ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Nokia G11 Plus | ದೇಶದ ಮಾರುಕಟ್ಟೆಗೆ ನೋಕಿಯಾ ಹೊಸ ಸ್ಮಾರ್ಟ್‌ಫೋನ್

ನೋಕಿಯಾ, ನೂತನ ಸ್ಮಾರ್ಟ್‌ಫೋನ್ ಬಿಡುಗಡೆ
Last Updated 11 ಅಕ್ಟೋಬರ್ 2022, 13:48 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ, ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದೆ.

ನೋಕಿಯಾ ಜಿ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಹೊಸದಾಗಿ ನೋಕಿಯಾ G11 Plus ಬಿಡುಗಡೆಯಾಗಿದೆ.

ಹೊಸ ನೋಕಿಯಾ G11 Plus
ನೋಕಿಯಾ ನೂತನ ಸ್ಮಾರ್ಟ್‌ಫೋನ್ 6.5 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಹೊಂದಿದೆ.
ಒಕ್ಟಾ ಕೋರ್ ಉನಿಸಾಕ್ T606 ಪ್ರೊಸೆಸರ್, Mali G57 MP1 ಗ್ರಾಫಿಕ್ಸ್ ಬೆಂಬಲ ಹೊಂದಿದೆ. ಜತೆಗೆ 4 GB LPDDR4x RAM ಮತ್ತು 64 GB ಸ್ಟೋರೇಜ್ ಇದರಲ್ಲಿದೆ. 4G ಸಂಪರ್ಕ ಹಾಗೂ ಆ್ಯಂಡ್ರಾಯ್ಡ್ 12 ಓಎಸ್ ಮೂಲಕ ನೂತನ ನೋಕಿಯಾ ಕಾರ್ಯನಿರ್ವಹಿಸುತ್ತದೆ ಎಂದು ನೋಕಿಯಾ ತಿಳಿಸಿದೆ.

ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಜತೆಗೆ 2 ಮೆಗಾಪಿಕ್ಸೆಲ್ ಹಾಗೂ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ನೋಕಿಯಾ G11 Plus ಸ್ಮಾರ್ಟ್‌ಫೋನ್‌ನಲ್ಲಿದ್ದು, 5000mAh ಬ್ಯಾಟರಿ ಜತೆಗೆ 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಇದರಲ್ಲಿದೆ.

ಬೆಲೆ ವಿವರ
ಲೇಕ್ ಬ್ಲೂ ಮತ್ತು ಚಾರ್‌ಕೋಲ್ ಗ್ರೇ ಬಣ್ಣದಲ್ಲಿ ನೂತನ ನೋಕಿಯಾ ದೇಶದಲ್ಲಿ ₹12,499 ದರಕ್ಕೆ ಲಭ್ಯವಾಗುತ್ತಿದೆ. ನೋಕಿಯಾ ಆನ್‌ಲೈನ್ ಮತ್ತು ಪ್ರಮುಖ ಇ ಕಾಮರ್ಸ್, ರಿಟೇಲ್ ಶೋರೂಮ್ ಮೂಲಕ ಗ್ರಾಹಕರು ಖರೀದಿಸಬಹುದು ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT