ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಕಿಯಾ 105, ನೋಕಿಯಾ 106 4ಜಿ ಮಾರುಕಟ್ಟೆಗೆ

Published 19 ಮೇ 2023, 13:55 IST
Last Updated 19 ಮೇ 2023, 13:55 IST
ಅಕ್ಷರ ಗಾತ್ರ

ನವದೆಹಲಿ: ನೋಕಿಯಾ ಫೋನ್‌ಗಳನ್ನು ತಯಾರಿಸುವ, ಎಚ್ಎಂಡಿ ಗ್ಲೋಬಲ್ ಕಂಪನಿಯು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ ತನ್ನ ಫೀಚರ್ ಫೋನ್‌ಗಳ ಸಾಲಿಗೆ – ನೋಕಿಯಾ 105 (2023) ಮತ್ತು ನೋಕಿಯಾ 106 4ಜಿ ಫೋನ್‌ಗಳನ್ನು ಈಗ ಹೊಸದಾಗಿ ಸೇರ್ಪಡೆ ಮಾಡುತ್ತಿರುವುದಾಗಿ ಹೇಳಿದೆ.

ಈ ಎರಡೂ ಫೋನ್‌ಗಳು UPI 123PAY ಅಂತರ್ಗತ ಕಾರ್ಯನಿರ್ವಹಣೆಯೊಂದಿಗೆ ಬರಲಿವೆ. ನೋಕಿಯಾ ಫೋನ್‌ಗಳ ನಂಬಿಕೆಯ ವಿಶ್ವಾಸಾರ್ಹತೆಯನ್ನು ಯುಪಿಐ (UPI)ದ ಅನುಕೂಲತೆ ಮತ್ತು ಲಭ್ಯತೆಯೊಂದಿಗೆ ಸಂಯೋಜಿಸುತ್ತದೆ. ಬಳಕೆದಾರರು ಸ್ಮಾರ್ಟ್‌ಪೋನ್‌ ಇಲ್ಲದೆಯೇ ಡಿಜಿಟಲ್ ವಹಿವಾಟುಗಳನ್ನು ಸುರಕ್ಷಿತ ಮತ್ತು ಅಗಣಿತವಾಗಿ ನಿರ್ವಹಿಸಲು ಇದು ಅನುವು ಮಾಡಿಕೊಡುತ್ತದೆ.

ಬ್ಯಾಟರಿ ಬಾಳಿಕೆ, ಸರಳತೆ ಮತ್ತು ಕೈಗೆಟುಕುವ ಬೆಲೆ ಒಳಗೊಂಡಿರುವ ಈ ಎರಡೂ ಫೋನ್‌ಗಳು ನೋಕಿಯಾ ಫೋನ್ನಿಂದ ನಿರೀಕ್ಷಿತ ಭರವಸೆ ಮತ್ತು ವಿಶ್ವಾಸಾರ್ಹತೆಯನ್ನು ನೀಡಲಿವೆ.

ಭಾರತ ಹಾಗೂ ಎಪಿಎಸಿ, ಎಚ್ಎಂಡಿ ಗ್ಲೋಬಲ್‌ನ ಉಪಾಧ್ಯಕ್ಷ ರವಿ ಕುನ್ವರ್ ಅವರು, ಈ ಬಗ್ಗೆ ಪ್ರತಿಕ್ರಿಯಿಸಿ, ‘ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ ಪ್ರಮುಖ ಫೀಚರ್ ಫೋನ್‌ಗಳಾದ ನೋಕಿಯಾ 105 (2023) ಮತ್ತು ನೋಕಿಯಾ 106 4ಜಿ ಪರಿಚಯಿಸುವುದಕ್ಕೆ ನಾವು ಹೆಚ್ಚು ಉತ್ಸುಕರಾಗಿದ್ದೇವೆ, ಯುಪಿಐ (UPI) ಸೌಲಭ್ಯವನ್ನು ಈ ಫೋನ್‌ಗಳಲ್ಲಿ ಪರಿಚಯಿಸಿರುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದೆ. ನಮ್ಮ ಫೀಚರ್ ಫೋನ್‌ಗಳಲ್ಲಿ ‘ಯುಪಿಐ’ ಸೌಲಭ್ಯ ಪರಿಚಯಿಸುವ ಮೂಲಕ, ಸುರಕ್ಷಿತ, ಅನುಕೂಲಕರ ಡಿಜಿಟಲ್ ವಹಿವಾಟುಗಳನ್ನು ಸುಲಭವಾಗಿ ನಿರ್ವಹಿಸುವ ಮತ್ತು ಸಮಯದೊಂದಿಗೆ ಮುಂದುವರಿಯುವ ಸಾಮರ್ಥ್ಯವನ್ನು ಹೊಂದಿರುವ ಫೀಚರ್ ಫೋನ್ ಬಳಕೆದಾರರನ್ನು ಇನ್ನಷ್ಟು ಸಬಲೀಕರಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಅಚ್ಚುಮೆಚ್ಚಿನ ಫೀಚರ್ ಫೋನ್‌ಗಳಾದ ನೋಕಿಯಾ 105 ಮತ್ತು ನೋಕಿಯಾ 106 4ಜಿ ಗಳಿಗೆ ‘ಯುಪಿಐ’ ಸೌಲಭ್ಯ ಸೇರ್ಪಡೆ ಮಾಡುವ ಮೂಲಕ, ನಾವು ಡಿಜಿಟಲ್ ಅಂತರ ಕಡಿಮೆ ಮಾಡಲು ಮತ್ತು ಎಲ್ಲರಿಗೂ ತಂತ್ರಜ್ಞಾನದ ಪ್ರಗತಿಯು ಸುಲಭವಾಗಿ ಕೈಗೆಟುಕಲು ಹಾಗೂ ಸರಳವಾಗಿ ಬಳಸುವುದನ್ನು ಕಾರ್ಯಗತಗೊಳಿಸಲು ನಾವು ನಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತೇವೆ’ ಎಂದು ಹೇಳಿದ್ದಾರೆ.

ನೋಕಿಯಾ 106 4ಜಿ ಕಠಿಣ ಸ್ವರೂಪದ ಬಾಳಿಕೆ ಪರೀಕ್ಷೆಗೆ ಒಳಪಟ್ಟಿದೆ. ಯಾವುದೇ ಸಂದರ್ಭಗಳಲ್ಲಿಯೂ ಅಡಚಣೆ ಇಲ್ಲದ ಸಂಪರ್ಕವನ್ನು ಖಾತ್ರಿಪಡಿಸುತ್ತದೆ. ಕೀಮ್ಯಾಟ್ನಲ್ಲಿನ ಪ್ರತಿಯೊಂದು ಬಟನ್ ಮಧ್ಯೆ ಎಚ್ಚರಿಕೆಯಿಂದ ಪರಿಗಣಿಸಲಾದ ಅಂತರವು ಕತ್ತಲೆಯಲ್ಲಿಯೂ ಸಹ ಕರೆ ಮಾಡಲು ಹಾಗೂ ಸಂದೇಶ ಟೈಪ್ ಮಾಡುವುದನ್ನು ಸುಲಭಗೊಳಿಸಲಿದೆ

ದಕ್ಷತೆಯಿಂದ ರೂಪಿಸಿರುವ ನೋಕಿಯಾ 105 ನ ವಿನ್ಯಾಸ ಮತ್ತು ಕಾಂಪ್ಯಾಕ್ಟ್ ಆಕಾರವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕೈಯಲ್ಲಿ ಹಿಡಿದಿರುವಾಗ ಉತ್ತಮ ಅನುಭವ ನೀಡಲಿದೆ. ನೀವು ಪ್ರಯಾಣದಲ್ಲಿರುವಾಗ ನಿಮ್ಮ ಜೇಬಿನಲ್ಲಿ ಸುಲಭವಾಗಿ ಇರಿಸಿಕೊಳ್ಳಬಹುದು.

ನೋಕಿಯಾ 105 – ನವೀಕರಿಸಿದ 1000 ಎಂಎಎಚ್ ಬ್ಯಾಟರಿ ಹೊಂದಿದೆ. ಇದು ಇದರ ಹಿಂದಿನದಕ್ಕಿಂತ ಶೇ 25ರಷ್ಟು ದೊಡ್ಡದಾಗಿದೆ. ಇದು ವಿಸ್ತೃತ ಸ್ಟ್ಯಾಂಡ್‌ ಬೈ ಸಮಯ ಒದಗಿಸುತ್ತದೆ. ನೋಕಿಯಾ 106 4ಜಿ ಹೆಚ್ಚಿದ 1450 ಎಂಎಎಚ್ ಬ್ಯಾಟರಿ ಹೊಂದಿದೆ.

ವೈರ್‌ಲೆಸ್‌ ಎಫ್ಎಂ ರೇಡಿಯೊ ಹೊಂದಿದ್ದು, ಹೆಡ್‌ಸೆಟ್‌ ಅಗತ್ಯವಿಲ್ಲದೇ ಬಳಕೆ ಮಾಡಬಹುದು. ಹೆಚ್ಚುವರಿಯಾಗಿ, ನೋಕಿಯಾ 106 4ಜಿ ಅಂತರ್ನಿರ್ಮಿತ ಎಂಪಿ3 ಪ್ಲೇಯರ್ ಸಹ ಹೊಂದಿದೆ. ಬಳಕೆದಾರರು ಎಲ್ಲಿಗೆ ಹೋದರೂ ತಾವು ಇಷ್ಟಪಟ್ಟಿರುವ ಸಂಗೀತದ ವಿವರಗಳನ್ನು ತೆಗೆದುಕೊಂಡು ಹೋಗಲು ಅನುವು ಮಾಡಿಕೊಡುತ್ತದೆ.

ನೋಕಿಯಾ 105 ಮತ್ತು ನೋಕಿಯಾ 106 4ಜಿ ಭಾರತದಲ್ಲಿ ಮೇ 18 ರಿಂದ ಖರೀದಿಗೆ ದೊರೆಯಲಿವೆ. ಇವುಗಳ ಬೆಲೆ ಕ್ರಮವಾಗಿ ₹ 1,299 ಮತ್ತು ₹ 2,199 ಇದೆ. ನೋಕಿಯಾ 105 – ಚಾರ್ಕೋಲ್, ಸಿಯಾನ್ ಮತ್ತು ಕೆಂಪು ಬಣ್ಣಗಳಲ್ಲಿ ದೊರೆಯಲಿದೆ. ನೋಕಿಯಾ 106 4ಜಿ ಚಾರ್ಕೋಲ್ ಮತ್ತು ನೀಲಿ ಬಣ್ಣದಲ್ಲಿ ಲಭ್ಯ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT