಗ್, ದೇಶದಲ್ಲಿ ₹3,190 ದರ ಹೊಂದಿದೆ. ಏಪ್ರಿಲ್ 23ರಿಂದ ಪ್ರಿ ಬುಕಿಂಗ್ ಲಭ್ಯವಿದ್ದು, ಏ. 30ಕ್ಕೆ ದೊರೆಯಲಿದೆ.

ಹೊಸ ಬಣ್ಣದಲ್ಲಿ ಐಮ್ಯಾಕ್

ಆ್ಯಪಲ್ M1 ಚಿಪ್ ಸಹಿತ, ಆಕರ್ಷಕ ವಿನ್ಯಾಸದಲ್ಲಿ ಹೊಸ ಐಮ್ಯಾಕ್ ಸರಣಿ ಬಿಡುಗಡೆಯಾಗಿದೆ. 24 ಇಂಚಿನ 4.5K ರೆಟಿನಾ ಡಿಸ್‌ಪ್ಲೇ ಇದರ ವಿಶೇಷತೆಯಾಗಿದ್ದು, ಏಳು ವಿವಿಧ ಬಣ್ಣಗಳ ಪ್ಯಾನಲ‌್‌ನಲ್ಲಿ ದೊರೆಯಲಿದೆ. ದೇಶದಲ್ಲಿ ಹೊಸ ಸರಣಿಯ ಐಮ್ಯಾಕ್, ₹1,19,900 ಆರಂಭಿಕ ದರ ಹೊಂದಿದೆ.

ಐಪ್ಯಾಡ್ ಪ್ರೊ

ಆ್ಯಪಲ್ ಹೊಸ ಐಪ್ಯಾಡ್ ಪ್ರೊ ಸರಣಿ, ಈಗ M1 ಚಿಪ್ ಸಹಿತ ಲಭ್ಯವಿದೆ. 12.9 ಇಂಚಿನ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇ ಇದರ ವಿಶೇಷತೆಯಾಗಿದ್ದು, ₹71,900 ಆರಂಭಿಕ ದರ ಹೊಂದಿದೆ. ಅಲ್ಲದೆ, 2TB ವರೆಗಿನ ಸ್ಟೋರೇಜ್ ಸಹಿತ ದೊರೆಯುತ್ತದೆ.

ಐಫೋನ್ 12

ಆ್ಯಪಲ್ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಪರಿಚಯಿಸಿದ್ದ ನೂತನ ಐಫೋನ್ 12 ಸರಣಿಯಲ್ಲಿ ಈ ಬಾರಿ ಪರ್ಪಲ್ ಬಣ್ಣದ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಐಫೋನ್ 12 ಮಿನಿ ಕೂಡ ಪರ್ಪಲ್ ಆವೃತ್ತಿಯಲ್ಲಿ ದೊರೆಯಲಿದ್ದು, ₹69,900 ಆರಂಭಿಕ ದರ ಹೊಂದಿದೆ.

ಆ್ಯಪಲ್ ಟಿವಿ 4K

A12 ಬಯಾನಿಕ್ ಚಿಪ್ ಸಹಿತ ಆ್ಯಪಲ್ ಟಿವಿ 4K, ಹೊಸ ರಿಮೋಟ್ ಜತೆಗೆ ಮಾರುಕಟ್ಟೆ ಪ್ರವೇಶಿಸಿದೆ. 32GB ಆರಂಭಿಕ ಆವೃತ್ತಿಗೆ ₹18,900 ದರ ಹೊಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು