ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Nothing Ear: ಹೊಸ ವಿನ್ಯಾಸದ ಇಯರ್‌ಬಡ್ಸ್ ಪರಿಚಯಿಸಿದ ನಥಿಂಗ್

ನಥಿಂಗ್ ನೂತನ ವಿನ್ಯಾಸದ ಇಯರ್‌ಬಡ್ಸ್
Last Updated 28 ಅಕ್ಟೋಬರ್ 2022, 11:40 IST
ಅಕ್ಷರ ಗಾತ್ರ

ಬೆಂಗಳೂರು: ಟೆಕ್ ಮತ್ತು ಗ್ಯಾಜೆಟ್ ಲೋಕದಲ್ಲಿ ಸದ್ದು ಮಾಡುತ್ತಿರುವ ನಥಿಂಗ್ ಕಂಪನಿ, ಹೊಸ ವಿನ್ಯಾಸದ ಇಯರ್‌ಬಡ್ಸ್ ಬಿಡುಗಡೆ ಮಾಡಿದೆ.

ನಥಿಂಗ್ ಇಯರ್ ಸ್ಟಿಕ್ಸ್ ಹೆಸರಿನ ಇಯರ್‌ಬಡ್ಸ್ ನವೆಂಬರ್ 4ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ದೇಶದಲ್ಲಿ ನಥಿಂಗ್ ಇಯರ್‌ಬಡ್ಸ್ ₹8,499 ದರ ಹೊಂದಿದೆ.

4.4 ಗ್ರಾಂ ತೂಕದ ನಥಿಂಗ್ ಇಯರ್‌ಬಡ್ಸ್ ಸ್ಟಿಕ್, ವಿನ್ಯಾಸದ ಮೂಲಕ ಬಳಕೆದಾರರ ಗಮನ ಸೆಳೆಯಲಿದೆ ಎಂದು ಕಂಪನಿ ಹೇಳಿದೆ.

ಯುಎಸ್‌ಬಿ–ಸಿ ಚಾರ್ಜಿಂಗ್ ಪೋರ್ಟ್ ಮೂಲಕ ನಥಿಂಗ್ ಇಯರ್‌ಬಡ್ಸ್ ಕಾರ್ಯನಿರ್ವಹಿಸಲಿದೆ. 12.5ಎಂಎಂ ಡೈನಾಮಿಕ್ ಡ್ರೈವರ್ ಇದ್ದು, ಬಳಕೆದಾರರಿಗೆ ಗುಣಮಟ್ಟದ, ಹೆಚ್ಚು ಸ್ಪಷ್ಟ ಶಬ್ಧ, ಸಂಗೀತದ ಅನುಭವ ನೀಡಲಿದೆ.

ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ, 7 ಗಂಟೆಗಳ ಕಾಲ ಇಯರ್‌ಬಡ್ಸ್ ಬಳಸಬಹುದು. ಅಲ್ಲದೆ, ಚಾರ್ಜಿಂಗ್ ಕೇಸ್ ಮೂಲಕ 29 ಗಂಟೆಗಳ ಚಾರ್ಜ್ ಲಭ್ಯವಾಗಲಿದೆ. ಇಯರ್ ಸ್ಟಿಕ್ ಅನ್ನು 10 ನಿಮಿಷ ಚಾರ್ಜ್ ಮಾಡಿದರೆ 2 ಗಂಟೆ ಕಾಲ ಬಳಸಬಹುದು ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT