ಬುಧವಾರ, ಸೆಪ್ಟೆಂಬರ್ 30, 2020
21 °C

ಚೀನಾದ ಮತ್ತಷ್ಟು ಆ್ಯಪ್‌ಗಳು ನಿಷೇಧ: ಈ ಬಾರಿ ಯಾವ ಆ್ಯಪ್‌ಗಳಿಗೆ ಕುತ್ತು?

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಶಿಯೋಮಿ ಕಾರ್ಪ್‌’, ‘ಬೈದು ಐಎನ್‌ಸಿ’ ಸೇರಿದಂತೆ ಚೀನಾ ಮೂಲದ ಇನ್ನೂ ಕೆಲವು ಆ್ಯಪ್‌ಗಳನ್ನು ಭಾರತ ಸರ್ಕಾರ ಬುಧವಾರ ನಿಷೇಧಿಸಿರುವುದಾಗಿ ತಿಳಿದು ಬಂದಿದೆ.

ಗಡಿಗೆ ಸಂಬಂಧಿಸಿದಂತೆ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಇತ್ತೀಚೆಗೆ ಸಂಘರ್ಷ ಉಂಟಾಗಿತ್ತು. ಇದಾದ ನಂತರ, ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಬೆದರಿಕೆಯೊಡ್ಡಬಹುದಾದ ಅಪಾಯದ ಹಿನ್ನೆಲೆಯಲ್ಲಿ ಚೀನಾ ಮೂಲದ 59 ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಭಾರತ ಈಗಾಗಲೇ ನಿಷೇಧಿಸಿದೆ. ಇದರಲ್ಲಿ ಜನಪ್ರಿಯ ‘ಟಿಕ್‌ ಟಾಕ್‌’, ‘ಯುಸಿ ಬ್ರೌಸರ್‌’, ‘ಶಿಯೊಮಿ ಎಂಐ ಕಮ್ಯುನಿಟಿ’ ಆ್ಯಪ್‌ ಸೇರಿದಂತೆ ಚೀನಾ ಮೂಲದ ಹಲವು ಜನಪ್ರಿಯ ಆ್ಯಪ್‌ಗಳೂ ಇದ್ದವು. ಅದರ ಮುಂದುವರಿದ ಭಾಗವಾಗಿ ಬುಧವಾರ ಮತ್ತಷ್ಟು ಆ್ಯಪ್‌ಗಳು ನಿಷೇಧ ಶಿಕ್ಷೆಗೆ ಗುರಿಯಾಗಿರುವುದಾಗಿ ಸರ್ಕಾರದ ಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ತೀರ ಇತ್ತೀಚೆಗೆ ಸರ್ಕಾರ ಚೀನಾ ಮೂಲದ ಇನ್ನೂ 47 ಆ್ಯಪ್‌ಗಳನ್ನು ನಿಷೇಧಿಸಿತ್ತು. ಈ ಪೈಕಿ ಬಹುತೇಕ ಆ್ಯಪ್‌ಗಳು ಈ ಹಿಂದೆ ನಿಷೇಧಿಸಲಾಗಿದ್ದ ಆ್ಯಪ್‌ಗಳ ತದ್ರೂಪಾಗಿದ್ದವು.

ಚೀನಾದ ಆ್ಯಪ್‌ಗಳ ವಿರುದ್ಧ ಜೂನ್‌ನಲ್ಲಿ ಕೈಗೊಂಡ ಕ್ರಮದ ಕುರಿತು ಸರ್ಕಾರ ಸಾರ್ವಜನಿಕವಾಗಿ ಹೇಳಿತ್ತು. ಆದರೆ, ಈ ಬಾರಿ ಅದು ಭಿನ್ನ ನಡೆ ಅನುಸರಿಸಿದೆ. ಶಿಯೋಮಿಯ ಎಂಐ ಬ್ರೌಸರ್, ಪ್ರೊ ಮತ್ತು ಬೈದು ಸರ್ಚ್‌ ಅಪ್ಲಿಕೇಶನ್‌ಗಳೂ ಸೇರಿದಂತೆ ಕೆಲವು ಹೊಸ ಅಪ್ಲಿಕೇಶನ್‌ಗಳು ಆ ಪಟ್ಟಿಗೆ ಸೇರ್ಪಡೆಗೊಂಡಿವೆ ಎಂದು ಮೂಲಗಳು ತಿಳಿಸಿವೆ. ಆದರೆ, ಎಷ್ಟು ಆಪ್ಲಿಕೇಷನ್‌ಗಳನ್ನು ರದ್ದು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು