ಬೆಲೆ ಮತ್ತು ಲಭ್ಯತೆ
ಹೊಸ ನೋಕಿಯಾ ಟಿ21 ಟ್ಯಾಬ್ ದೇಶದಲ್ಲಿ ₹19,999 ದರ ಹೊಂದಿದೆ. ಆದರೆ, ₹2,000 ವಿಶೇಷ ಡಿಸ್ಕೌಂಟ್ ಹೊಂದಿದ್ದು, ಅದರ ಮೂಲಕ, ಗ್ರಾಹಕರಿಗೆ ₹17,999ಕ್ಕೆ ಲಭ್ಯವಾಗಲಿದೆ. ಉಳಿದಂತೆ, ಪ್ರಿ ಬುಕಿಂಗ್ ಮಾಡುವ ಗ್ರಾಹಕರಿಗೆ ₹1,000 ಡಿಸ್ಕೌಂಟ್ ಹಾಗೂ ₹1,999 ಮೌಲ್ಯದ ಫ್ಲಿಪ್ ಕವರ್ ಉಚಿತವಾಗಿ ದೊರೆಯುತ್ತದೆ, ಈ ಕೊಡುಗೆ ಸೀಮಿತ ಅವಧಿಗೆ ಇರಲಿದೆ ಎಂದು ನೋಕಿಯಾ ಹೇಳಿದೆ.