ಮಂಗಳವಾರ, ಸೆಪ್ಟೆಂಬರ್ 28, 2021
23 °C

Vivo Y53s: ತ್ರಿವಳಿ ಕ್ಯಾಮರಾ ಸಹಿತ ನೂತನ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Vivo India Web

ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ವಿವೊ ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದೆ.

ವಿವೊ ವೈ ಸರಣಿಯಲ್ಲಿ ಆಕರ್ಷಕ ಫೀಚರ್ ಒಳಗೊಂಡ ವಿವೊ Y53s ಬಿಡುಗಡೆಯಾಗಿದೆ. ಹಿಂಭಾಗದಲ್ಲಿ ಮೂರು ಕ್ಯಾಮರಾ ಮತ್ತು ವಾಟರ್‌ಡ್ರಾಪ್ ನಾಚ್ ಇರುವ ಡಿಸ್‌ಪ್ಲೇ ಹೊಸ ವಿವೊ ಫೋನ್‌ನಲ್ಲಿದೆ.

ವಿವೊ ನೂತನ Y53s ಸ್ಮಾರ್ಟ್‌ಫೋನ್‌ 8GB RAM + 128GB ಮಾದರಿಯಲ್ಲಿ ಲಭ್ಯವಿದ್ದು, ದೇಶದಲ್ಲಿ ₹19,490 ದರ ಹೊಂದಿದೆ.

ಡೀಪ್ ಸಿ ಬ್ಲೂ ಮತ್ತು ಫೆಂಟಾಸ್ಟಿಕ್ ರೈನ್‌ಬೊ ಬಣ್ಣದಲ್ಲಿ ಹೊಸ Y53s ಫೋನ್ ಅಮೆಜಾನ್, ಪೇಟಿಎಂ, ಫ್ಲಿಪ್‌ಕಾರ್ಟ್, ಟಾಟಾಕ್ಲಿಕ್ ಸಹಿತ ವಿವಿಧ ಪ್ರಮುಖ ರಿಟೇಲ್ ಮಳಿಗೆಗಳಲ್ಲಿ ದೊರೆಯಲಿದೆ.

ಅಲ್ಲದೆ, ಆರಂಭಿಕ ಕೊಡುಗೆಯಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ₹1,500 ವರೆಗೆ ಕ್ಯಾಶ್‌ಬ್ಯಾಕ್ ಕೊಡುಗೆಯೂ ದೊರೆಯಲಿದೆ.

64+2+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಜತೆಗೆ 5000mAh ಬ್ಯಾಟರಿ ಹೊಸ ವಿವೊ Y53s ಸ್ಮಾರ್ಟ್‌ಫೋನ್‌ನಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು