ಮಂಗಳವಾರ, ಮೇ 26, 2020
27 °C

ಟ್ರಾನ್ಸ್‌ಲೇಟರ್‌ ಕನ್ನಡಕ್ಕೂ ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಕ್ರೋಸಾಫ್ಟ್‌ನ ಭಾಷಾಂತರ ಸೇವೆ ನೀಡುವ ತಂತ್ರಾಂಶ ಹಾಗೂ ಕಿರುತಂತ್ರಾಂಶ ‘ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್’ ಈಗ ಕನ್ನಡ ಸೇರಿದಂತೆ ಭಾರತದ ಇನ್ನೂ ಐದು ಭಾಷೆಗಳನ್ನು ಬೆಂಬಲಿಸುತ್ತಿದೆ. ಈ ಮೂಲಕ ಒಟ್ಟು 10 ಭಾಷೆಗಳಲ್ಲಿ ಈ ಭಾಷಾಂತರ ತಂತ್ರಾಂಶ ಕೆಲಸ ಮಾಡುತ್ತದೆ.

ಕನ್ನಡ, ಗುಜರಾತಿ, ಮರಾಠಿ, ಮಲಯಾಳ ಹಾಗೂ ಪಂಜಾಬಿ ಭಾಷೆಗಳು ಹೊಸದಾಗಿ ಸೇರ್ಪಡೆಯಾಗಿವೆ. ಬಂಗಾಳಿ, ಹಿಂದಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳ ಸೇವೆಯು ಈಗಾಗಲೇ ಚಾಲ್ತಿಯಲ್ಲಿದೆ.

ಇದು ಮೈಕ್ರೋಸಾಫ್ಟ್‌ನ ಮೆಷಿನ್ ಲರ್ನಿಂಗ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರದಲ್ಲಿ ಕೆಲಸ ಮಾಡುತ್ತಿದೆ.  ಮೈಕ್ರೋಸಾಫ್ಟ್‌ನ ಅಝ್ಯೂರ್ ವೇದಿಕೆಯಲ್ಲಿ ಒದಗಿಸಿದ ಎಪಿಐಗಳನ್ನು ಬಳಸಿಕೊಂಡು ಸಂಘ– ಸಂಸ್ಥೆಗಳು ಇದರ ಲಾಭ  ಪಡೆದುಕೊಳ್ಳಬಹುದಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.

ಅಂದರೆ, ಯಾವುದೇ ತಂತ್ರಜ್ಞಾನ ಸಂಸ್ಥೆಗಳ ಜಾಲತಾಣಗಳು, ಟೂಲ್‌ಗಳು ಮತ್ತು ಇತರ ಯಾವುದೇ ಪರಿಹಾರಾತ್ಮಕ ತಂತ್ರಾಂಶಗಳಲ್ಲಿ ಈ ಭಾಷಾಂತರದ ವ್ಯವಸ್ಥೆ ಅಳವಡಿಸಿಕೊಳ್ಳಲು ಎಪಿಐಗಳು ನೆರವಾಗುತ್ತವೆ. ಬಹುಭಾಷೆಗಳಲ್ಲಿ ಸೇವೆ ನೀಡುವ ಕಂಪನಿಗಳ ಡೆವಲಪರ್‌ಗಳಿಗೆ ಇದು ಅನುಕೂಲ. ಜನಸಾಮಾನ್ಯರು ಕೂಡ ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್ ಆ್ಯಪ್‌ಗಳನ್ನು ಅಳವಡಿಸಿಕೊಂಡು, ಬೇರೆ ಭಾಷೆಗಳಿಂದ ಕನ್ನಡ ಮತ್ತಿತರ ಭಾಷೆಗಳಿಗೆ ಅನುವಾದ ಮಾಡಿಕೊಳ್ಳುವ ಪ್ರಯೋಜನ ಪಡೆದುಕೊಳ್ಳಬಹುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು