ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Apple Event: ಹೊಸ ಐಪ್ಯಾಡ್, ಐಪ್ಯಾಡ್ ಪ್ರೊ, ಟಿವಿ ಬಿಡುಗಡೆ ಮಾಡಿದ ಆ್ಯಪಲ್

Last Updated 19 ಅಕ್ಟೋಬರ್ 2022, 12:09 IST
ಅಕ್ಷರ ಗಾತ್ರ

ಬೆಂಗಳೂರು: ಟೆಕ್‌ ದೈತ್ಯ ಆ್ಯಪಲ್‌ ಕಂಪನಿ ಭಾರತದಲ್ಲಿ ಬಹು ನಿರೀಕ್ಷಿತ ಹೊಸ ಸರಣಿಯ ಐಪ್ಯಾಡ್, ಐಪ್ಯಾಡ್ ಪ್ರೊ ಮತ್ತುಟಿವಿಬಿಡುಗಡೆ ಮಾಡಿದೆ.

10th Gen ಐಪ್ಯಾಡ್ ಮತ್ತು 5th Gen ಐಪ್ಯಾಡ್ ಪ್ರೊ, M2 ಸಿಲಿಕಾನ್ ಪ್ರೊಸೆಸರ್ ಸಹಿತ ಹೊಸ ಮ್ಯಾಕ್‌ ಸರಣಿಯನ್ನು ಆ್ಯಪಲ್ ಮಾರುಕಟ್ಟೆಗೆ ಪರಿಚಯಿಸಿದೆ.

10ನೇ ತಲೆಮಾರಿನ ಹೊಸ ಐಪ್ಯಾಡ್
9ನೇ ತಲೆಮಾರಿನ ಐಪ್ಯಾಡ್‌ಗೆ ಹೋಲಿಸಿದರೆ 10ನೇ ತಲೆಮಾರಿನ ಐಪ್ಯಾಡ್‌ ಅನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ. ಪರದೆಯ ಕೆಳಭಾಗದಲ್ಲಿರುವ ತೆಗೆಯಲಾಗಿದೆ. ಪವರ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಬದಲಾಯಿಸಲಾಗಿದೆ. ಇದು ಐಪ್ಯಾಡ್ ಏರ್ ಮತ್ತು ಐಪ್ಯಾಡ್ ಪ್ರೊನಂತೆಯೇ ಚೌಕಾಕಾರದ ವಿನ್ಯಾಸ ಒಳಗೊಂಡಿದೆ. ದೊಡ್ಡ 10.9-ಇಂಚಿನ ಪರದೆಯೊಂದಿಗೆ, ಲೈಟ್ನಿಂಗ್ ಕನೆಕ್ಟರ್‌ ಸ್ಥಳದಲ್ಲಿ ಯುಎಸ್‌ಬಿ-‌ಸಿ, ಹಳದಿ, ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ವಿನ್ಯಾಸಗೊಳಿಸಲಾಗಿದೆ.

ವೈಫೈ ಮಾತ್ರ ಮತ್ತು ವೈಫೈ + 5G ಸೆಲ್ಯುಲಾರ್ ಸೇರಿದಂತೆ ವಿವಿಧ ಕಾನ್ಫಿಗರೇಶನ್‌ಗಳನ್ನು ಆ್ಯಪಲ್‌ ಮಾರಾಟ ಮಾಡುತ್ತಿದೆ. ಇದರ ಆರಂಭಿಕ ಬೆಲೆ ₹44,900 ರಷ್ಟಿರಲಿದೆ. ಈಗಾಗಲೇ ಪ್ರೀ ಬುಕ್ಕಿಂಗ್ ಆರಂಭವಾಗಿದೆ ಮತ್ತು ಅಕ್ಟೋಬರ್ 26ರಿಂದ (ಬುಧವಾರ) ಅಂಗಡಿಗಳಲ್ಲಿ ಲಭ್ಯವಿರುತ್ತದೆ.

**


ಆ್ಯಪಲ್‌ ಐಪ್ಯಾಡ್‌ ಪ್ರೊ
ಐಪ್ಯಾಡ್‌ ಪ್ರೊ ಮಾದರಿಗಳು 11 ಇಂಚಿನ ಮತ್ತು 12.9 ಇಂಚಿನ ಡಿಸ್‌ಪ್ಲೇ ಗಾತ್ರದ ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ 11 ಇಂಚಿನ ಐಪ್ಯಾಡ್‌ ಪ್ರೊ 1688x2388 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 120Hz ವರೆಗೆ ರಿಫ್ರೆಶ್ ರೇಟ್‌ ಬೆಂಬಲಿಸುವ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇ ಇದಾಗಿದೆ. ಇನ್ನು 12.9 ಇಂಚಿನ ಐಪ್ಯಾಡ್‌ ಪ್ರೊ ಆಯ್ಕೆಯು 2048x2732 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿದೆ. ಜೊತೆಗೆ ಲಿಕ್ವಿಡ್ ರೆಟಿನಾ XDR ಮಿನಿ-LED ಡಿಸ್‌ಪ್ಲೇ ಹೊಂದಿದೆ. ಅಲ್ಲದೆ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ.

ಇನ್ನು ಈ ಎರಡೂ ಡಿಸ್‌ಪ್ಲೇ ಗಾತ್ರದ ಐಪ್ಯಾಡ್‌ ಪ್ರೊ ಮಾಡೆಲ್‌ಗಳು ಕೂಡ ಟ್ರೂ ಟೋನ್ ಮತ್ತು P3 ವೈಡ್ ಕಲರ್ ಗ್ಯಾಮಟ್ ರಿ ಪ್ರೊಡಕ್ಷನ್‌ ಅನ್ನು ಬೆಂಬಲಿಸುತ್ತವೆ. ಇದು ಆಪಲ್‌ M2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ

ಐಪ್ಯಾಡ್‌ ಪ್ರೊ ಡ್ಯುಯೆಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ವೈಡ್-ಆ್ಯಂಗಲ್ ಲೆನ್ಸ್‌ ಮತ್ತು ಎರಡನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಅನ್ನು ಹೊಂದಿದೆ. ಜೊತೆಗೆ LiDAR ಸ್ಕ್ಯಾನರ್ ಅನ್ನು ಒಳಗೊಂಡಿದೆ. ಇದಲ್ಲದೆ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಸೆಲ್ಫಿ ಕ್ಯಾಮೆರಾವನ್ನು ಕೂಡ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ
ಐಪ್ಯಾಡ್‌ ಪ್ರೊ 11 ಇಂಚಿನ ವೈ-ಫೈ ಮಾದರಿಗೆ ₹81,900 ಬೆಲೆ ಇದೆ. ಇದರ ವೈ-ಫೈ + ಸೆಲ್ಯುಲಾರ್ ಮಾದರಿಗೆ ₹96,900 ದರ ನಿಗದಿಪಡಿಸಲಾಗಿದೆ. ಇನ್ನು ಐಪ್ಯಾಡ್‌ ಪ್ರೊ 12.9 ಇಂಚಿನ ವೈ-ಫೈ ಮಾದರಿಗೆ ₹1,12,900 ದರ ಪಡೆದಿದೆ. ಇನ್ನು ವೈ-ಫೈ + ಸೆಲ್ಯುಲಾರ್ ಮಾದರಿಗೆ ₹1,27,900 ದರ ನಿಗದಿಪಡಿಸಲಾಗಿದೆ. ಇವುಗಳು ಸಿಲ್ವರ್ ಮತ್ತು ಸ್ಪೇಸ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈಗಾಗಲೇ ಪ್ರೀ ಬುಕ್ಕಿಂಗ್ ಆರಂಭವಾಗಿದೆ ಮತ್ತು ಅಕ್ಟೋಬರ್ 26ರಿಂದ (ಬುಧವಾರ) ಅಂಗಡಿಗಳಲ್ಲಿ ಲಭ್ಯವಿರುತ್ತದೆ.

**


ಆ್ಯಪಲ್ ಟಿವಿ 4K (Apple TV 4K)

ಆ್ಯಪಲ್‌ ಕಂಪೆನಿ ಭಾರತದಲ್ಲಿ ಹೊಸ ಟಿವಿ 4K ಲಾಂಚ್‌ ಮಾಡಿದೆ. ಇದು A15 ಬಯೋನಿಕ್ ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಟಿವಿ ಬಾಕ್ಸ್‌ HDR10 ಪ್ಲಸ್ ಮತ್ತು ಡಾಲ್ಬಿ ವಿಷನ್‌ ಪ್ಲೇಬ್ಯಾಕ್ ಅನ್ನು ನೀಡಲಿದೆ. ಅಲ್ಲದೆ ಆಪಲ್‌ ಸಿರಿ-ಬೆಂಬಲಿತ ರಿಮೋಟ್ ಕಂಟ್ರೋಲ್ ಅನ್ನು ಹೊಂದಿದೆ. ಆದರಿಂದ ವಾಯ್ಸ್‌ ಕಂಟ್ರೋಲ್‌ ಮೂಲಕ ನಿಮ್ಮ ಮೆಚ್ಚಿನ ಶೋಗಳನ್ನು ವೀಕ್ಷಿಸಲು ನಿಮಗೆ ಅವಕಾಶ ಸಿಗಲಿದೆ.

ಈ ಟಿವಿ ಬಾಕ್ಸ್‌ 4K ವಿಡಿಯೊ ಪ್ಲೇಬ್ಯಾಕ್, 4K ವಿಡಿಯೊ ಜೊತೆಗೆ HDR ಸ್ಟ್ರೀಮಿಂಗ್ ಬೆಂಬಲವನ್ನು ಸಹ ನೀಡಲಿದೆ. ನೀವು ಸಿನಿಮಾಗಳನ್ನು ಡೌನ್‌ಲೋಡ್‌ ಮಾಡುವುದಕ್ಕಾಗಿ ಇದರಲ್ಲಿ 128GB ಸ್ಟೋರೇಜ್‌ ಸಾಮರ್ಥ್ಯವನ್ನು ಕೂಡ ನೀಡಲಾಗಿದೆ. ಇದು A15 ಬಯೋನಿಕ್ ಚಿಪ್‌ಸೆಟ್‌ ಪ್ರೊಸೆಸರ್‌ ವೇಗವನ್ನು ಹೊಂದಿದ್ದು, tvOS 16ನಲ್ಲಿ ಕಾರ್ಯನಿರ್ವಹಿಸಲಿದೆ.

ಆ್ಯಪಲ್‌ ಟಿವಿ 4K ಸಿರಿಯನ್ನು ಬೆಂಬಲಸಲಿದೆ. ಇದಕ್ಕಾಗಿ ಸಿರಿ ಬಟನ್ ಹೊಂದಿರುವ ಹೊಸ ರಿಮೋಟ್‌ ಅನ್ನು ಕೂಡ ನೀಡಲಾಗಿದೆ. ಇದರಿಂದ ವಾಯ್ಸ್‌ ಕಂಟ್ರೋಲ್‌ ಮೂಲಕವೇ ನಿಮ್ಮ ಆಯ್ಕೆಯ ಚಲನಚಿತ್ರ ಇಲ್ಲವೇ ಶೋ ಅನ್ನು ಪ್ಲೇ ಮಾಡಬಹುದಾಗಿದೆ. ಇದಲ್ಲದೆ ನೀವು ಶೋಗಳು ಹಾಗೂ ಸಿನಿಮಾಗಳನ್ನು ಡೌನ್‌ಲೋಡ್‌ ಮಾಡಲು ಬಯಸಿದರೆ ಇದಕ್ಕಾಗಿ 128GB ವರೆಗಿನ ಸ್ಟೋರೇಜ್‌ ಅನ್ನು ನೀಡಲಾಗಿದೆ. ಇನ್ನು ಈ ಟಿವಿ ಬಾಕ್ಸ್‌ ಶೇರ್‌ಪ್ಲೇಗೆ ಕೂಡ ಅವಕಾಶ ನೀಡಿದೆ. ಜೊತೆಗೆ ನೇರವಾಗಿ ಆರ್ಕೇಡ್ ಗೇಮ್‌ಗಳನ್ನು ಪ್ಲೇ ಮಾಡಲು ಅನುಮತಿಸುವ ಟಿವಿಗಾಗಿ ಆ್ಯಪಲ್‌ ಆರ್ಕೇಡ್ ಅನ್ನು ಸಹ ಹೊಂದಿದೆ.

ಇದು ಡಾಲ್ಬಿ ಅಟ್ಮಾಸ್ ಮತ್ತು ಡಾಲ್ಬಿ ಡಿಜಿಟಲ್ 7.1/5.1 ಸರೌಂಡ್ ಸೌಂಡ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 2×2 MIMO ಜೊತೆಗೆ ವೈಫೈ 6 ಮತ್ತು ಬ್ಲೂಟೂತ್ 5.0 ಅನ್ನು ಹೊಂದಿದೆ. ಇದಲ್ಲದೆ ವೈಫೈ ಮಾದರಿಯಲ್ಲಿ HDMI 2.1 ಪೋರ್ಟ್ ಮತ್ತು ಪವರ್‌ ಸಪ್ಲೇ ಪವರ್ ಅನ್ನು ಕೂಡ ನೀಡಲಾಗಿದೆ. ಜೊತೆಗೆ ಇಂಟರ್ನೆಟ್‌ ಮಾದರಿಯಲ್ಲಿ (128GB) ಮೀಸಲಾದ ಗಿಗಾಬಿಟ್ ಇಂಟರ್ನೆಟ್‌ ಪೋರ್ಟ್ ಅನ್ನು ಕೂಡ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಆ್ಯಪಲ್‌ ಟಿವಿ 4K ಎರಡು ರೂಪಾಂತರದ ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ ವೈಫೈ (64GB) ಮಾದರಿಗೆ ₹14,900 ಬೆಲೆ ಹೊಂದಿದೆ. ಆದರೆ ವೈಫೈ ಪ್ಲಸ್‌ ಇಂಟರ್ನೆಟ್‌ (128GB) ಮಾದರಿಗೆ ₹16,900 ದರ ನಿಗದಿಪಡಿಸಲಾಗಿದೆ. ಇನ್ನು ಈ ಡಿವೈಸ್‌ AppleCare+ ನೊಂದಿಗೆ ಬರುತ್ತದೆ. ಈ ಡಿವೈಸ್ ನವೆಂಬರ್ 4ರಿಂದ ಭಾರತದಲ್ಲಿ ಮಾರಾಟಕ್ಕೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT