ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Tecno SPARK GO 2023: ಟೆಕ್‌ನೊ ಸ್ಪಾರ್ಕ್ ಸರಣಿಯ ಫೋನ್‌ ಬಿಡುಗಡೆ, ವಿವರ ಇಲ್ಲಿದೆ

Published : 16 ಜೂನ್ 2023, 11:13 IST
Last Updated : 16 ಜೂನ್ 2023, 11:13 IST
ಫಾಲೋ ಮಾಡಿ
Comments

ಬೆಂಗಳೂರು: ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಭರವಸೆ ಮೂಡಿಸಿರುವ ‘ಟೆಕ್‌ನೊ’ ಕಂಪನಿಯು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿದೆ.

ಟೆಕ್‌ನೊ ಸ್ಪಾರ್ಕ್ ಸರಣಿಯ ಸ್ಮಾರ್ಟ್‌ಫೋನ್‌ಗಳು ಇವಾಗಿವೆ. ಟೆಕ್‌ನೊ ಸ್ಪಾರ್ಕ್ ಗೊ 2023 ಆಕರ್ಷಕವಾದ 6.56 ಇಂಚಿನ ಫುಲ್‌ ಎಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಜತೆಗೆ 7GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿರಲಿವೆ. ಈ ಫೋನ್ 5000mAH ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದರ ಬೆಲೆ ₹7,999 ರಷ್ಟಿದೆ.

ಟೆಕ್‌ನೊ ಸ್ಪಾರ್ಕ್ ಸರಣಿಯ ಸ್ಪಾರ್ಕ್ 10 ಆಕರ್ಷಕವಾದ 6.6 ಇಂಚಿನ ಫುಲ್‌ ಎಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಜತೆಗೆ 16GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ನಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿರಲಿದೆ. ಈ ಫೋನ್ 5000mAH ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 18 ವೋಲ್ಟ್ ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇದರ ಬೆಲೆ ₹11,699 ರಷ್ಟಿದೆ.

ಲಭ್ಯತೆ: ಟೆಕ್‌ನೋ ಸ್ಪಾರ್ಕ್ ಸರಣಿ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯವಾಗಿವೆ.

ಇದನ್ನೂ ಓದಿ... ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ34: ಗೇಮಿಂಗ್ ಪ್ರಿಯರಿಗೆ ಇಷ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT