ಭಾನುವಾರ, ನವೆಂಬರ್ 28, 2021
19 °C

ಮ್ಯಾಕ್‌ಬುಕ್, ಐಫೋನ್ ಸ್ವಚ್ಛಗೊಳಿಸಲು ಆ್ಯಪಲ್ ಪಾಲಿಶಿಂಗ್ ಬಟ್ಟೆ: ಬೆಲೆ ₹1,900!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Apple India

ಬೆಂಗಳೂರು: ಆ್ಯಪಲ್ ಕಂಪನಿಯ ಮ್ಯಾಕ್‌ಬುಕ್, ಐಫೋನ್ ಮತ್ತು ಇತರ ಉಪಕರಣಗಳನ್ನು ಸ್ವಚ್ಛಗೊಳಿಸಲು ವಿನೂತನ ‘ಪಾಲಿಶಿಂಗ್ ಕ್ಲೋತ್’ ಬಿಡುಗಡೆಯಾಗಿದೆ.

ಆ್ಯಪಲ್ ಪರಿಚಯಿಸಿರುವ ಪಾಲಿಶಿಂಗ್ ಬಟ್ಟೆಗೆ ದೇಶದಲ್ಲಿ ₹1,900 ದರ ನಿಗದಿಪಡಿಸಲಾಗಿದೆ.

ಮೆದುವಾದ, ಗುಣಮಟ್ಟದ ಬಟ್ಟೆ ಬಳಸಿ ಈ ಪಾಲಿಶಿಂಗ್ ಕ್ಲೋತ್ ತಯಾರಿಸಲಾಗಿದೆ ಎಂದು ಆ್ಯಪಲ್ ಕಂಪನಿ ಹೇಳಿಕೊಂಡಿದೆ.

ಆ್ಯಪಲ್ ಮ್ಯಾಕ್‌ಬುಕ್, ಐಪ್ಯಾಡ್ ಮತ್ತು ಐಫೋನ್ ಹಾಗೂ ಇತರ ಸಾಧನಗಳನ್ನು ಪಾಲಿಶಿಂಗ್ ಕ್ಲೋತ್ ಬಳಸಿ ಸ್ವಚ್ಛ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಹೊಸ ಮ್ಯಾಕ್‌ಬುಕ್ ಪ್ರೊ ಬಿಡುಗಡೆಯ ಜತೆಗೆ ನೂತನ ಪಾಲಿಶಿಂಗ್ ಕ್ಲೋತ್ ಕೂಡ ಬಿಡುಗಡೆಯಾಗಿದೆ. ಅಲ್ಲದೆ, ಖರೀದಿಗೆ ತಿಂಗಳಿಗೆ ₹224 ದರದ ಇಎಂಐ ಪ್ಲ್ಯಾನ್ ಕೂಡ ಲಭ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು