ಬೆಂಗಳೂರು: ರಿಯಲ್‌ಮಿ ಸ್ಮಾರ್ಟ್‌ಫೋನ್ ಕಂಪನಿ ಭಾರತದಲ್ಲಿ ಸ್ಮಾರ್ಟ್ ಟಿವಿ, ಸ್ಮಾರ್ಟ್‌ವಾಚ್, ಬಡ್ಸ್ ಏರ್ ಹಾಗೂ ಪವರ್ ಬ್ಯಾಂಕ್ ಬಿಡುಗಡೆ ಮಾಡಿದೆ.

ರಿಯಲ್‌ಮಿ ಸ್ಮಾರ್ಟ್ ಟಿವಿ 32 ಇಂಚು (ಎಚ್‌ಡಿ) ಮತ್ತು 43 ಇಂಚು ಫುಲ್ ಎಚ್‌ಡಿ ಮಾದರಿಗಳಲ್ಲಿ ಲಭ್ಯವಿದೆ. 32 ಇಂಚು ಟಿವಿಗೆ ₹12,999 ಹಾಗೂ 43 ಇಂಚು ಟಿವಿಗೆ ₹21,999 ನಿಗದಿಯಾಗಿದೆ. ಜೂನ್ 2ರಿಂದ ರಿಯಲ್‌ಮಿ ಅಧಿಕೃತ ವೆಬ್‌ಸೈಟ್ ಹಾಗೂ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದಾಗಿದೆ. ಖರೀದಿಯೊಂದಿಗೆ 1 ವರ್ಷ ಹೆಚ್ಚುವರಿ ವಾರೆಂಟಿ (ಟವಿ ಪ್ಯಾನೆಲ್‌ಗೆ ಮಾತ್ರ) , 6 ತಿಂಗಳು ಯುಟ್ಯೂಬ್ ಪ್ರೀಮಿಯಂ ನೀಡಲಾಗಿದೆ.

178 ಡಿಗ್ರಿ ವೀಕ್ಷಣೆ ಕೋನ, 64 ಬಿಟ್ ಮೀಡಿಯಾಟೆಕ್ ಪ್ರೊಸೆಸರ್, ಮಾಲಿ 470 ಜಿಪಿಯು, 1ಜಿಬಿ ರ್‍ಯಾಮ್ ಹಾಗೂ 8ಜಿಬಿ ಸಂಗ್ರಹ ಸಾಮರ್ಥ್ಯ ಒಳಗೊಂಡಿದೆ. ಡಿಸ್‌ಪ್ಲೇಯಲ್ಲಿ ಕ್ರೋಮಾ ಬೂಸ್ಟ್, ಎಚ್‌ಡಿಆರ್ 10 ಹಾಗೂ ಎಚ್‌ಎಲ್‌ಜಿ ಫಾರ್ಮ್ಯಾಟ್‌ಗೆ ಸಹಕಾರಿಯಾಗಿದೆ. ಆ್ಯಂಡ್ರಾಯ್ಡ್ ಟಿವಿ ಆಗಿರುವುದರಿಂದ, ಎಲ್ಲ ಆ್ಯಂಡ್ರಾಯ್ಡ್ ಆ್ಯಪ್‌ಗಳೊಂದಿಗೆ ನೆಟ್‌ಫ್ಲಿಕ್ಸ್, ಯುಟ್ಯೂಬ್, ಡಿಸ್ನಿ+ ಸೇರಿ ಇನ್ನಷ್ಟು ಸಿನಿಮಾ ವೀಕ್ಷಣೆಯ ಆ್ಯಪ್‌ಗಳನ್ನು ಹೊಂದಿದೆ. ಗೂಗಲ್ ಅಸಿಸ್ಟಂಟ್ ಬಳಕೆ ಸಾಧ್ಯವಿದೆ.

2.4ಜಿಬಿ ವೈಫೈ, ಬ್ಲೂಟೂಥ್ 5, ಈಥರ್‌ನೆಟ್, ಎಚ್‌ಡಿಎಂಐ ಪೋರ್ಟ್‌ಗಳು ಹಾಗೂ ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದೆ. ಟಿವಿ ಜೊತೆ ಸಂಪರ್ಕಿಸುವ ಕ್ರೋಮ್‌ಕಾಸ್ಟ್ ಸೌಲಭ್ಯವೂ ಇದೆ. ಟಿವಿಯೊಂದಿಗೆ ನೀಡಲಾಗುವ ಆಲ್–ಇನ್–ಒನ್ ರಿಮೋಟ್‌ನಲ್ಲಿ ಪ್ರೈಮ್ ವಿಡಿಯೊ, ನೆಟ್‌ಫ್ಲಿಕ್ಸ್ ಹಾಗೂ ಯುಟ್ಯೂಬ್‌ಗೆ ಪ್ರತ್ಯೇಕ ಬಟ್‌ನ ನೀಡಲಾಗಿದೆ.

ರಿಯಲ್‌ಮಿ ಸೌಂಡ್‌ಬಾರ್

ನಾಲ್ಕು ಸ್ಪೀಕರ್ ಹಾಗೂ ಒಂದು ಸಬ್‌ಊಫರ್ ಒಳಗೊಂಡ 100ವ್ಯಾಟ್ಸ್ ಸೌಂಡ್‌ಬಾರ್ ಪ್ರಕಟಿಸಿದೆ. ಆದರೆ, ಇದರ ಬೆಲೆ ಹಾಗೂ ಬಿಡುಗಡೆ ದಿನಾಂಕ ಬಹಿರಂಗ ಪಡಿಸಿಲ್ಲ.

ರಿಯಲ್‌ಮಿ ವಾಚ್: ಬೆಲೆ ₹3,999

* 3.5 ಸೆಂ.ಮೀ ಕಲರ್ ಟಚ್‌ಸ್ಕ್ರೀನ್
* 14 ಸ್ಪೋರ್ಟ್ಸ್ ಮೋಡ್
* ಹಾರ್ಟ್ ರೇಟ್; ರಕ್ತ–ಆಕ್ಸಿಜನ್ ಮಾನಿಟರ್
* ಮ್ಯೂಸಿಕ್, ಕ್ಯಾಮೆರಾ ಕಂಟ್ರೋಲ್
* ಸ್ಮಾರ್ಟ್ ನೋಟಿಫಿಕೇಷನ್

ರಿಯಲ್‌ಮಿ ಬಡ್ಸ್ ಏರ್ ನಿಯೊ: ಬೆಲೆ ₹2,999

* ಆಟೊ ಕನೆಕ್ಷನ್
* 17 ಗಂಟೆಗಳ ಪ್ಲೇಬ್ಯಾಕ್
* ಇಂಟೆಲಿಜೆಂಟ್ ಟಚ್

ರಿಯಲ್‌ಮಿ 10,000 ಎಂಎಎಚ್ ಪವರ್ ಬ್ಯಾಂಕ್ 2: ಬೆಲೆ ₹999

* 18 ವ್ಯಾಟ್ ಟುವೇ ಚಾರ್ಜ್
* ಯುಎಸ್‌ಬಿ ಎ ಮತ್ತು ಸಿ ಪೋರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.