ಬೆಂಗಳೂರು: ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯು ನೂತನ ಆಂಡ್ರಾಯ್ಡ್ 14 ಆಧಾರಿತ ಒನ್ ಯುಐ 6.0 ಅಪ್‌ಡೇಟ್ ಸಾಪ್ಟ್‌ವೇರ್ ಬಿಡುಗಡೆ ಮಾಡಿದೆ.
ಇತ್ತಿಚೆಗೆ ನಡೆದ ಸ್ಯಾಮಸಂಗ್ ಎಸ್‌ಡಿಸಿ–23 ಸಭೆಯಲ್ಲಿ ಆಂಡ್ರಾಯ್ಡ್ 14 ಆಧಾರಿತ ಒನ್ ಯುಐ 6.0 ಅಪ್‌ಡೇಟ್ ಸಾಪ್ಟ್‌ವೇರ್ ಘೊಷನೆ ಮಾಡಲಾಯಿತು.
ಸ್ಯಾಮ್‌ಸಂಗ್ ಕಂಪನಿಯ ಸೆಗವಾನ್ ಶಿನ್ ಅವರು ಈ ಘೋಷಣೆ ಮಾಡಿದರು. ಕಳೆದ ತಿಂಗಳು ಭಾರತದಲ್ಲಿ ಇದರ ಬೀಟಾ ವರ್ಷನ್ ಬಿಡುಗಡೆ ಮಾಡಲಾಗಿತ್ತು.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಮಾದರಿಯ ಮತ್ತು ನಾಕ್ ಮ್ಯಾಟ್ರಿಕ್ಸ್ ಫೋನ್‌ಗಳಿಗೆ ಒನ್ ಯುಐ 6.0 ಸಾಪ್ಟ್‌ವೇರ್ ಅಪ್ಡೇಟ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.
ಆಂಡ್ರಾಯ್ಡ್ 14 ಆಧಾರಿತ ಒನ್ ಯುಐ 6.0 ಸಾಪ್ಟ್‌ವೇರ್ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆ ಮತ್ತು ಗೋಪ್ಯತೆಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ ಎಂದು ಕಂಪನಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.