ಬೆಂಗಳೂರು: ಜನಪ್ರಿಯ ಮೊಬೈಲ್ ಬ್ರ್ಯಾಂಡ್ ನೋಕಿಯಾ, ದೇಶದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದೆ.
ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ, ಸಿ ಸರಣಿಯಲ್ಲಿ ಹೊಸದಾಗಿ C01 ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.
ಬೆಲೆ ಎಷ್ಟಿದೆ?
ಹೊಸ ನೋಕಿಯಾ C01 ಪ್ಲಸ್ ಸ್ಮಾರ್ಟ್‌ಫೋನ್, ಆರಂಭಿಕ ಮಾದರಿಯ ಆವೃತ್ತಿಯಾಗಿದ್ದು, ದೇಶದಲ್ಲಿ ₹5,999 ದರ ಹೊಂದಿದೆ. ನೀಲಿ ಮತ್ತು ನೇರಳೆ ಬಣ್ಣದಲ್ಲಿ ಹೊಸ ಫೋನ್ ಲಭ್ಯವಾಗಲಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್ ಮೂಲಕ ನೋಕಿಯಾ ಸ್ಮಾರ್ಟ್‌ಫೋನ್ ದೊರೆಯಲಿದೆ.
ತಾಂತ್ರಿಕ ವೈಶಿಷ್ಟ್ಯ
5.45 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಒಕ್ಟಾ ಕೋರ್ ಉನಿಸಾಕ್ SC9863A ಪ್ರೊಸೆಸರ್ ಇದರಲ್ಲಿದೆ.
2GB RAM ಮತ್ತು 16GB ಮೆಮೊರಿ ಸ್ಟೋರೇಜ್ ಇದ್ದು, ಆಂಡ್ರಾಯ್ಡ್ 11 ಗೊ ಎಡಿಶನ್, 5 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಹೊಸ ನೋಕಿಯಾ ಫೋನ್‌ನಲ್ಲಿದೆ. ಅಲ್ಲದೆ, 3000mAh ಬ್ಯಾಟರಿ ಬೆಂಬಲ ಹೊಂದಿದೆ.
You need a smartphone you can trust. Bringing the all new Nokia C01 Plus to you at an affordable price. Get 10% price support exclusively for Jio users. Buy it today.#NokiaC01Plus#LoveTrustKeeppic.twitter.com/UUjiXlbjc3