ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೀರ್ಘ ಬಾಳಿಕೆಯ ಬ್ಯಾಟರಿ, ವರ್ಧಿತ ANC: boAt Airdopes 131 Elite ANC ಬಿಡುಗಡೆ

Published 25 ಜೂನ್ 2024, 13:50 IST
Last Updated 25 ಜೂನ್ 2024, 13:50 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ boAt ಸಂಸ್ಥೆಯು ಕೈಗೆಟುಕುವ ಬೆಲೆಯಲ್ಲಿ ವರ್ಧಿತ ANC(ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್) ಮತ್ತು ದೀರ್ಘ ಬ್ಯಾಟರಿ ಬಾಳಿಕೆಯ ಅಗ್ಗದ ದರದ ವೈರ್‌ಲೆಸ್ Airdopes 131 Elite ANC ಎಂಬ ಇಯರ್ ಬಡ್ಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಕೇವಲ ₹1,499 ಬೆಲೆಯ ಈ ಇಯರ್ ಬಡ್ಸ್ ಫ್ಲಿಪ್‌ ಕಾರ್ಟ್‌ ಮತ್ತು boAtನ ಅಧಿಕೃತ ಜಾಲತಾಣದಲ್ಲಿ ಖರೀದಿಸಲು ಲಭ್ಯವಿದೆ. ಆ್ಯಕ್ಟಿವ್ ಬ್ಲಾಕ್, ಆ್ಯಕ್ಟಿವ್ ಟೀಲ್, ಆಕ್ಟಿವ್ ವೈಟ್ ಮತ್ತು ಡಾನ್ ಬ್ಲೂ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ.

ಅಸಾಧಾರಣ ಬೆಲೆ, ಪ್ರೀಮಿಯಂ ಫೀಚರ್‌ಗಳು

boAt Airdopes 131 Elite ANC ಅಗ್ಗದ ಬೆಲೆಯ ವೈರ್‌ಲೆಸ್ ಇಯರ್ ಬಡ್ಸ್ ಆಗಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದೆ ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತದೆ. 13 ಎಂಎಂ ಡೈನಾಮಿಕ್ ಡ್ರೈವರ್ಸ್ ಜೊತೆಗೆ ಬ್ಲೂಟೂತ್ ವಿ5.3 ಚಿಪ್‌ಸೆಟ್‌ ಇದರಲ್ಲಿದೆ. ಗೇಮಿಂಗ್, ಮ್ಯೂಸಿಕ್ ಮತ್ತು ಸಿನಿಮಾ ಅನುಭವಕ್ಕಾಗಿ ಅತ್ಯುತ್ತಮ ಗುಣಮಟ್ಟದ ಕೇಳುವಿಕೆಯ ಅನುಭವವನ್ನು ಒದಗಿಸುತ್ತದೆ. ಇದರಲ್ಲಿರುವ ಬೀಸ್ಟ್ ಮೋಡ್ ಲ್ಯಾಗ್‌ಫ್ರೀ ಗೇಮಿಂಗ್ ಮತ್ತು ಆ್ಯಕ್ಷನ್ ಮೂವಿಗಳ ಉತ್ತಮ ಅನುಭವವನ್ನು ಒದಗಿಸುತ್ತದೆ.

ಪರ್ಫಾಮೆನ್ಸ್ ಮತ್ತು ಸ್ಟೈ ಲ್‌ಗಾಗಿ ವಿನ್ಯಾಸ

ಲುಕ್ ಮತ್ತು ಪರ್ಫಾಮೆನ್ಸ್ ಎರಡಕ್ಕೂ ಆದ್ಯತೆ ನೀಡಿ ಈ ಇಯರ್ ಬಡ್ಸ್ ತಯಾರಿಸಲಾಗಿದೆ. ಮ್ಯೂಸಿಕ್, ಮೂವಿಗಳು ಮತ್ತು ಕರೆಗಳನ್ನು ಸ್ವೀಕರಿಸಲುಪರ್ಫೆಕ್ಟ್ ಆಗಿದೆ. 60 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ(35ಎಂಎಎಚ್‌) ಜೊತೆಗೆ 10 ಗಂಟೆಗಳ ಪ್ಲೇ ಟೈಮ್ ನೀಡುತ್ತದೆ. ಚಾರ್ಜಿಂಗ್‌ ಕೇಸ್‌ನಲ್ಲಿ(400ಎಂಎಎಚ್‌) 5 ಬಾರಿ ಚಾರ್ಜಿಂಗ್ ಮಾಡಿಕೊಳ್ಳುವ ಸೌಲಭ್ಯ ಒದಗಿಸುತ್ತದೆ. ಬ್ಯಾಟರಿ ಮುಗಿದುಹೋಗುತ್ತದೆ ಎಂದು ಪರಿತಪಿಸುವುದರಿಂದ ಮುಕ್ತಿ ನೀಡುತ್ತದೆ.

ಎಲ್ಲೇ ಇದ್ದರೂ ಕ್ರಿಸ್ಟಲ್ ಕ್ಲಿಯರ್ ಸಂವಹನ

ANC ಮತ್ತು ENC ಫೀಚರ್‌ಗಳನ್ನು ಹೊಂದಿರುವ ಈ ಇಯರ್ ಬಡ್ಸ್ ಜನಸಂದಣಿ ಪ್ರದೇಶದಲ್ಲೂ ಕ್ರಿಸ್ಟಲ್ ಕ್ಲಿಯರ್ ಆನ್‌ಲೈನ್ ವಾಯ್ಸ್ ಮತ್ತು ವಿಡಿಯೊ ಕಾಲ್ ಮಾಡಲು ಸಹಕಾರಿಯಾಗಿದೆ. ಎಎನ್‌ಸಿ ಜೊತೆಗೆ ಕ್ವಾಡ್ ಮೈಕ್‌ಗಳಿದ್ದು, ಬ್ಯಾಗ್ರೌಂಡ್‌ ನಾಯ್ಸ್‌ ಫ್ರೀ ಕರೆ ಸೌಲಭ್ಯ ಒದಗಿಸುತ್ತದೆ. ಈ ಮೂಲಕ ನೀವು ಯಾವುದಕ್ಕೂ ವಿಚಲಿತಗೊಳ್ಳದೆ ಸಂಭಾಷಣೆ ಮೇಲೆ ಗಮನ ಕೇಂದ್ರೀಕರಿಸಲು ನೆರವಾಗುತ್ತದೆ.

ತಡೆರಹಿತ ಸಂಪರ್ಕ ಮತ್ತು ನಿಯಂತ್ರಣ

IWP (ನ್‌ಸ್ಟಾ ವೇಕ್ ಅಂಡ್ ಪೇರ್) ತಂತ್ರಜ್ಞಾನ ಹೊಂದಿರುವ ಇಯರ್ ಬಡ್ಸ್ , ಚಾರ್ಜಿಂಗ್ ಕೇಸ್ ತೆರೆಯುತ್ತಿದ್ದಂತೆ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಆಗುತ್ತದೆ. ಇಯರ್ ಡಿಟೆಂನ್ಷನ್ ಫೀಚರ್ ಇನ್‌ಸ್ಟ್ಯಂಟ್ ಪಾಸ್ ಅಂಡ್ ಪ್ಲೇಗೆ ಅನುಕೂಲ ಮಾಡಿಕೊಡುತ್ತದೆ. ಬ್ಯಾಟರಿ ಬಾಳಿಕೆಯನ್ನು ಖಚಿತಪಡಿಸುತ್ತದೆ. ಪ್ರತಿಯೊಂದು ಇಯರ್‌ ಬಡ್ಸ್‌ನಲ್ಲಿರುವ ಟಚ್ ಕಂಟ್ರೋಲ್ ಫೀಚರ್ ಮ್ಯೂಸಿಕ್ ನಿಯಂತ್ರಣ, ಶಬ್ದ ಹೊಂದಿಸುವಿಕೆ, ಕರೆ ಸ್ವೀಕರಿಸುವುದು, ವಾಯ್ಸ್‌ ಅಸಿಸ್ಟೆಂಟ್‌ಗೆ(ಗೂಗಲ್/ಸಿರಿ) ಕಮಾಂಡ್ ನೀಡಲು ನೆರವಾಗುತ್ತದೆ.

ಅತ್ಯುತ್ತಮ ಮನರಂಜನೆ ಮತ್ತು ಸಂವಹನ

ಗೇಮ್‌ಆಡುವುದಕ್ಕಾಗಿ ಮತ್ತು ಮನರಂಜನೆ ಹಾಗೂ ಸಂವಹನಕ್ಕಾಗಿ ವಿಶ್ವಾಸಾರ್ಹ ಇಯರ್‌ಬಡ್‌ಗಳನ್ನು ಹುಡುಕುತ್ತಿರುವವರಿಗೆ ಅಸಾಧಾರಣ ಮೌಲ್ಯಯುಕ್ತ ಇಯರ್‌ ಬಡ್ಸ್ ಇದಾಗಿದೆ. ಕೇವಲ ₹1,499 ಕೈಗೆಟುಕುವ ಬೆಲೆಯಲ್ಲಿ ಈ ವೈರ್‌ಲೆಸ್ ಇಯರ್ ಬಡ್ಸ್ ಫ್ಲಿಪ್‌ಕಾರ್ಟ್ ಮತ್ತು boAt-lifestyle.com ನಲ್ಲಿ ಲಭ್ಯವಿದೆ, ಆ್ಯಕ್ಟಿವ್ ಬ್ಲ್ಯಾಕ್, ಆ್ಯಕ್ಟಿವ್ ಟೀಲ್, ಆ್ಯಕ್ಟಿವ್ ವೈಟ್ ಮತ್ತು ಡಾನ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT