ಶುಕ್ರವಾರ, ಸೆಪ್ಟೆಂಬರ್ 30, 2022
26 °C
ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಐಫೋನ್ ಖರೀದಿಗೆ ವಿಶೇಷ ಡಿಸ್ಕೌಂಟ್!

Flipkart Offer | ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಐಫೋನ್‌ಗೆ ವಿಶೇಷ ಕೊಡುಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಇ ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್‌, ದೇಶದಲ್ಲಿ ವಾರ್ಷಿಕ ವಿಶೇಷ ಮಾರಾಟ ದಿನಾಂಕವನ್ನು ಘೋಷಿಸಿದೆ.

ಸೆ. 23ರಿಂದ ಆರಂಭವಾಗುವ ಬಿಗ್ ಬಿಲಿಯನ್ ಡೇಸ್ ಸೇಲ್, ಸೆ. 30ರವರೆಗೆ ನಡೆಯಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಸೇಲ್ ಒಂದು ದಿನ ಮುಂಚಿತವಾಗಿ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ.

ಈ ಬಾರಿಯ ಬಿಗ್ ಬಿಲಿಯನ್ ಡೇ ಆಫರ್ ಸೇಲ್‌ನಲ್ಲಿ ಆ್ಯಪಲ್ ಐಫೋನ್ ಖರೀದಿಗೆ ವಿಶೇಷ ಡಿಸ್ಕೌಂಟ್ ಅನ್ನು ಫ್ಲಿಪ್‌ಕಾರ್ಟ್‌ ಘೋಷಿಸಿದೆ.

ಯಾವೆಲ್ಲ ಐಫೋನ್‌ಗಳಿಗೆ ವಿಶೇಷ ಡಿಸ್ಕೌಂಟ್ ಇರಲಿದೆ?
ಆ್ಯಪಲ್ ಐಫೋನ್ 13, ಐಫೋನ್ 12 ಮಿನಿ ಮತ್ತು ಐಫೋನ್ 11 ಖರೀದಿಗೆ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್ ದೊರೆಯಲಿದೆ.

ಅಲ್ಲದೆ, ಐಫೋನ್ 13 ಪ್ರೊ ಮತ್ತು 13 ಪ್ರೊ ಮ್ಯಾಕ್ಸ್ ಖರೀದಿಸುವವರಿಗೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ವಿಶೇಷ ಕೊಡುಗೆ ದರ ಇರಲಿದೆ.

ಆ್ಯಪಲ್ ಐಫೋನ್ ಆಫರ್ ದರವೆಷ್ಟು?
ಆ್ಯಪಲ್ ಐಫೋನ್ 13 ಆರಂಭಿಕ ದರ ₹49,990
ಐಫೋನ್ 12 ಮಿನಿ ದರ ₹40,000 ಒಳಗಡೆ ಇರಲಿದೆ.
ಐಫೋನ್ 11 ದರ ₹30,000 ಒಳಗಡೆ ಇರಲಿದೆ.

ಐಪೋನ್ 13 ಪ್ರೊ ಮಾದರಿ ದರ ₹90,000 ಒಳಗಡೆ ಇರಲಿದ್ದು, ಐಫೋನ್ 13 ಪ್ರೊ ಮ್ಯಾಕ್ಸ್ ದರ ₹99,990 ಒಳಗಡೆ ಇರಲಿದೆ ಎಂದು ಫ್ಲಿಪ್‌ಕಾರ್ಟ್ ಆಫರ್ ಸೇಲ್ ಪುಟದಲ್ಲಿ ಟೀಸರ್ ಬಿಡುಗಡೆ ಮಾಡಿದೆ. ಅಲ್ಲದೆ, ಈ ದರಗಳು ಎಲ್ಲ ಆಫರ್‌ಗಳನ್ನು ಒಳಗೊಂಡಿದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು