ಭಾನುವಾರ, ನವೆಂಬರ್ 27, 2022
27 °C
ಪೋರ್ಶೆ ಬಿಡುಗಡೆ ಮಾಡಿರುವ ಹೊಸ ಸೌಂಡ್‌ಬಾರ್ ಸ್ಪೀಕರ್

ಪೋರ್ಶೆ 911 Soundbar 2.0 Pro: ದೇಶದಲ್ಲಿ ₹10 ಲಕ್ಷ ದರ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೂಪರ್ ಕಾರ್ ತಯಾರಿಕ ಸಂಸ್ಥೆ ಪೋರ್ಶೆ, ಆಡಿಯೋ ಸರಣಿಯಲ್ಲಿ ಹೊಸ ಸೌಂಡ್‌ಬಾರ್ ಸ್ಪೀಕರ್ ಬಿಡುಗಡೆ ಮಾಡಿದೆ.

300 ವಾಟ್ ಸ್ಪೀಕರ್ ಇದಾಗಿದ್ದು, ದೇಶದಲ್ಲಿ ₹10 ಲಕ್ಷ ದರ ಇರಲಿದೆ. ಪೋರ್ಶೆ 911 ಸೌಂಡ್‌ಬಾರ್ 2.0 ಪ್ರೊ ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಹೊಸ ಸ್ಪೀಕರ್ 5.0 ಬ್ಲೂಟೂತ್, ಆ್ಯಪಲ್ ಏರ್‌ಪ್ಲೇ 2, ಗೂಗಲ್ ಕ್ರೋಮ್‌ಕಾಸ್ಟ್ ಮತ್ತು ಸ್ಪಾಟಿಫೈ ಕನೆಕ್ಟ್ ಆಯ್ಕೆಗಳನ್ನು ಹೊಂದಿದೆ.

ಪೋರ್ಶೆ 992 ಜಿಟಿ3 ಕಾರಿನ ನೈಜ ಸೈಲೆನ್ಸರ್ ಬಳಸಿ ಹೊಸ ಸ್ಪೀಕರ್ ತಯಾರಿಸಲಿದೆ.

ಹೊಸ ಪೋರ್ಶೆ ಸ್ಪೀಕರ್ ಅನ್ನು ಸೀಮಿತ (500) ಸಂಖ್ಯೆಯಲ್ಲಿ ತಯಾರಿಸಲಾಗುತ್ತದೆ.

ಈಗಾಗಲೇ ಪ್ರಿ ಆರ್ಡರ್ ಆರಂಭವಾಗಿದ್ದು, 2023ರ ಜನವರಿಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು