ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Probuds N11: ಆಕರ್ಷಕ ವಿನ್ಯಾಸದ ಇಯರ್‌ಬಡ್ಸ್ ಪರಿಚಯಿಸಿದ ಲಾವಾ

Last Updated 9 ಸೆಪ್ಟೆಂಬರ್ 2022, 13:08 IST
ಅಕ್ಷರ ಗಾತ್ರ

ಬೆಂಗಳೂರು: ಕೈಗೆಟುಕುವ ಬೆಲೆಗೆ ಸ್ಮಾರ್ಟ್‌ ಸಾಧನಗಳನ್ನು ನೀಡುವಲ್ಲಿ ದೇಶಿ ಕಂಪನಿಗಳು ಹಲವು ಪ್ರಯೋಗಗಳನ್ನು ಮಾಡುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾದ ಲಾವಾ, ‘ಪ್ರೊಬಡ್ಸ್ ಎನ್‌11 ಇಯರ್‌ಬಡ್ಸ್’ ಬಿಡುಗಡೆ ಮಾಡಿದೆ. ಇದರ ಬೆಲೆ ₹1,499.

ಇಯರ್‌ಬಡ್ಸ್ ವಿಶೇಷ ಆಫರ್‌ನಲ್ಲಿ ಗ್ರಾಹಕರು ಆರಂಭಿಕ ಬೆಲೆ ₹11 ಕ್ಕೆ ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ. ಆರಂಭಿಕ ಕೊಡುಗೆಯಾಗಿ ಲಾವಾ ಇ–ಸ್ಟೋರ್ ಮತ್ತು ಅಮೆಜಾನ್‌ ಸೆ .12ರವರೆಗೆ ಈ ಆಫರ್ ದರ ಇರುತ್ತದೆ. ಒಂದು ವೇಳೆ ಈ ಅವಕಾಶ ತಪ್ಪಿದರೆ ಗ್ರಾಹಕರು ಸೆ. 13ರಿಂದ 16 ರವರೆಗೆ ಒನ್‌-ಟೈಮ್‌ ವಿಶೇಷ ಬೆಲೆ ₹999ಕ್ಕೆ ಇಯರ್‌ಬಡ್ಸ್ ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ.

ಯುವಜನರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವ ನೂತನ ಇಯರ್‌ಬಡ್ಸ್, ಹಸಿರು, ಕಿತ್ತಳೆ ಮತ್ತು ಕಪ್ಪಬಣ್ಣಗಳಲ್ಲಿ ಲಭ್ಯವಿದೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ, 13 ಗಂಟೆಗಳವರೆಗೆ ಪ್ಲೇಬ್ಯಾಕ್ ಅವಧಿ ದೊರೆಯಲಿದೆ.

ಇದು 280mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಕೇವಲ 10 ನಿಮಿಷದಲ್ಲಿ ಚಾರ್ಜ್ ಮಾಡಬಹುದಾಗಿದೆ. ಮ್ಯೂಸಿಕ್, ಕರೆ ನಿಯಂತ್ರಣ ಫೀಚರ್ ಕೂಡ ಲಭ್ಯವಿರುತ್ತದೆ.

ಲಾವಾ ಪ್ರೊಬಡ್ಸ್ ಎನ್‌11ರಲ್ಲಿ 12mm ಡೈನಾಮಿಕ್ ಡ್ರೈವರ್ಸ್ ಇದ್ದು, ವಾಟರ್‌ ಪ್ರೂಫ್‌ ತಂತ್ರಜ್ಞಾನ (ಜಲ ನಿರೋಧಕ) ಮತ್ತು ಸಂಗೀತ ಆಲಿಸುವಾಗ, ವಿಡಿಯೊ ಪ್ಲೇ ಮಾಡುವಾಗ ಹೊರಗಿನ ಶಬ್ಧ ಕೇಳಿಸದಂತೆ ತಡೆಯುವ ಇಎನ್‌ಸಿ (ಎನ್ವಿರಾನ್ಮೆಂಟಲ್‌ ನಾಯ್ಸ್‌ ಕ್ಯಾನ್ಸಲೇಷನ್) ವ್ಯವಸ್ಥೆ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT