ಸೋಮವಾರ, ಸೆಪ್ಟೆಂಬರ್ 27, 2021
21 °C

iPhone 13: ಆ್ಯಪಲ್ ಹೊಸ ಐಫೋನ್ ಬೆಲೆ ₹69,900 ರಿಂದ ಆರಂಭ!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Apple iPhone 13

ಬೆಂಗಳೂರು: ಟೆಕ್ ಲೋಕದ ಜನಪ್ರಿಯ ಕಂಪನಿ ಆ್ಯಪಲ್, ಹೊಸ ಐಫೋನ್ 13 ಸರಣಿಯನ್ನು ಪರಿಚಯಿಸಿದೆ.

ಐಫೋನ್ 13 ಸರಣಿಯಲ್ಲಿ ನಾಲ್ಕು ನೂತನ ಮಾದರಿಗಳು ದೊರೆಯಲಿದೆ. ಕಳೆದ ವರ್ಷ ಪರಿಚಯಿಸಿದ್ದ ಐಫೋನ್ 12ಗೆ ಹೋಲಿಸಿದರೆ, ಬ್ಯಾಟರಿ, ಡಿಸ್‌ಪ್ಲೇ ಮತ್ತು ಕ್ಯಾಮರಾ, ಆ್ಯಪಲ್ ಚಿಪ್ ಹಾಗೂ ತಾಂತ್ರಿಕ ವೈಶಿಷ್ಟ್ಯಗಳಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿದೆ ಎಂದು ಆ್ಯಪಲ್ ಹೇಳಿದೆ.

ಯಾವೆಲ್ಲ ಮಾದರಿ ಬಿಡುಗಡೆ?

ಆ್ಯಪಲ್ ಐಫೋನ್ 13 ಸರಣಿಯಲ್ಲಿ ಹೊಸದಾಗಿ, ಐಫೋನ್ 13 ಮಿನಿ, ಐಫೋನ್ 13, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಬಿಡುಗಡೆಯಾಗಿದೆ. ಈ ಬಾರಿ ಆರಂಭಿಕ ಆವೃತ್ತಿಯಲ್ಲಿ 128 GB ಸ್ಟೋರೇಜ್ ಪರಿಚಯಿಸಿರುವ ಆ್ಯಪಲ್, ಟಾಪ್ ಆವೃತ್ತಿಯಲ್ಲಿ 1TB ಮೆಮೊರಿ ಅಳವಡಿಸಿದೆ.

ಯಾವಾಗ ಲಭ್ಯ?

ಹೊಸ ಸರಣಿಯ ಆ್ಯಪಲ್ ಐಫೋನ್ ಸೆ. 17ರಿಂದ ಪ್ರಿ ಬುಕಿಂಗ್ ಲಭ್ಯವಿದ್ದು, ಸೆ. 24ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. ಆ್ಯಪಲ್ ಇಂಡಿಯಾ ಆನ್‌ಲೈನ್ ಸ್ಟೋರ್, ಪ್ರಮುಖ ರಿಟೇಲ್ ಮತ್ತು ಆನ್‌ಲೈನ್ ಶಾಪಿಂಗ್ ತಾಣಗಳ ಮೂಲಕ ನೂತನ ಐಫೋನ್ ಲಭ್ಯವಾಗಲಿದೆ.

ಬೆಲೆ ವಿವರ (ಸ್ಟೋರೇಜ್ ಆವೃತ್ತಿಗೆ ಅನುಗುಣವಾಗಿ)

ಆ್ಯಪಲ್ ಐಫೋನ್ 13 ಮಿನಿ

₹69,900 - 128 GB

₹79,900 - 256 GB

₹99,900 - 512 GB

ಆ್ಯಪಲ್ ಐಫೋನ್ 13

₹79,900 - 128 GB

₹89,900 - 256 GB

₹109,900 - 512 GB 

ಆ್ಯಪಲ್ ಐಫೋನ್ 13 ಪ್ರೊ

₹1,19,900 - 128 GB

₹1,29,900 - 256 GB

₹1,49,900 - 512 GB

₹1,69,900 - 1 TB

ಆ್ಯಪಲ್ ಐಫೋನ್ 13 ಪ್ರೊ ಮ್ಯಾಕ್ಸ್

₹1,29,900 - 128 GB

₹1,39,900 - 256 GB

₹1,58,900 - 512 GB

₹1,79,900 - 1 TB 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು