ನವದೆಹಲಿ: ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒಪ್ಪೊ, ಎ74 5ಜಿ ಸ್ಮಾರ್ಟ್‌ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಆಕರ್ಷಕ ವಿನ್ಯಾಸ ಹೊಂದಿರುವ ಎ74 5ಜಿ ಸ್ಮಾರ್ಟ್‌ಫೋನ್ 90Hz ಹೈಪರ್ ಕಲರ್ ಸ್ಕ್ರೀನ್ ಹೊಂದಿದ್ದು, ಫೆಂಟಾಸ್ಟಿಕ್ ಪರ್ಪಲ್ ಮತ್ತು ಫ್ಲೂಯಿಡ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿರಲಿದ್ದು, ₹17,990ಕ್ಕೆ ದೊರೆಯಲಿದೆ.

ಓದಿ:ಆಕರ್ಷಕ ಫೀಚರ್, ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯ: ಒಪ್ಪೊದ ಎ54 ಭಾರತದಲ್ಲಿ ಬಿಡುಗಡೆ

ಒಪ್ಪೊ ಕಳೆದ ಕೆಲವು ತಿಂಗಳುಗಳಲ್ಲಿ ಭಾರತದ ಮಾರುಕಟ್ಟೆಗಳಲ್ಲಿ ರೆನೊ5 ಪ್ರೊ, ಎಫ್19 ಪ್ರೊ ಪ್ಲಸ್ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದೀಗ ₹20,000ಕ್ಕಿಂತ ಕಡಿಮೆ ಬೆಲೆಯ ಎ74 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಫೀಚರ್ಸ್

* 6 GB ರ್‍ಯಾಮ್ ಹಾಗೂ 128 GB ಮೆಮೊರಿ
* 6.5 ಇಂಚಿನ ಎಚ್‌ಡಿ ಸ್ಕ್ರೀನ್
* 90Hz ಹೈಪರ್ ಕಲರ್ ಸ್ಕ್ರೀನ್
* 5000mAh ಬ್ಯಾಟರಿ, 18W ವೇಗದ ಚಾರ್ಜಿಂಗ್ ಸಾಮರ್ಥ್ಯ
* ಡ್ಯುಯಲ್ ಸಿಮ್ (ನ್ಯಾನೊ)
* 48MP ಎಐ ಟ್ರಿಪಲ್ ಕ್ಯಾಮರಾ, 2MP ಡೆಪ್ತ್ ಕ್ಯಾಮರಾ, 2MP ಮ್ಯಾಕ್ರೊ ಕ್ಯಾಮರಾ ಮತ್ತು 8MP ಫ್ರಂಟ್ ಕ್ಯಾಮರಾ ಇವೆ

ಎಲ್ಲಿ ಖರೀದಿಸಬಹುದು?

ದೇಶದ ಪ್ರಮುಖ ಮಾರಾಟ ಮಳಿಗೆಗಳಲ್ಲಿ ಮತ್ತು ಇ–ಕಾಮರ್ಸ್ ತಾಣ ಅಮೆಜಾನ್‌ನಲ್ಲಿ ಇದೇ 26ರಿಂದ ಎ74 5ಜಿ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿರಲಿದೆ.

ಆಫರ್‌ಗಳು

ಅಮೆಜಾನ್‌ನಲ್ಲಿ ಆಯ್ದ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಪಾವತಿ, ಇಎಂಐ ಪಾವತಿಗೆ ಶೇ 10ರಷ್ಟು ಕ್ಯಾಷ್‌ಬ್ಯಾಕ್ ಇರಲಿದೆ. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿಯೂ ಆಯ್ದ ಬ್ಯಾಂಕ್‌ಗಳ ಕಾರ್ಡ್ ಮೂಲಕ ಪಾವತಿಗೆ ಶೇ 5ರಷ್ಟು ಕ್ಯಾಷ್‌ಬ್ಯಾಕ್ ಆಫರ್ ನೀಡಲಾಗಿದೆ. ಪೇಟಿಎಂ ಪಾವತಿಗೆ ಶೇ 11ರ ಕ್ಯಾಷ್‌ಬ್ಯಾಕ್ ಇದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.