ನವದೆಹಲಿ: ಏಳು ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ಕ್ಷೇತ್ರದಲ್ಲಿ ಒಟ್ಟು ₹10 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ.

ಮೊಬೈಲ್ ಸೇವೆಗಳು ಹಾಗೂ ಇಂಟರ್ನೆಟ್ ಸಂಪರ್ಕವು ಎಲ್ಲರಿಗೂ ಕೈಗೆಟಕುವಂತೆ ಮಾಡುವಲ್ಲಿ ಹಾಗೂ ಅವು ದೇಶದೆಲ್ಲೆಡೆ ಲಭ್ಯವಾಗುವಂತೆ ಮಾಡುವಲ್ಲಿ ತಮ್ಮ ಕಂಪನಿಯು ಯಾವ ಪಾತ್ರ ವಹಿಸಿತ್ತೋ ಅದೇ ಬಗೆಯ ಪಾತ್ರವನ್ನು ಎ.ಐ ಕ್ಷೇತ್ರದಲ್ಲಿಯೂ ನಿರ್ವಹಿಸಲಾಗುವುದು ಎಂದು ಅಂಬಾನಿ ಅವರು ಘೋಷಿದ್ದಾರೆ.

‘ಇಂಡಿಯಾ ಎ.ಐ. ಇಂಪ್ಯಾಕ್ಟ್ ಶೃಂಗ’ದಲ್ಲಿ ಮಾತನಾಡಿದ ಅವರು, ಈ ಕ್ರಮದಿಂದಾಗಿ ದೇಶದ ಪ್ರತಿ ವ್ಯಕ್ತಿ, ಪ್ರತಿ ಉದ್ದಿಮೆ, ಪ್ರತಿಯೊಂದು ಸರ್ಕಾರಿ ಸೇವೆ ಎ.ಐ ಜೊತೆ ಸಂಪರ್ಕಕ್ಕೆ ಬರಲಿದೆ ಎಂದು ಹೇಳಿದ್ದಾರೆ.

‘ಜಿಯೊ ಕಂಪನಿಯು ಭಾರತವನ್ನು ಇಂಟರ್ನೆಟ್ ಯುಗದ ಜೊತೆ ಬೆಸೆಯಿತು. ಈಗ ಜಿಯೊ ಕಂಪನಿಯು ಭಾರತವನ್ನು ಬುದ್ಧಿಮತ್ತೆಯ ಯುಗದೊಂದಿಗೆ ಜೋಡಿಸಲಿದೆ. ಭಾರತವು ಬುದ್ಧಿಮತ್ತೆಗೆ ಸಂಬಂಧಿಸಿದ ಸೇವೆಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯುತ್ತ ಕುಳಿತಿರಲಾಗದು. ಹೀಗಾಗಿ ನಾವು ಇಂಟರ್ನೆಟ್ ಡೇಟಾ ಬೆಲೆಯನ್ನು ಹೇಗೆ ಕಡಿಮೆ ಮಾಡಿದೆವೋ ಅದೇ ಬಗೆಯಲ್ಲಿ ಬುದ್ಧಿಮತ್ತೆಯ ವೆಚ್ಚವನ್ನೂ ಕಡಿಮೆ ಮಾಡಲಿದ್ದೇವೆ’ ಎಂದು ಅಂಬಾನಿ ಹೇಳಿದ್ದಾರೆ.

‘ಇದು ಊಹೆಗಳನ್ನು ಆಧರಿಸಿದ ಹೂಡಿಕೆ ಅಲ್ಲ... ಇದು ಶಿಸ್ತುಬದ್ಧವಾಗಿ, ದೇಶವನ್ನು ಕಟ್ಟಲು ಬಳಸುವ ಬಂಡವಾಳ. ಇದು ಮುಂದಿನ ಹಲವು ದಶಕಗಳವರೆಗೆ ಆರ್ಥಿಕ ಮೌಲ್ಯ ಸೃಷ್ಟಿಸಿಕೊಡುವ ಉದ್ದೇಶದ ಹೂಡಿಕೆ’ ಎಂದು ಅವರು ವಿವರಿಸಿದ್ದಾರೆ.

ಜಿಯೊ ಇಂಟೆಲಿಜೆನ್ಸ್ ಕಂಪನಿಯು ಭಾರತದಲ್ಲಿ ಭಾರತದ್ದೇ ಆದ ಎ.ಐ. ಮೂಲಸೌಕರ್ಯವನ್ನು ನಿರ್ಮಿಸಲಿದೆ, ಎ.ಐ ಸೌಲಭ್ಯವು ಕಿರಾಣಿ ಅಂಗಡಿಗಳಿಂದ ಕ್ಲಿನಿಕ್ಗಳವರೆಗೆ, ತರಗತಿಗಳಿಂದ ಕೃಷಿ ಜಮೀನಿನವರೆಗೆ ಲಭ್ಯವಾಗುವಂತೆ ಮಾಡಲಿದೆ ಎಂದು ಪ್ರಕಟಿಸಿದ್ದಾರೆ.

ಎ.ಐ ಎಂಬುದು ಇನ್ನೊಂದು ತಂತ್ರಜ್ಞಾನವಷ್ಟೇ ಅಲ್ಲ. ಇದೇ ಮೊದಲ ಬಾರಿಗೆ ಮನುಷ್ಯನು ಮನುಷ್ಯನಂತೆಯೇ ಕಲಿಯಬಲ್ಲ, ಮಾತನಾಡಬಲ್ಲ, ವಿಶ್ಲೇಷಣೆ ನಡೆಸಬಲ್ಲ, ತಾನಾಗಿಯೇ ಹೊಸದೊಂದನ್ನು ಸೃಷ್ಟಿಸಬಲ್ಲ ವ್ಯವಸ್ಥೆಗಳನ್ನು ಕಟ್ಟಿದ್ದಾನೆ ಎಂದು ಅವರು ಬಣ್ಣಿಸಿದ್ದಾರೆ.

‘ನಾವು ಇನ್ನೂ ಎ.ಐ ಯುಗದ ಆರಂಭದಲ್ಲಿ ಇದ್ದೇನೆ. ಎ.ಐ ವ್ಯವಸ್ಥೆಯಿಂದ ಸಿಗಬಹುದಾದ ಅತ್ಯುತ್ತಮ ಕೆಲಸಗಳನ್ನು ಇನ್ನಷ್ಟೇ ಕಾಣಬೇಕಿದೆ’ ಎಂದು ಹೇಳಿದ್ದಾರೆ.

Highlights - ಅಂಬಾನಿ ಅವರು ಹೇಳಿರುವ ಹೂಡಿಕೆಗಳು ಮೂರು ಅಂಶಗಳ ಮೇಲೆ ಗಮನ ಕೇಂದ್ರೀಕರಿಸಲಿವೆ. * ಒಂದು ಗೀಗಾವಾಟ್ಗಿಂತ ಹೆಚ್ಚಿನ ಹಾಗೂ ಎ.ಐ ಉದ್ದೇಶಗಳ ಬಳಕೆಗೆ ಸಿದ್ಧವಾದ ದತ್ತಾಂಶ ಕೇಂದ್ರಗಳು * ಗರಿಷ್ಠ 10 ಗಿಗಾವಾಟ್ಗಳವರೆಗೆ ಪರಿಸರ ಪೂರಕ ಮಿಗತೆ ಇಂಧನವನ್ನು ಬಳಕೆ ಮಾಡಿಕೊಳ್ಳುವುದು * ಎ.ಐ. ಸೌಲಭ್ಯವನ್ನು ವೇಗವಾಗಿ ದೇಶದೆಲ್ಲೆಡೆಗೆ ಒದಗಿಸುವ ಉದ್ದೇಶದಿಂದ ದತ್ತಾಂಶವನ್ನು ಸ್ಥಳೀಯವಾಗಿ ಸಂಗ್ರಹಿಸಿ ಇಡುವ ವ್ಯವಸ್ಥೆಯನ್ನು ಜಿಯೊ ಕಂಪನಿಯ ಜಾಲದ ಜೊತೆ ಬೆಸೆಯುವುದು
.ಭಾರತ ಎ.ಐ ಕ್ರಾಂತಿಯ ನಾಯಕ: AI ಶೃಂಗದಲ್ಲಿ ನರೇಂದ್ರ ಮೋದಿ.AI Impact Summit: ಎಪ್ಸ್ಟೈನ್ ವಿವಾದ ಬೆನ್ನಲ್ಲೇ ಬಿಲ್ ಗೇಟ್ಸ್ ಗೈರು ಹಾಜರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.