ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್‌ಮಿ ಇಯರ್‌ಬಡ್ಸ್ ಬಿಡುಗಡೆ: ಬೆಲೆ ₹1,799

Last Updated 26 ಮೇ 2020, 8:11 IST
ಅಕ್ಷರ ಗಾತ್ರ

ಬೆಂಗಳೂರು: ಶಿಯೋಮಿ ಭಾರತದಲ್ಲಿ ರೆಡ್‌ಮಿ ಇಯರ್‌ಬಡ್ಸ್‌ ಎಸ್‌ ಬಿಡುಗಡೆ ಮಾಡಿದ್ದು, ಬೆಲೆ ₹1,799 ನಿಗದಿ ಪಡಿಸಿದೆ. ವೈರ್‌ಲೆಸ್‌ ಇಯರ್‌ಫೋನ್‌ಗಳ ಪೈಕಿ ಕೈಗೆಟುಕುವ ದರ ಹಾಗೂ ಆಧುನಿಕ ತಂತ್ರಜ್ಞಾನವನ್ನು ಇದು ಒಳಗೊಂಡಿದೆ.

ಪ್ರಸ್ತುತ ಕಪ್ಪು ಬಣ್ಣದಲ್ಲಿ ಮಾತ್ರ ಇಯರ್‌ಬಡ್ಸ್‌ ಎಸ್‌ ಲಭ್ಯವಿದೆ. ಮೊಬೈಲ್‌ ಅಥವಾ ಇತರೆ ಸಾಧನಗಳೊಂದಿಗೆ ಸಂಪರ್ಕಿಸಲು ಬ್ಲೂಟೂಥ್‌ 5.0 ಹೊಂದಿದೆ. ಎಂಐ ಅಧಿಕೃತ ವೆಬ್‌ಸೈಟ್‌ ಹಾಗೂ ಅಮೆಜಾನ್‌ನಲ್ಲಿ ಮೇ 27ರ ಮಧ್ಯಾಹ್ನ 12ರಿಂದ ಖರೀದಿಗೆ ಸಿಗಲಿದೆ. ಇತ್ತೀಚೆಗಷ್ಟೆ ಎಂಐ ಟ್ರೂ ವೈರ್‌ಲೆಸ್‌ ಇಯರ್‌ಫೋನ್ಸ್‌ 2 ಬಿಡುಗಡೆಯಾಗಿದೆ. ಅದರ ಬೆಲೆ ₹4,499.

ಉತ್ತಮ ಗುಣಮಟ್ಟ ಹಾಗೂ ಆಯ್ಕೆಗಳನ್ನು ಹೊಂದಿರುವ ವೈರ್‌ಲೆಸ್‌ ಇಯರ್‌ಫೋನ್‌ಗೆ ಕನಿಷ್ಠ ₹4,000 ಇದೆ. ಈಗ ಬಿಡುಗಡೆಯಾಗಿರುವ ಇಯರ್‌ಬಡ್ಸ್‌ ಎಸ್‌ ಬೇಸಿಕ್‌ ಆಯ್ಕೆಗಳೊಂದಿಗೆ ಕಡಿಮೆ ದರದಲ್ಲಿ ಸಿಗುತ್ತಿದೆ. ಒಂದು ಇಯರ್‌ಬಡ್‌ ಕೇವಲ 4.1 ಗ್ರಾಂ ತೂಕವಿರುವುದರಿಂದ ಬಳಸುವವರಿಗೆ ಹಗುರವಾದ ಅನುಭವ ಸಿಗಲಿದೆ. ಒಮ್ಮೆ ಚಾರ್ಜ್‌ ಮಾಡಿದರೆ 12 ಗಂಟೆಗಳ ವರೆಗೂ ಬಳಕೆ ಮಾಡಬಹುದು ಹಾಗೂ ನಿರಂತರ 4 ಗಂಟೆಗಳ ವರೆಗೂ ಕಾರ್ಯಾಚರಿಸುತ್ತದೆ.

ಲೊ–ಲ್ಯಾಟೆನ್ಸಿ ಮೋಡ್‌ನಿಂದಾಗಿ ಮೊಬೈಲ್‌ ಗೇಮಿಂಗ್‌ ಬಳಕೆದಾರರಿಗೆ ಈ ಇಯರ್‌ಬಡ್‌ ಉತ್ತಮ ಅನುಭವ ನೀಡಲಿದೆ. ಹೊರಗಿನ ಸದ್ದನ್ನು ಕಡಿತಗೊಳಿಸುವ ಹಾಗೂ ವಾಯ್ಸ್‌ ಅಸಿಸ್ಟಂಟ್ಸ್‌ ಸೌಲಭ್ಯವಿದೆ. ವೈರ್‌ಲೆಸ್‌ ಇಯರ್‌ಫೋನ್‌ಗಳಲ್ಲಿಯೂ ಈಗ ರೆಡ್‌ಮಿ, ನಾಯ್ಸ್‌, ಬೋಟ್‌ ಹಾಗೂ ಇತರೆ ಬ್ರ್ಯಾಂಡ್‌ಗಳೊಂದಿಗೆ ಪೈಪೋಟೆ ನಡೆಸಲಿದೆ. ಸೋಮವಾರ ರಿಯಲ್‌ಮಿ ಬಡ್ಸ್‌ ಏರ್‌ ನಿಯೊ ಟ್ರ್ಯೂ ವೈರ್‌ಲೆಸ್‌ ಇಯರ್‌ಫೋನ್ಸ್‌ ಬಿಡುಗಡೆ ಮಾಡಿದ್ದು, ₹2,999 ನಿಗದಿಯಾಗಿದೆ.

ಏಪ್ರಿಲ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾಗಿದ್ದ ರೆಡ್‌ಮಿ ಏರ್‌ಡಾಟ್ಸ್‌ ಎಸ್‌, ಭಾರತದಲ್ಲಿ ರೆಡ್‌ಮಿ ಇಯರ್‌ಬಡ್ಸ್‌ ಎಸ್‌ ಹೆಸರಿನಲ್ಲಿ ಬಿಡುಗಡೆಯಾಗಿದೆ. ಚೀನಾದಲ್ಲಿ ಏರ್‌ಡಾಟ್ಸ್‌ ಎಸ್‌ ಬೆಲೆ 100 ಯುವಾನ್ (ಸುಮಾರು ₹1,100). ಅದಕ್ಕೆ ಹೋಲಿಸಿದರೆ, ಭಾರತದಲ್ಲಿ ಬೆಲೆ ಹೆಚ್ಚಿಸಲಾಗಿದೆ.

ರೆಡ್‌ಮಿ ಇಯರ್‌ಬಡ್ಸ್‌ ಎಸ್‌ ಗುಣಲಕ್ಷಣಗಳು:
* ಸಂಪರ್ಕಿಸಲು ಬ್ಲೂಟೂಥ್‌ 5.0
* ಹಗುರ ಹಾಗೂ ಚಿಕ್ಕದು
*12 ಗಂಟೆ ವರೆಗೂ ಚಾರ್ಜ್‌
* ಲೊ ಲೇಟೆನ್ಸಿ ಗೇಮಿಂಗ್‌ ಮೋಡ್‌
* ಮಲ್ಟಿಫಂಕ್ಷನ್‌ ಬಟನ್‌
* ಹ್ಯಾಂಡ್ಸ್ ಫ್ರೀ ವಾಯ್ಸ್ ಅಸಿಸ್ಟಂಟ್‌
* ಬೆವರು ಹಾಗೂ ನೀರಿನ ಹನಿಗಳಿಂದ ರಕ್ಷಣೆ ನೀಡುವ ವಿನ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT