ಭಾನುವಾರ, ಜೂನ್ 13, 2021
25 °C

ಸ್ಯಾಮ್‌ಸಂಗ್‌ನಿಂದ ಸೋಂಕು ನಿವಾರಿಸುವ ಸಾಧನ; ಫೋನ್‌ ಚಾರ್ಜ್‌ ಕೂಡ ಸಾಧ್ಯ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಸ್ಯಾಮ್‌ಸಂಗ್‌ನ ಪೋರ್ಟೆಬಲ್‌ ಯುವಿ ಸ್ಟೆರಿಲೈಜರ್‌

ಕೋವಿಡ್‌–19 ತಂತ್ರಜ್ಞಾನ ಕ್ಷೇತ್ರದಲ್ಲೂ ಆವಿಷ್ಕಾರಗಳಿಗೆ ಪ್ರಚೋದನೆ ನೀಡಿದೆ. ಜಗತ್ತಿನ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಯಾಗಿರುವ ಸ್ಯಾಮ್‌ಸಂಗ್‌ ಪ್ರೀಮಿಯಂ ಫೋನ್‌ಗಳನ್ನು ಸ್ವಚ್ಛಗೊಳಿಸುವ ಜೊತೆಗೆ ಬ್ಯಾಟರಿ ಚಾರ್ಜ್‌ ಕೂಡ ಮಾಡುವ ಹೊಸ ಸಾಧನವನ್ನು ಹೊರ ತಂದಿದೆ.

ಸ್ಯಾಮ್‌ಸಂಗ್‌ನ ಪೋರ್ಟೆಬಲ್‌ ಯುವಿ ಸ್ಟೆರಿಲೈಜರ್‌ ( UV sterilizer) ಸಾಧನದ ಪ್ಯಾನೆಲ್‌ನ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ ಯುವಿ ಲೈಟ್‌ ಅಳವಡಿಸಲಾಗಿದೆ. ಸ್ಮಾರ್ಟ್‌ಫೋನ್‌ ಬಾಕ್ಸ್‌ಗಿಂತ ಸ್ವಲ್ಪ ದೊಡ್ಡದಾಗಿರುವ ಈ ಸಾಧನದೊಳಗೆ ಇಡುವ ಫೋನ್‌, ಕನ್ನಡಕ, ಮಾಸ್ಕ್‌, ಇಯರ್‌ಪೋನ್‌ ಅಥವಾ ಇನ್ನಾವುದೇ ವಸ್ತುಗಳು ಎಲ್ಲ ಕೋನಗಳಿಂದಲೂ ಸೋಂಕು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸ್ವಚ್ಛಗೊಳಿಸಬೇಕಾದ ವಸ್ತುವನ್ನು ಸಾಧನದ ಒಳಗಿಟ್ಟು ಸ್ವಿಚ್‌ ಆನ್‌ ಮಾಡಿದರೆ ಕೆಲ ನಿಮಿಷಗಳಲ್ಲಿಯೇ ವಸ್ತು ಸ್ಟೆರಿಲೈಜ್ ಆಗುತ್ತದೆ. ಸರಳ ಬಟನ್ ಹೊಂದಿರುವ ಈ ಸಾಧನವು ತಾನಾಗಿಯೇ ಒಳಗಿನ ವಸ್ತುಗಳನ್ನು ಸ್ವಚ್ಛಗೊಳಿಸಿ 10 ನಿಮಿಷಗಳ ಬಳಿಕೆ ಸ್ವಿಚ್‌ ಆಫ್‌ ಮಾಡಿಕೊಳ್ಳುತ್ತದೆ. ಇದರೊಂದಿಗೆ ಪವರ್‌ ಬ್ಯಾಂಕ್‌ನ ರೀತಿ ಮೊಬೈಲ್‌ ವೈರ್‌ಲೆಸ್‌ ಚಾರ್ಜಿಂಗ್‌ ಸಹ ಮಾಡುತ್ತದೆ.

196 x 96 x 33 ಮಿಲಿ ಮೀಟರ್‌ ಅಳತೆಯಲ್ಲಿರುವ ಸ್ಯಾಮ್‌ಸಂಗ್‌ ಯುವಿ ಸ್ಟೆರಿಲೈಜರ್‌ನಲ್ಲಿ ದೊಡ್ಡ ಸ್ಮಾರ್ಟ್‌ಫೋನ್‌ ಇಡಬಹುದು. ವಸ್ತುಗಳಲ್ಲಿನ ಸೋಂಕು ನಿವಾರಿಸುತ್ತದೆ ಎಂದು ಹೇಳಿದ್ದರೂ, ಕೊರೊನಾ ವೈರಸ್‌ ನಾಶ ಮಾಡುವ ಬಗ್ಗೆ ಕಂಪನಿ ನಿರ್ದಿಷ್ಟವಾಗಿ ಹೇಳಿಲ್ಲ. ಆದರೆ, ಕ್ಯಾಂಡಿಡ ಅಲ್ಬಿಕನ್ಸ್‌, ಇ.ಕೊಲಿ ಸೇರಿದಂತೆ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳನ್ನು ಶೇ 99ರಷ್ಟು ಪರಿಣಾಮಕಾರಿಯಾಗಿ ನಾಶಪಡಿಸಬಲ್ಲದು ಎಂದಿದೆ.

ಎಸ್‌ಜಿಎಸ್‌ ಮತ್ತು ಇಂಟರ್‌ಟೆಕ್‌ ಎರಡು ಪ್ರತ್ಯೇಕ ಸಂಸ್ಥೆಗಳು ಈ ಸಾಧನವನ್ನು ಪರೀಕ್ಷಿಸಿ ಅನುಮೋದಿಸಿರುವುದಾಗಿ ಸ್ಯಾಮ್‌ಸಂಗ್ ಹೇಳಿದೆ. ಪ್ರಸ್ತುತ ಈ ಸಾಧನವು ಥಾಯ್ಲೆಂಡ್‌, ಜರ್ಮನಿ, ರೊಮೇನಿಯಾ ಹಾಗೂ ಹಾಂಕಾಂಗ್‌ ಸೇರಿದಂತೆ ಕೆಲವು ದೇಶಗಳಲ್ಲಿ ಲಭ್ಯವಿದೆ. ಇದರ ಬೆಲೆ 58.38 ಯೂರೋಸ್ (ಸುಮಾರು ₹4,940).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು