ಬೆಂಗಳೂರು: ಸೆಪ್ಟೆಂಬರ್ 14 ಮಂಗಳವಾರದಂದು ಆ್ಯಪಲ್ ವರ್ಷದ ದೊಡ್ಡ ಇವೆಂಟ್ ನಡೆಯಲಿದ್ದು, ಹೊಸ ಐಫೋನ್ ಸರಣಿ ಘೋಷಣೆಯಾಗಲಿದೆ.
ಈ ಬಾರಿ ಆ್ಯಪಲ್ ಐಫೋನ್ 13 ಬಿಡುಗಡೆಯಾಗಬಹುದು ಎನ್ನಲಾಗಿದ್ದು, ಹೊಸ ಮಾದರಿಯಲ್ಲಿ ನಾಲ್ಕು ಆವೃತ್ತಿಗಳು ದೊರೆಯುವ ನಿರೀಕ್ಷೆಯಿದೆ.
ಅದರಲ್ಲೂ, ಆ್ಯಪಲ್ ಈ ಬಾರಿ ಬಿಡುಗಡೆ ಮಾಡುತ್ತಿರುವ ಐಫೋನ್ ಸರಣಿಯಲ್ಲಿ ಆರಂಭಿಕ ಆವೃತ್ತಿಯಲ್ಲಿ 128GB ಮೆಮೊರಿ ಸಾಮರ್ಥ್ಯವನ್ನು ಪರಿಚಯಿಸಲಿದೆ. ಜತೆಗೆ ಐಪೋನ್ 13 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಆವೃತ್ತಿಯಲ್ಲಿ 1 TB ಸ್ಟೋರೇಜ್ ಆಯ್ಕೆ ಗ್ರಾಹಕರಿಗೆ ದೊರೆಯುವ ನಿರೀಕ್ಷೆಯಿದೆ.
ಆ್ಯಪಲ್ ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಈಗಾಗಲೇ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಇದೇ ಮೊದಲ ಬಾರಿಗೆ ಆ್ಯಪಲ್ ಗರಿಷ್ಠ ಸ್ಟೋರೇಜ್ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುತ್ತಿದೆ ಎನ್ನಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.