ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಗೇಮಿಂಗ್ ಪ್ರಿಯರಿಗೆ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ಏಸಸ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ASUS WEB Screengrab

ಬೆಂಗಳೂರು: ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಬಯಸುವವರಿಗೆ ಏಸಸ್ ಹೊಸ ಆಯ್ಕೆಗಳನ್ನು ಒದಗಿಸುತ್ತಿದೆ.

ಏಸಸ್ ರಾಗ್ ಸ್ಮಾರ್ಟ್‌ಫೋನ್ ಹೊಸದಾಗಿ ರಾಗ್ ಫೋನ್ 5s ಸರಣಿಯನ್ನು ಕಂಪನಿ ಪರಿಚಯಿಸಿದೆ.

ಏಸಸ್ ರಾಗ್ ಫೋನ್ 5 ಮತ್ತು ರಾಗ್ ಫೋನ್ 5s ಪ್ರೊ ಅನ್ನು ಏಸಸ್ ಬಿಡುಗಡೆ ಮಾಡುತ್ತಿದೆ. ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 5G ಸಂಪರ್ಕ ಮತ್ತು ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 888 ಪ್ಲಸ್ ಪ್ರೊಸೆಸರ್ ಇದೆ.

6.78 ಇಂಚಿನ ಡಿಸ್‌ಪ್ಲೇ, 18GB LPDDR5 ವರೆಗಿನ RAM ಏಸಸ್ ಫೋನ್‌ಗಳ ವಿಶೇಷತೆಯಾಗಿದೆ. 128 GB, 256 GB, ಮತ್ತು 512 GBವರೆಗಿನ ಸ್ಟೋರೇಜ್, ಆಂಡ್ರಾಯ್ಡ್ 11 ಆಧಾರಿತ ರಾಗ್ ಯುಐ ಇರಲಿದೆ.

ಏಸಸ್ ನೂತನ ಸ್ಮಾರ್ಟ್‌ಫೋನ್‌ಗಳು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ದೇಶದ ಮಾರುಕಟ್ಟೆಯಲ್ಲಿ ಲಭ್ಯತೆ ಮತ್ತು ಬೆಲೆ ವಿವರ ಲಭ್ಯವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು