ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳದಿ ಬಣ್ಣದಲ್ಲಿ iPhone 14 ಹಾಗೂ iPhone 14 Plus: ಯಾವಾಗ ಬಿಡುಗಡೆ?

ಇದೇ ಮೊದಲ ಬಾರಿಗೆ ಹಳದಿ ಬಣ್ಣದಲ್ಲಿ ಐಫೋನ್‌ ಪರಿಚಯಿಸಿದ ಆ್ಯಪಲ್‌
Last Updated 9 ಮಾರ್ಚ್ 2023, 6:57 IST
ಅಕ್ಷರ ಗಾತ್ರ

ಬೆಂಗಳೂರು: ಇದೇ ಮೊದಲ ಬಾರಿಗೆ ಹಳದಿ ಬಣ್ಣದಲ್ಲಿ ಐಫೋನ್ ಬಿಡುಗಡೆ ಮಾಡುವುದಾಗಿ ಆ್ಯಪಲ್ ಹೇಳಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಆ್ಯಪಲ್‌ನ ಐಫೋನ್‌ 14 ಹಾಗೂ ಐಫೋನ್‌ 14 ಪ್ಲಸ್‌ ಅನ್ನು ಹಳದಿ ಬಣ್ಣದಲ್ಲಿ ಬಿಡುಗಡೆ ಮಾಡುವುದಾಗಿ ಆ್ಯಪಲ್‌ ಹೇಳಿಕೊಂಡಿದೆ.

ಮಾರ್ಚ್‌ 14 ರಿಂದ ಈ ಎರಡೂ ಮಾದರಿಗಳ ಫೋನ್‌ಗಳು ಹಳದಿ ಬಣ್ಣದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಆ್ಯಪಲ್‌ ತಿಳಿಸಿದೆ. ಮಾರ್ಚ್‌ 10ರಿಂದಲೇ ಪ್ರೀ ಆರ್ಡರ್‌ ಆರಂಭವಾಗಲಿದೆ.

ಈ ಹಿಂದೆ ಬಿಡುಗಡೆಯಾಗಿರುವ ಐಫೋನ್‌ 14 ಹಾಗೂ ಐಫೋನ್‌ 14 ಪ್ಲಸ್‌ನ ಫೀಚರ್‌ಗಳೇ ಇದರಲ್ಲಿ ಇರಲಿವೆ.

ಐಫೋನ್‌ 14 ಹಾಗೂ ಐಫೋನ್‌ 14 ಪ್ಲಸ್‌ ವಿಶೇಷತೆಗಳೇನು?

ಐಫೋನ್‌ 14 ಹಾಗೂ ಐಫೋನ್‌ 14 ಪ್ಲಸ್‌ ಬಿ ಈ ಹಿಂದಿನ ಐಫೋನ್‌ಗಳಿಗಿಂತ ಹೆಚ್ಚಿನ ಬ್ಯಾಟರಿ ಬಾಳಿಕೆ ಇರುವ ಫೋನ್‌ ಇದಾಗಿದೆ ಎಂದು ಆ್ಯಪಲ್‌ ಹೇಳಿಕೊಂಡಿತ್ತು.

ಎರಡೂ ಮಾಡೆಲ್‌ಗಳಲ್ಲಿ ಡ್ಯುಯೆಲ್‌ ಕ್ಯಾಮೆರಾ ಇರಲಿದ್ದು, ಹಿಂದೆಂದಿಗಿಂತಲೂ ಉತ್ಕೃಷ್ಟ ಗುಣಮಟ್ಟದ ಫೋಟೊ ಹಾಗೂ ವಿಡಿಯೋ ಅನುಭವ ಪಡೆಯಬಹುದು.

ಶಕ್ತಿಶಾಲಿ A15 ಬಯೋನಿಕ್‌ ಚಿಪ್‌ ಇದ್ದು, ಹೊಸ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರಿಂದಾಗಿ ಸ್ಯಾಟಲೈಟ್‌ ಮೂಲಕ ತುರ್ತು SOS ಹಾಗೂ ಸುಲಭವಾಗಿ ಕ್ರ್ಯಾಶ್‌ ಪತ್ತೆ ( Crash Detection) ಮಾಡಬಹುದಾಗಿದೆ.

ಎರಡೂ ಐಫೋನ್‌ಗಳನ್ನು ಅಚ್ಚುಕಟ್ಟಾಗಿ ವಿನ್ಯಾಸ ಮಾಡಲಾಗಿದೆ. ಐಫೋನ್‌ 14, 6.1 ಇಂಚಿನ ಡಿಸ್ಪ್ಲೆ ಹೊಂದಿದ್ದು, ಐಫೋನ್‌ 14 ಪ್ಲಸ್‌ 6.7 ಇಂಚಿನ ಡಿಸ್ಪ್ಲೆ ಹೊಂದಿದೆ. ನೀರು ಹಾಗೂ ಧೂಳಿನಿಂದ ರಕ್ಷಣೆ ಪಡೆಯಲು aerospace-grade aluminum ಬನಕೆ ಮಾಡಲಾಗಿದೆ. ಸಾಮಾನ್ಯ ಅವಘಢಗಳಾದ (ಕೈತಪ್ಪಿ ಬೀಳುವುದು) ಮೊಬೈಲ್‌ ಹಾನಿಯಾಗದಂತೆ ಫ್ರಂಟ್‌ ಕವರ್‌ನಲ್ಲಿ ಯಾವ ಸ್ಮಾರ್ಟ್‌ಫೋನ್‌ಗಳಲ್ಲಿ ಇತದ ಗಟ್ಟಿಯಾದ ಗ್ಲಾಸ್‌ಗಳನ್ನು ಅಳವಡಿಸಲಾಗಿದೆ.

ಎರಡೂ ಮಾದರಿಯ ಐಫೋನ್‌ಗಳಲ್ಲಿ OLED ತಂತ್ರಜ್ಞಾನ ಇರುವ ಗುಣಮಟ್ಟದ Super Retina XDR ಡಿಸ್ಪ್ಲೆ ಇದೆ. ಇದರಿಂದಾಗಿ ಡಾಲ್ಬಿ ವಿಶನ್‌ ಜತೆಗೆ 1200 ನಿಟ್ಸ್‌ ಎಚ್‌ಡಿಆರ್‌ ಬ್ರೈಟ್‌ನೆಸ್‌ವರೆಗೆ ಸಪೋರ್ಟ್‌ ಮಾಡಲಿದೆ. ಉತ್ತಮ ಗೇಮಿಂಗ್‌, ಕಂಟೆಂಟ್ ವೀಕ್ಷಣೆ ಅನುಭವ ಪಡೆಯಬಹುದಾಗಿದೆ.

ಮಿಡ್‌ನೈಟ್‌, ಸ್ಟಾರ್‌ಲೈಟ್‌, ನೀಲಿ, ನೇರಳೆ ಬಣ್ಣಗಳಲ್ಲಿ ಸದ್ಯ ಈ ಮಾಡೆಲ್‌ಗಳು ಲಭ್ಯವಿದ್ದು, ಮಾರ್ಚ್ 14ರಿಂದ ಹಳದಿ ಬಣ್ಣ ಮಾರುಕಟ್ಟೆಗೆ ಬರಲಿದೆ.

ಎರಡೂ ಮಾದರಿಯ ಐಫೋನ್‌ಗಳಲ್ಲಿ ಹೊಸ ತಂತ್ರಜ್ಞಾನವುಳ್ಳ ಡ್ಯುಯೆಲ್‌ ಕ್ಯಾಮೆರಾ ಇದ್ದು, ಹಿಂಬದಿ ಕ್ಯಾಮೆರಾದಲ್ಲಿ ಸೆನ್ಸರ್ ಅಳವಡಿಸಿರುವುದರಿಂದ ಗುಣಮಟ್ಟದ ಫೋಟೋ ಅಥವಾ ವಿಡಿಯೋಗ್ರಫಿ ಸಾಧ್ಯವಾಗಲಿದೆ. ವಿಡಿಯೋಗ್ರಫಿಯಲ್ಲಿ ಸಿನಿಮ್ಯಾಟಿಕ್‌ ಮೋಡ್‌, ಆಕ್ಷನ್‌ ಮೋಡ್‌ ಸೌಲಭ್ಯ ಇದೆ. ಅಲ್ಟ್ರಾವೈಡ್‌, ಶೇಕ್‌ ಫ್ರೀ, ಆಟೋ ಫೋಕಸ್‌ ವ್ಯವಸ್ಥೆ ಕೂಡ ಇದೆ. ಎರಡೂ ಮಾದರಿಗಳಲ್ಲಿ ಹಿಂಬದಿಯ ಕ್ಯಾಮೆರಾ 12 ಎಂಪಿ ಇದೆ.

ದರ ಎಷ್ಟು?

ಐಫೋನ್ 14: ಆರಂಭಿಕ ದರ ₹ 79,900
ಐಫೋನ್‌ 14 ‍ಪ್ಲಸ್‌: ಆರಂಭಿಕ ದರ ₹ 89,900

ಈ ಎರಡೂ ಮಾದರಿಯ ಫೋನ್‌ಗಳು 128GB, 256GB, ಹಾಗೂ 512GB ಸ್ಟೋರೇಜ್‌ ಕ್ಯಾಪಾಸಿಟಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT