ನವದೆಹಲಿ: ಚೀನಾದ ಜನಪ್ರಿಯ ವಿಡಿಯೊ ಆ್ಯಪ್ ಟಿಕ್ಟಾಕ್ ಮೇಲಿನ ನಿಷೇಧವನ್ನು ತೆಗೆದು ಹಾಕಲು ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಅಧಿಕೃತ ಮೂಲಗಳು ಶುಕ್ರವಾರ ತಡರಾತ್ರಿ ತಿಳಿಸಿವೆ.

ಕೆಲವರಿಗೆ ಟಿಕ್ಟಾಕ್ ವೆಬ್ಸೈಟ್ಗೆ ಲಾಗ್ಇನ್ ಆಗಲು ಸಾಧ್ಯವಾಗಿದೆ ಎಂಬ ವರದಿಗಳು ಹರಿದಾಡಿದ್ದವು.

ಈ ಬಗ್ಗೆ ಪ್ರತಿಕ್ರಯಿಸಿದ ಸರ್ಕಾರ, ಟಿಕ್ಟಾಕ್ ಮೇಲಿನ ನಿಷೇಧವನ್ನು ತೆಗೆದು ಹಾಕಲು(unblock) ಭಾರತ ಸರ್ಕಾರ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಅಂತಹ ಯಾವುದೇ ಹೇಳಿಕೆ ಅಥವಾ ಸುದ್ದಿ ಸುಳ್ಳು ಹಾಗೂ ದಾರಿತಪ್ಪಿಸುವಂತಿದೆ ಎಂದು ಹೇಳಿದೆ.

ಭಾರತದಲ್ಲಿ ಟಿಕ್ಟಾಕ್ ನಿಷೇಧವೇಕೆ?

2020ರ ಜೂನ್ನಲ್ಲಿ ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯ ಬಳಿಕ ರಾಷ್ಟ್ರೀಯ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಭಾರತ ಸರ್ಕಾರ ಟಿಕ್ಟಾಕ್ ಆ್ಯಪ್ನ್ನು ನಿಷೇಧಿಸಿತ್ತು. ಅಲ್ಲದೇ ಯುಸಿ ಬ್ರೌಸರ್, ಶೇನ್ ಸೇರಿದಂತೆ 59 ಅಪ್ಲಿಕೇಶನ್ಗಳನ್ನು ನಿರ್ಬಂಧಿಸಿತ್ತು.
.ಟಿಕ್ಟಾಕ್ ಲೈಟ್, ಹೆಲೊ ಲೈಟ್, ಶೇರ್ ಇಟ್ ಲೈಟ್ ಸೇರಿ ಚೀನಾದ 47 ಆ್ಯಪ್ ನಿಷೇಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.