ಬುಧವಾರ, ಆಗಸ್ಟ್ 17, 2022
23 °C

Nokia 105 4G: ಹೊಸ ನೋಕಿಯಾ ಮೊಬೈಲ್ ಫೋನ್ ಬೆಲೆ ವಿವರ ಬಹಿರಂಗ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Nokia logo. Credit: AFP

ಬೆಂಗಳೂರು: ನೋಕಿಯಾ ಮೊಬೈಲ್ ಸರಣಿಯಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ಹೊಸ ನೋಕಿಯಾ 105 4G ಫೋನ್ ಬೆಲೆ ವಿವರ ಬಹಿರಂಗವಾಗಿದೆ.

ನೋಕಿಯಾ ಫೀಚರ್ ಪೋನ್ 105 4G, ಎಫ್‌ಎಂ ರೇಡಿಯೊ, ಎಲ್‌ಇಡಿ ಟಾರ್ಚ್ ಹೊಂದಿದೆ. ಅಲ್ಲದೆ, 4G VoLTE ಬೆಂಬಲ ಕೂಡ ಇದ್ದು, ಚೀನಾದಲ್ಲಿ ಆಲಿಪೇ ಪಾವತಿ ವ್ಯವಸ್ಥೆಯನ್ನು ಕೂಡ ಬೆಂಬಲಿಸುತ್ತದೆ.

ನೋಕಿಯಾ ನೂತನ ಸರಣಿಯಲ್ಲಿ ಹೊಸದಾಗಿ 105 4G ಜತೆಗೆ, ನೋಕಿಯಾ 110 4G ಫೋನ್ ಅನ್ನು ಕೂಡ ಬಿಡುಗಡೆ ಮಾಡಿದೆ.

ನೋಕಿಯಾ 110 4G ಮೊಬೈಲ್‌ನಲ್ಲಿ ಕ್ಯಾಮರಾ ಇದ್ದು, ನೋಕಿಯಾ 105 4G ಮೊಬೈಲ್‌ನಲ್ಲಿ ಕ್ಯಾಮರಾ ಒದಗಿಸಿಲ್ಲ.

ಹೊಸ ನೋಕಿಯಾ 105 4G ಫೋನ್ ಚೀನಾದ ಮಾರುಕಟ್ಟೆಯಲ್ಲಿ ಜುಲೈ 5ರಿಂದ ದೊರೆಯಲಿದ್ದು, CNY 299 (ಅಂದಾಜು ₹2,600) ದರ ಹೊಂದಿದೆ. ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ದಿನಾಂಕ ಮತ್ತು ಬೆಲೆ ವಿವರವನ್ನು ನೋಕಿಯಾ ಪ್ರಕಟಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು