ಶನಿವಾರ, ಮೇ 15, 2021
25 °C

ಆಕರ್ಷಕ ಫೀಚರ್, ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯ: ಒಪ್ಪೊದ ಎ54 ಭಾರತದಲ್ಲಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿ ಒಪ್ಪೊ, ಎ54 ಸರಣಿಯ ಹೊಸ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಏಪ್ರಿಲ್‌ 19ರಂದು ಬಿಡುಗಡೆಗೊಳಿಸಿದೆ.

ʼಕ್ಷಮತೆಯೇ ಶಕ್ತಿʼ ಟ್ಯಾಗ್‌ಲೈನ್‌ ಹೊಂದಿರುವ ಈ ಫೋನ್‌ ಏಪ್ರಿಲ್‌ 20ರಿಂದ (ಇಂದಿನಿಂದ) ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಆಕರ್ಷಕ ವಿನ್ಯಾಸ, ಅತ್ಯುತ್ತಮ ವೈಶಿಷ್ಟ್ಯಗಳು ಮತ್ತು ಉತ್ತಮ ಕ್ಷಮತೆ ಬಯಸಿದ್ದ ಗ್ರಾಹಕರಿಗೆ 13,490 ರೂ.ಗೆ ಸಿಗಲಿದೆ.

5,000mh ಸಾಮರ್ಥ್ಯದ ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್‌ ಸೌಲಭ್ಯ ಹೊಂದಿದ್ದು, ಆಕ್ಟಾಕೋರ್‌ ಪ್ರೊಸೆಸರ್‌, 128ಜಿಬಿ ಸಾಮರ್ಥ್ಯದ ಸ್ಪೇಸ್‌ (ಮೆಮೊರಿ ವ್ಯವಸ್ಥೆ) ಮತ್ತು 16.55ಸೆಂ.ಮೀ.ನಷ್ಟು ದೊಡ್ಡ ಡಿಸ್ಪ್ಲೇ ಹೊಂದಿದೆ. ಮಾತ್ರವಲ್ಲದೆ, ಈ ಸರಣಿಯ ಫೋನ್‌ಗಳಲ್ಲಿ ತಂತ್ರಜ್ಞಾನವನ್ನು ಮತ್ತಷ್ಟು ಮೋಜುದಾಯಕವಾಗಿ ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಇದರಲ್ಲಿನ ತಾಂತ್ರಿಕ ವೈಶಿಷ್ಟ್ಯಗಳು ಮತ್ತು ಅದರ ಉಪಯೋಗವನ್ನು ಬಳಕೆದಾರರು ತಮ್ಮ ಸಾಮಾಜಿಕ ಸಕ್ರಿಯ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ. ಗೌಪ್ಯತೆ ಮತ್ತು ಅನ್‌ಲಾಕ್‌‌ಗಾಗಿ ಮುಖ ಗುರುತಿಸುವಿಕೆ, ಫಿಂಗರ್‌ಪ್ರಿಂಟ್‌ ಸೌಲಭ್ಯವಿದೆ.

ಈ ಸಂಬಂಧ ಒಪ್ಪೊ ಇಂಡಿಯಾದ ಮಾರ್ಕೆಟಿಂಗ್‌ ವಿಭಾಗದ ಮುಖ್ಯಸ್ಥ ದಮಯಂತ್‌ ಸಿಂಗ್‌ ಕನೋರಿಯಾ ಮಾತನಾಡಿದ್ದು, ನಮ್ಮ ಬಳಕೆದಾರರ ಜೀವನಶೈಲಿಗೆ ಪೂರಕವಾಗಿ ಈ ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಅತ್ಯುತ್ತಮ ಕ್ಷಮತೆ ಮತ್ತು ಪ್ರಸ್ತುತ ಅಗತ್ಯಕ್ಕೆ ತಕ್ಕ ವಿನ್ಯಾಸಗಳ ಸಮತೋಲನ ಸಾಧಿಸಿದೆ. ವೇಗದ ಚಾರ್ಜಿಂಗ್‌ ಸೌಲಭ್ಯ ಹೊಂದಿರುವ ಬ್ಯಾಟರಿ ಸಾಮರ್ಥ್ಯವು ದಿನವಿಡೀ ಸೇವೆಗೆ ಲಭ್ಯವಿರುತ್ತದೆ. ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಮೆಮೊರಿ ಸೌಲಭ್ಯವೂ ಇದೆʼ ಎಂದು ತಿಳಿಸಿದ್ದಾರೆ.

ಒಪ್ಪೊ ಎ54 ವೈಶಿಷ್ಟ್ಯಗಳು
RAM /ROM: 4ಜಿಬಿ + 64ಜಿಬಿ
ತೂಕ: 192 ಗ್ರಾಂ
ಅಳತೆ: 163.6 x 75.7 ಅಗಲ, 8.4 ಮಿಮೀ ದಪ್ಪ
ಡಿಸ್ಪ್ಲೇ: 16.55 ಎಚ್‌ಡಿ+ಪಂಚ್‌ಹೋಲ್‌ ಎಲ್‌ಸಿಡಿ ಸ್ಕ್ರೀನ್‌
ಮುಂದಿನ ಕ್ಯಾಮೆರಾ: 16MP 
ಹಿಂಬದಿ ಕ್ಯಾಮೆರಾ: 13+2+2MP
ಬ್ಯಾಟರಿ ಸಾಮರ್ಥ್ಯ: 18W ವೇಗದ ಜಾರ್ಜಿಂಗ್‌, 5000mAh
ಓಎಸ್‌: ಕಲರ್‌ ಓಎಸ್‌ 7.2
ಬಣ್ಣ: ‌ಕಪ್ಪು, ನೀಲಿ, ಬಂಗಾರದ ಬಣ್ಣ
ಬೆಲೆ: 13,490. ರೂ (4ಜಿಬಿ+64ಜಿಬಿ), 14,490. ರೂ (4ಜಿಬಿ+128ಜಿಬಿ), 15,990. ರೂ (6ಜಿಬಿ + 128ಜಿಬಿ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು