ಶನಿವಾರ, ಏಪ್ರಿಲ್ 17, 2021
27 °C

ಪೇಟಿಎಂನಿಂದ ಸೌಂಡ್‌ಬಾಕ್ಸ್‌ 2.0, ಸ್ಮಾರ್ಟ್‌ ಪಿಒಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡಿಜಿಟಲ್ ಪಾವತಿಗೆ ಇನ್ನಷ್ಟು ಉತ್ತೇಜನ ನೀಡಲು ಪೇಟಿಎಂ ಕಂಪನಿಯು, ‘ಸೌಂಡ್‌ಬಾಕ್ಸ್‌ 2.0’ ಮತ್ತು ‘ಪೇಟಿಎಂ ಸ್ಮಾರ್ಟ್‌ ಪಿಒಎಸ್‌’ಅನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಡಿಜಿಟಲ್‌ ಪಾವತಿಗಳಲ್ಲಿ ‘ಪೇಟಿಎಂ ಸೌಂಡ್‌ಬಾಕ್ಸ್‌’ ಪ್ರಮುಖ ಪಾತ್ರ ವಹಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ‘ಸೌಂಡ್‌ಬಾಕ್ಸ್‌ 2.0’ ಸಾಧನವು 2000 ಎಂಎಎಚ್‌ ಬ್ಯಾಟರಿ, ಸಿಮ್‌ ಕಾರ್ಡ್‌ ಸ್ಲಾಟ್‌ ಹೊಂದಿದ್ದು, ವೈಫೈ ಸಂಪರ್ಕ ಇಲ್ಲದೆಯೇ ಕಾರ್ಯನಿರ್ವಹಿಸಬಲ್ಲದು. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು ಮತ್ತು ತೆಲುಗು ಭಾಷೆಗಳನ್ನು ಬೆಂಬಲಿಸುತ್ತದೆ.

ವೈಶಿಷ್ಟ್ಯ
* ಹಣ ಪಾವತಿಯಾಗಿದ್ದು ಧ್ವನಿ ಮತ್ತು ಪರದೆಯಲ್ಲಿ ಏಕಕಾಲಕ್ಕೆ ಖಾತರಿ
* ದಿನದ ವಹಿವಾಟಿನಲ್ಲಿ ಪಾವತಿಯಾಗಿರುವ ಒಟ್ಟು ಮೊತ್ತದ ವಿವರ
* ಬ್ಯಾಟರಿ ಸಾಮರ್ಥ್ಯ ಮತ್ತು ಬಾಳಿಕೆ ಅವಧಿಯು ಧ್ವನಿ ಸಂದೇಶದ ಮೂಲಕ ತಿಳಿಸುತ್ತದೆ

ಸ್ಮಾರ್ಟ್‌ ಪಿಒಎಸ್‌: ವ್ಯಾಪಾರಿಗಳಿಗೆ ತಮ್ಮ ಆ್ಯಂಡ್ರಾಯ್ಡ್‌ ಫೋನ್ ಮೂಲಕವೇ ಹಣ ಸ್ವೀಕರಿಸಲು ಇದು ಉಪಯುಕ್ತ ಎಂಬುದು ಕಂಪನಿಯ ಹೇಳಿಕೆ. ಈ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡರೆ ಗ್ರಾಹಕರು ಖರೀದಿಸಿದ ಉತ್ಪನ್ನಗಳಿಗೆ ಡೆಬಿಟ್‌ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಬಹುದಾಗಿದೆ.

ಈ ಸ್ಮಾರ್ಟ್‌ ಪಿಒಎಸ್‌ ಮೂಲಕ ಯಾವುದೇ ಸಮಯದಲ್ಲಿ, ಕಾಂಟ್ಯಾಕ್ಟ್‌ಲೆಸ್‌ ಕಾರ್ಡ್‌ ಪೇಮೆಂಟ್‌ ಸ್ವೀಕರಿಸಬಹುದು. ಇದಕ್ಕಾಗಿ ಪೇಟಿಎಂ ಕಂಪನಿಯು ವೀಸಾ ಮತ್ತು ಮಾಸ್ಟರ್‌ಕಾರ್ಡ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. ಶೀಘ್ರವೇ ರುಪೇ ಕಾರ್ಡ್‌ ಪಾವತಿಯೂ ಲಭ್ಯವಾಗಲಿದೆ.

***
ದೇಶದ ಐದು ಕೋಟಿ ಕಿರು ಮತ್ತು ಸಣ್ಣ ವ್ಯಾಪಾರಸ್ಥರಿಗೆ ಹೊಸ ಯುಗದ ಹಣಕಾಸು ತಂತ್ರಜ್ಞಾನಗಳು ಮತ್ತು ಸೇವೆಗಳನ್ನು ನೀಡಲು ಪೇಟಿಎಂ ಬದ್ಧವಾಗಿದೆ. ಕಡಿಮೆ ಬೆಲೆಗೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಲು ಸಣ್ಣ ವ್ಯಾಪಾರಸ್ಥರಿಗೆ ಈ ಎರಡೂ ಸಾಧನಗಳು ಅವಕಾಶ ಕಲ್ಪಿಸಲಿವೆ.
-ವಿಜಯ್ ಶೇಖರ್ ಶರ್ಮಾ, ಪೇಟಿಎಂ ಸಿಇಒ

***

ಕಾಂಟ್ಯಾಕ್ಟ್‌ಲೆಸ್‌ ಪೇಮೆಂಟ್‌ ವ್ಯವಸ್ಥೆಗೆ ಪೇಟಿಎಂ ಪ್ರವೇಶವು ದೇಶದಾದ್ಯಂತ ಈ ವ್ಯವಸ್ಥೆಯ ಅಳವಡಿಕೆ ಮತ್ತು ಬಳಕೆಗೆ ವೇಗ ನೀಡಲಿದೆ.
-ಟಿ.ಆರ್‌.ರಾಮಚಂದ್ರನ್, ವೀಸಾದ ಭಾರತ ಮತ್ತು ದಕ್ಷಿಣ ಏಷ್ಯಾ ಸಮೂಹ ದೇಶಗಳ ವ್ಯವಸ್ಥಾಪಕ

***

ದೇಶದ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಲು ಮತ್ತು ಲಕ್ಷಗಟ್ಟಲೆ ಭಾರತೀಯರ ಡಿಜಿಟಲ್‌ ಪಾವತಿ ಪ್ರಯಾಣದಲ್ಲಿ ಪೇಟಿಎಂ ಮಹತ್ವದ ಪಾತ್ರ ವಹಿಸಿದೆ.
-ದಿಲೀಪ್‌ ಅಸ್ಬೆ, ರಾಷ್ಟ್ರೀಯ ಪಾವತಿ ನಿಗಮದ (ಎನ್‌ಪಿಸಿಐ) ಸಿಇಒ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು