ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

JIO AIRFIBER: ಜಿಯೋ ಏರ್ ಫೈಬರ್ ಘೋಷಣೆ: ಶುಲ್ಕ ಎಷ್ಟು ತಿಳಿದುಕೊಳ್ಳಿ

Published 19 ಸೆಪ್ಟೆಂಬರ್ 2023, 13:09 IST
Last Updated 19 ಸೆಪ್ಟೆಂಬರ್ 2023, 13:09 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್ ಜಿಯೊ ಕಂಪನಿಯು 'ಜಿಯೊ ಏರ್‌ಫೈಬರ್' ಸೇವೆಗಳನ್ನು ಘೋಷಿಸಿದೆ. ಪ್ರಾರಂಭದಲ್ಲಿ ಬೆಂಗಳೂರು ಸೇರಿದಂತೆ ದೇಶದ ಎಂಟು ನಗರಗಳಲ್ಲಿ ಲಭ್ಯವಾಗಲಿದೆ.

ಪ್ರಮುಖ ನಗರಗಳು:

ಬೆಂಗಳೂರು, ಅಹಮದಾಬಾದ್, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತ, ಮುಂಬೈ ಮತ್ತು ಪುಣೆ.

ಮನೆಮನೆಗಳಿಗೆ ಸೇವೆ ಒದಗಿಸುವ ಮೂಲಕ ಭಾರತವನ್ನು ಪ್ರೀಮಿಯರ್ ಡಿಜಿಟಲ್ ಸಮಾಜವಾಗಿ ಬದಲಾಯಿಸುವುದು ಜಿಯೊ ಗುರಿಯಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಟಿವಿ ಹಾಗೂ ಬ್ರಾಡ್‌ಬ್ಯಾಂಡ್‌ನಿಂದ ಅಪ್‌ಗ್ರೇಡ್ ಮಾಡಲು ಬಯಸುವವರಿಗೆ ಜಿಯೊ ಏರ್‌ಫೈಬರ್ ಸೇವೆ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಸೇವೆಯ ವೈಶಿಷ್ಟ್ಯಗಳು:

1. ಡಿಜಿಟಲ್ ಎಂಟರ್‌ಟೈನ್‌ಮೆಂಟ್:

  • 550ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನಲ್,

  • ಕ್ಯಾಚ್-ಅಪ್ ಟಿವಿ,

  • 16ಕ್ಕೂ ಹೆಚ್ಚು ಒಟಿಟಿ ಆ್ಯಪ್

2. ಬ್ರಾಡ್‌ಬ್ಯಾಂಡ್‌ ಸೇವೆ:

  • ಹೈ-ಸ್ಪೀಡ್ ವೈಫೈ ಸೇವೆ

3. ಸ್ಮಾರ್ಟ್ ಹೋಮ್ ಸರ್ವಿಸ್:

  • ಶಿಕ್ಷಣಕ್ಕಾಗಿ ಕ್ಲೌಡ್ ಪಿಸಿ,

  • ವರ್ಕ್ ಫ್ರಮ್ ಹೋಮ್,

  • ಸೆಕ್ಯೂರಿಟಿ ಮತ್ತು ಕಣ್ಗಾವಲು,

  • ಹೆಲ್ತ್ ಕೇರ್,

  • ಶಿಕ್ಷಣ,

  • ಸ್ಮಾರ್ಟ್ ಹೋಮ್ ಐಒಟಿ,

  • ಗೇಮಿಂಗ್,

  • ಹೋಮ್ ನೆಟ್‌ವರ್ಕಿಂಗ್

4. ಹೆಚ್ಚುವರಿ ಶುಲ್ಕ ಇಲ್ಲದೆ ಹೋಮ್ ಡಿವೈಸ್:

  • ವೈಫೈ ರೂಟರ್,

  • 4ಕೆ ಸ್ಮಾರ್ಟ್ ಸೆಟ್ ಅಪ್ ಬಾಕ್ಸ್

  • ವಾಯ್ಸ್-ಆಕ್ಟಿವ್ ಮೋಡ್.

ಜಿಯೊ ಏರ್‌ಫೈಬರ್ ಮತ್ತು ಜಿಯೊ ಫೈಬರ್ ಸೇವೆಗಳು ಇಂತಿದೆ:

ಜಿಯೊ ಏರ್‌ಫೈಬರ್ ಸೇವೆ ಪಡೆಯಲು ಹತ್ತಿರದ ಜಿಯೊ ಸ್ಟೋರ್ ಅಥವಾ ಜಿಯೊ ವೆಬ್‌ಸೈಟ್‌ಗೆ ಭೇಟಿ ಕೊಡಬಹುದಾಗಿದೆ. 60008-60008 ನಂಬರ್‌ಗೆ ಮಿಸ್ಡ್ ಕಾಲ್ ಅಥವಾ ವಾಟ್ಸ್‌ಆ್ಯಪ್ ಮೂಲಕ ಬುಕಿಂಗ್ ಬಗ್ಗೆ ಮಾಹಿತಿ ಗಿಟ್ಟಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT