ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಶ ಸಂವೇದಿ ಸ್ಮಾರ್ಟ್ ‘ಟೈಟಾನ್‌’

Last Updated 12 ಫೆಬ್ರುವರಿ 2020, 9:48 IST
ಅಕ್ಷರ ಗಾತ್ರ

ಕೈಗಡಿಯಾರ ತಯಾರಿಕೆಯಲ್ಲಿ ಜನಪ್ರಿಯವಾಗಿರುವಟೈಟಾನ್‌ ಕಂಪನಿಯು, ಭಾರತದ ಮಾರುಕಟ್ಟೆಗೆ ಸಂಪೂರ್ಣ ಸ್ಪರ್ಶ ಸಂವೇದಿ (ಟಚ್‌) ಸ್ಮಾರ್ಟ್‌ವಾಚ್‌ ‘ಕೆನೆಕ್ಟೆಡ್‌ ಎಕ್ಸ್‌’ ಬಿಡುಗಡೆ ಮಾಡಿದೆ. ಮಾರ್ಚ್‌ನಿಂದ ಖರೀದಿಗೆ ಲಭ್ಯವಾಗಲಿದೆ.

ಈ ವಾಚ್‌ ಬೆಲೆ ₹14,995ನಿಗದಿ ಮಾಡಿದ್ದು, ಆ್ಯಪಲ್‌ ಕಂಪನಿಯ ಸ್ಮಾರ್ಟ್‌ವಾಚ್‌ಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಮಾಡಲಾಗಿದೆ.

’ಟಚ್‌’ ಆಯ್ಕೆಯ ಮೂಲಕವೇ ಸ್ಮಾರ್ಟ್‌ವಾಚ್‌ ಕಾರ್ಯನಿರ್ವಹಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ತನ್ನ ಸ್ಮಾರ್ಟ್‌ ಉತ್ಪನ್ನಗಳ ಸಾಲಿಗೆ ಹೊಸ ಸೇರ್ಪಡೆ ಮಾಡಿಕೊಂಡಿದೆ.

ಅನಲಾಗ್‌ ವಾಚ್, 1.2 ಇಂಚು ಫುಲ್‌ ಕಲರ್‌ ಟಚ್‌ ಸ್ಕ್ರೀನ್‌ ಹೊಂದಿದ್ದು, ಮೂರು ಮಾದರಿಗಳಲ್ಲಿ ಸಿಗಲಿದೆ. ಹೃದಯ ಬಡಿತದ ಮೇಲ್ವಿಚಾರಣೆ, ಹವಾಮಾನ, ಫೋನ್‌ ಹುಡುಕುವುದು, ಕ್ಯಾಮೆರಾ, ಸೆಲ್ಫಿ, ಮ್ಯೂಸಿಕ್‌ ನಿಯಂತ್ರಣ... ಹೀಗೆ ಒಟ್ಟಾರೆ 13 ಬಗೆಯ ವೈಶಿಷ್ಟ್ಯಗಳು ಇದರಲ್ಲಿವೆ.

‘ಧರಿಸಬಲ್ಲ ಸಾಧನಗಳ ಮಾರುಕಟ್ಟೆಯಲ್ಲಿ ಜಗತ್ತಿನಲ್ಲಿಯೇ ಭಾರತವು ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಟೈಟಾನ್‌ ಕಂಪನಿಯು ಈ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದೆ. ತಂತ್ರಜ್ಞಾನ ನೈಪುಣ್ಯ ಹೆಚ್ಚಿಸಿಕೊಳ್ಳಲು ಮತ್ತು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಈ ಉತ್ಪನ್ನವು ಮಹತ್ವದಪಾತ್ರ ವಹಿಸಲಿದೆ’ ಎಂದು ಟೈಟಾನ್‌ ಕಂಪನಿಯ ವಾಚಸ್‌ ಆ್ಯಂಡ್ ವೇರೆಬಲ್ಸ್‌ ಬಿಸಿನೆಸ್‌ನ ಸಿಇಒ ರವಿಕಾಂತ್‌ ಎಸ್‌. ಅವರು ಹೇಳಿದ್ದಾರೆ.

‘ಕಂಪನಿಯು ಒಟ್ಟಾರೆ 12 ಧರಿಸಬಹುದಾದ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಈಗ ಬಿಡುಗಡೆ ಮಾಡಿರುವ ಉತ್ಪನ್ನವು ನಮ್ಮ ಗ್ರಾಹಕರಿಗೆ ವಿಶ್ವದರ್ಜೆಯ ಸ್ಮಾರ್ಟ್‌ ಉತ್ಪನ್ನಗಳನ್ನು ನೀಡುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಇನ್ನಷ್ಟು ಬಲಪಡಿಸಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT