ಮಂಗಳವಾರ, ನವೆಂಬರ್ 29, 2022
29 °C
ಟೆಕ್‌ನೊ ನೂತನ ಸ್ಮಾರ್ಟ್‌ಫೋನ್ ಅಮೆಜಾನ್ ಮೂಲಕ ಲಭ್ಯ

TECNO POP 6 Pro: ಆಕರ್ಷಕ ಬೆಲೆಯಲ್ಲಿ ಹೊಸ ಟೆಕ್‌ನೊ ಸ್ಮಾರ್ಟ್‌ಫೋನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಕಡಿಮೆ ಬೆಲೆಗೆ ಹೆಚ್ಚಿನ ಫೀಚರ್ ಒದಗಿಸುವ ಮೂಲಕ ಜನಪ್ರಿಯತೆ ಗಳಿಸಿರುವ ಟೆಕ್‌ನೊ, ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಟೆಕ್‌ನೊ ಹೊಸ ಸರಣಿಯಲ್ಲಿ ಪಾಪ್ 6 ಪ್ರೊ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಟೆಕ್‌ನೊ POP 6 Pro
6.56 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಇದ್ದು, ಡಾಟ್ ನಾಚ್ ಹೊಂದಿದೆ.

ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಡ್ಯುವೆಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

2GB LPDDR4x RAM ಮತ್ತು 32 GB ಸ್ಟೋರೇಜ್ ವ್ಯವಸ್ಥೆ ನೂತನ ಟೆಕ್‌ನೊ POP 6 Pro ಸ್ಮಾರ್ಟ್‌ಫೋನ್‌ನಲ್ಲಿದೆ. 5000mAh ಬ್ಯಾಟರಿ ಜತೆಗೆ ಆ್ಯಂಡ್ರಾಯ್ಡ್ 12 ಗೊ ಎಡಿಶನ್ ಆಧಾರಿತ HiOS 8.6 ಮೂಲಕ ಹೊಸ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿದೆ.

ಪೋಲಾರ್ ಬ್ಲ್ಯಾಕ್ ಮತ್ತು ಪೀಸ್‌ಫುಲ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ನೂತನ ಸ್ಮಾರ್ಟ್‌ಫೋನ್ ಲಭ್ಯವಿದೆ ಎಂದು ಕಂಪನಿ ಹೇಳಿದೆ.

ಬೆಲೆ ಮತ್ತು ಲಭ್ಯತೆ
ನೂತನ ಟೆಕ್‌ನೊ POP 6 Pro ಸ್ಮಾರ್ಟ್‌ಫೋನ್, ಅಮೆಜಾನ್ ಮೂಲಕ ಲಭ್ಯವಿದ್ದು, ₹6099 ದರ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು