ಗುರುವಾರ , ಸೆಪ್ಟೆಂಬರ್ 23, 2021
24 °C

ಐಟೆಲ್‌ ಎ48 ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ ₹ 6,399

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೈಗೆಟಕುವ ಬೆಲೆಗೆ ಸ್ಮಾರ್ಟ್‌ಫೋನ್‌ ತಯಾರಿಸುವ ಐಟೆಲ್‌ ಕಂಪನಿಯು ‘ಐಟೆಲ್‌ ಎ48’ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ‘ಎ’ ಸರಣಿಯ ಸ್ಮಾರ್ಟ್‌ಫೋನ್‌ ವಿಭಾಗವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ.

₹ 6,399ರ ಬೆಲೆಯ ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 10ಗೊ ಎಡಿಷನ್‌ ಒಎಸ್‌ ಹೊಂದಿದೆ. 6.1 ಇಂಚು ವಾಟರ್‌ಡ್ರಾಪ್‌ ಎಚ್‌ಡಿ+ ಪರದೆ, 1.4ಗಿಗಾ ಹರ್ಟ್ಸ್‌ ಕ್ವಾಡ್‌ ಕೋರ್‌ ಪ್ರೊಸೆಸರ್, 3,000 ಎಂಎಎಚ್‌ ಬ್ಯಾಟರಿ, 2ಜಿಬಿ ರ್‍ಯಾಮ್‌, 32 ಜಿಬಿ ರೋಮ್‌, 128 ಜಿಬಿವರೆಗೆ ವಿಸ್ತರಣೆ, 5 ಎಂಪಿ/ವಿಜಿಎ+5ಎಂಪಿ ಹಿಂಬದಿ ಕ್ಯಾಮೆರಾ, 5 ಎಂಪಿ ಮುಂಬದಿ ಕ್ಯಾಮೆರಾ, ಫಿಂಗರ್‌ಪ್ರಿಂಟ್‌ ಮತ್ತು ಫೇಸ್‌ ಅನ್‌ಲಾಕ್‌, ಎಐ ಡ್ಯುಯಲ್‌ ಕ್ಯಾಮೆರಾ ಒಳಗೊಂಡಿದೆ. ಫೋನ್‌ ಖರೀದಿಸಿದ 100 ದಿನದೊಳಗೆ ಇದರ ಪರದೆ ಹಾಳಾದಲ್ಲಿ ಒಂದು ಬಾರಿಗೆ ಉಚಿತವಾಗಿ ಹೊಸ ಪರದೆ ಹಾಕಿಸಬಹುದಾಗಿದೆ.

‘ಆನ್‌ಲೈನ್‌ ಶಿಕ್ಷಣ, ಹಣ ವರ್ಗಾವಣೆ, ಮನರಂಜನೆ ಅಷ್ಟೇ ಅಲ್ಲದೆ, ಮನೆಯಿಂದ ಕೆಲಸ ಮಾಡುವುದಕ್ಕೂ ಸ್ಮಾರ್ಟ್‌ಫೋನ್‌ ಬಳಕೆ ಆಗುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದೇವೆ’ ಎಂದು ಟ್ರಾನ್ಶನ್‌ ಇಂಡಿಯಾದ ಸಿಇಒ ಅರ್ಜಿತ್‌ ತಲಪಾತ್ರ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು