ಶನಿವಾರ, ಏಪ್ರಿಲ್ 4, 2020
19 °C

ಇಸ್ರೊದ 'ನಾವಿಕ್' ಮಾರ್ಗಸೂಚಿ ವ್ಯವಸ್ಥೆಗೆ ಸಹಕಾರಿ 'ಸ್ನ್ಯಾಪ್‌ಡ್ರ್ಯಾಗನ್' ಚಿಪ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸ್ಮಾರ್ಟ್‌ಫೋನ್‌ಗಳಿಗೆ ಮತ್ತಷ್ಟು ವೇಗ ನೀಡುವ, ಹೊಸ ಸಾಧ್ಯತೆಗಳಿಗೆ ಅವಕಾಶ ನೀಡುವ ಸ್ನ್ಯಾಪ್‌ಡ್ರ್ಯಾಗನ್‌ ಚಿಪ್‌ಗಳನ್ನು ಕ್ವಾಲ್ಕಾಮ್‌ ಬಿಡುಗಡೆ ಮಾಡಿದೆ. 

ವೈಫ್‌ 6, ಬ್ಲೂಟೂಥ್‌ 5.1 ಕಾರ್ಯನಿರ್ವಹಣೆಗೆ ಸಹಕಾರಿಯಾಗುವ ಹಾಗೂ ವೇಗದ 4ಜಿ ಸಂಪರ್ಕ, ವಾಯ್ಸ್‌ ಅಸಿಸ್ಟಂಟ್‌ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಗೆ ಹೊಸ ಜಿಪ್‌ಗಳು ಅವಕಾಶ ನೀಡುತ್ತವೆ. ಜಗತ್ತಿನಾದ್ಯಂತ 5ಜಿ ಅಭಿವೃದ್ಧಿ ಬಗೆಗೆ ಗಮನ ಕೇಂದ್ರೀಕರಿಸಿದ್ದರೆ, ಭಾರತ ಸೇರಿದಂತೆ ಇತರೆ ವಲಯಗಳಿಗಾಗಿ 4ಜಿ ತಂತ್ರಜ್ಞಾನ ಅಭಿವೃದ್ಧಿ ಮುಂದುವರಿಸುವುದಾಗಿ ಕ್ವಾಲ್ಕಾಮ್‌ ಹೇಳಿದೆ. 

ಕ್ವಾಲ್ಕಾಮ್‌ ಸ್ನ್ಯಾಪ್‌ಡ್ರ್ಯಾಗನ್‌ 720ಜಿ, ಸ್ನ್ಯಾಪ್‌ಡ್ರ್ಯಾಗನ್‌ 662 ಹಾಗೂ ಸ್ನ್ಯಾಪ್‌ಡ್ರ್ಯಾಗನ್‌ 460 ಅನಾವರಣಗೊಂಡಿದೆ. ಮೂರೂ ಮಾದರಿಯ ಚಿಪ್‌ಗಳಲ್ಲಿ ಕ್ವಾಲ್ಕಾಮ್‌ ಎಐ ಎಂಜಿನ್‌ ಹಾಗೂ ಲೊಕೇಶ್‌ ವ್ಯವಸ್ಥೆಯನ್ನು ಒಳಗೊಂಡಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿ ಪಡಿಸಿರುವ ಏಳು ಉಪಗ್ರಹಗಳ ಮೂಲಕ ನಿಖರ ಮಾರ್ಗಸೂಚಿಸುವ 'ನಾವಿಕ್‌' ವ್ಯವಸ್ಥೆಗೆ ಸಹಕಾರಿಯಾಗಲಿದೆ. ನಾವಿಕ್‌ಗೆ ಸಹಕಾರಿಯಾಗಬಲ್ಲ ಮೊಬೈಲ್‌ ಚಿಪ್‌ಗಳನ್ನು ಇದೇ ಮೊದಲ ಬಾರಿಗೆ ಕ್ವಾಲ್ಕಾಮ್‌ ಅಭಿವೃದ್ಧಿ ಪಡಿಸಿದೆ. 

ಇದನ್ನೂ ಓದಿ: ನಾವಿಕ್‌: ಬದಲಾಗಲಿದೆ ಸಂಚಾರ ಸೂತ್ರ

ಈ ವರ್ಷ ಮೊದಲ ತ್ರೈಮಾಸಿಕದಲ್ಲಿ ಸ್ನ್ಯಾಪ್‌ಡ್ರ್ಯಾಗನ್‌ 720ಜಿ ಚಿಪ್‌ ಒಳಗೊಂಡಿರುವ ಸ್ಮಾರ್ಟ್‌ಫೋನ್‌ ಹೊರಬರಲಿದೆ. ರಿಯಲ್‌ಮಿ ಮತ್ತು ಶಿಯೋಮಿ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಆರಂಭಿಕವಾಗಿ 720ಜಿ ಚಿಪ್‌ ಬಳಕೆಗೆ ಬರಲಿದೆ ಎನ್ನಲಾಗುತ್ತಿದೆ. 

ಎಚ್‌ಡಿಆರ್‌ ಗೇಮಿಂಗ್‌, 4ಕೆ ವಿಡಿಯೊ ರೆಕಾರ್ಡಿಂಗ್‌ ಹಾಗೂ 192 ಮೆಗಾಪಿಕ್ಸೆಲ್‌ ಫೋಟೊ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು