ಭಾನುವಾರ, ಜೂನ್ 7, 2020
27 °C

ಹೊಸ ಬಜೆಟ್‌ ಫೋನ್‌: ಮೊಟೊ ಜಿ8 ಪವರ್‌ ಲೈಟ್‌, ಬೆಲೆ ₹8,999 

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೊಟೊ ಜಿ8 ಪವರ್‌ ಲೈಟ್ ಸ್ಮಾರ್ಟ್‌ ಫೋನ್‌

ಬೆಂಗಳೂರು: ಮೊಟೊರೊಲಾ ಇಂಡಿಯಾ ದೇಶದಲ್ಲಿ ಕೈಗೆಟುಕುವ ದರದ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಮೂರು ಕ್ಯಾಮೆರಾ ಹಾಗೂ 5,000 ಎಂಎಎಚ್‌ ಬ್ಯಾಟರಿಯಿಂದಾಗಿ ಮೊಟೊ ಜಿ8 ಪವರ್‌ ಲೈಟ್‌ ಗಮನ ಸೆಳೆಯುತ್ತಿದೆ. 

ಈ ಹೊಸ ಫೋನ್‌ಗೆ ₹8,999 ನಿಗದಿಯಾಗಿದೆ. ಮೇ 29ರ ನಂತರ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಸಿಗಲಿದೆ. ರಾಯಲ್‌ ಬ್ಲೂ ಮತ್ತು ಆರ್ಕ್ಟಿಕ್‌ ಬ್ಲೂ ಎರಡು ಬಣ್ಣಗಳಲ್ಲಿ ಸಿಗಲಿರುವ ಫೋನ್‌, ಸಂಗ್ರಹ ಸಾಮರ್ಥ್ಯ ಒಂದೇ ಆಗಿರಲಿದೆ. 

6.5 ಇಂಚು ಎಚ್‌ಡಿ+ ಡಿಸ್‌ಪ್ಲೇ (20:9 ಆಸ್ಪೆಕ್ಟ್ ರೇಷಿಯೊ), ಮೀಡಿಯಾಟೆಕ್‌ ಹೀಲಿಯೊ ಪಿ35 ಆಕ್ಟಾ–ಕೋರ್‌ ಪ್ರೊಸೆಸರ್‌ ಹೊಂದಿದೆ. 256 ಜಿಬಿ ವರೆಗೂ ಸಂಗ್ರಹ ಸಾಮರ್ಥ್ಯ ವಿಸ್ತರಿಸಿಕೊಳ್ಳಲು ಮೈಕ್ರೊಎಸ್‌ಡಿ ಕಾರ್ಡ್‌ ಸ್ಲಾಟ್‌ ಇದೆ. 64 ಜಿಬಿ ಸಂಗ್ರಹ ಸಾಮರ್ಥ್ಯ ಹಾಗೂ 4 ಜಿಬಿ ರ್‍ಯಾಮ್‌ ನೀಡಲಾಗಿದೆ. 

ಹಿಂಬದಿಯಲ್ಲಿ ಮೂರು ಕ್ಯಾಮೆರಾ– 16ಎಂಪಿ ಪ್ರೈಮರಿ ಸೆನ್ಸರ್‌, 2ಎಂಪಿ ಮ್ಯಾಕ್ರೊ ಲೆನ್ಸ್‌ ಹಾಗೂ 2ಎಂಪಿ ಡೆಪ್ತ್‌ ಸೆನ್ಸರ್‌ ಹೊಂದಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 8ಎಂಪಿ ಕ್ಯಾಮೆರಾ ಇದೆ. ಸ್ಟಾಕ್‌ ಆ್ಯಂಡ್ರಾಯ್ಡ್‌ 9 ಓಟ್‌–ಆಫ್‌–ದಿ–ಬಾಕ್ಸ್‌ ಆಪರೇಟಿಂಗ್‌ ಸಿಸ್ಟಮ್‌ ಇದೆ. ಮೊಬೈಲ್‌ ಹಿಡಿದು ಎರಡು ಬಾರಿ ಮುಂಭಾಗದ ಕೈ ಅಲುಗಿದರೆ ಕ್ಯಾಮೆರಾ ತೆರೆದುಕೊಳ್ಳುವುದು ಹಾಗೂ ಎರಡು ಬಾರಿ ಒತ್ತಿದರೆ ಫ್ಲಾಷ್‌ಲೈಟ್‌ ಹೊತ್ತಿಕೊಳ್ಳುವ ಮೊಟೊ ಆ್ಯಕ್ಷನ್‌ಗಳಿವೆ. 

5,000 ಎಂಎಎಚ್‌ ಬ್ಯಾಟರಿ ಇರುವುದರಿಂದ ಒಂದು ಬಾರಿ ಚಾರ್ಜ್‌ ಮಾಡಿದರೆ, ಎರಡು ದಿನಗಳವರೆಗೂ ಕಾರ್ಯಾಚರಿಸಬಹುದಾಗಿದೆ. 10ವ್ಯಾಟ್‌ ರ್‍ಯಾಪಿಡ್‌ ಚಾರ್ಜಿಂಗ್‌ ಸಹ ಹೊಂದಿದೆ. 

ಮೊಟೊ ಜಿ 8 ಪವರ್‌ ಲೈಟ್‌:
* ಬೆಲೆ: ₹8,999
* ಸಾಮರ್ಥ್ಯ: 4 ಜಿಬಿ ರ‍್ಯಾಮ್‌, 64 ಜಿಬಿ ಸಂಗ್ರಹ 
* ಡಿಸ್‌ಪ್ಲೇ: 6.5 ಇಂಚು ಎಚ್‌ಡಿ+
* ಕ್ಯಾಮೆರಾ: ಹಿಂಬದಿಯಲ್ಲಿ 16ಎಂಪಿ+2ಎಂಪಿ+2ಎಂಪಿ; ಸೆಲ್ಫಿಗಾಗಿ 8 ಎಂಪಿ
* ಬ್ಯಾಟರಿ: 5,000 ಎಂಎಎಚ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು