ನವದೆಹಲಿ: ನೋಯ್ಡಾದ 14 ವರ್ಷದ ವಿದ್ಯಾರ್ಥಿಯೊಬ್ಬ ಅಮೆರಿಕದ ‘ನಾಸಾ’ ಯೋಜನೆಯ ಮೂಲಕ ಕ್ಷುದ್ರಗ್ರಹವೊಂದನ್ನು ಕಂಡುಹಿಡಿದಿದ್ದು, ಅದಕ್ಕೆ ಶಾಶ್ವತ ಹೆಸರನ್ನು ಇಡಲು ಮುಂದಾಗಿದ್ದಾನೆ.

ನೋಯ್ಡಾದ ಶಿವ ನಾಡರ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ದಕ್ಷ್ ಮಲಿಕ್, ನಾಸಾ ಯೋಜನೆಯಲ್ಲಿ ಭಾಗವಹಿಸಿದ್ದ. ಈ ವೇಳೆ ಆತ ಮಂಗಳ ಮತ್ತು ಗುರುಗ್ರಹದ ನಡುವಿನ ಕ್ಷುದ್ರಗ್ರಹವನ್ನು ಕಂಡುಹಿಡಿದಿದ್ದಾನೆ.

ದಕ್ಷ್ ಮಲಿಕ್ ಅವರು ಈ ಆಕಾಶಕಾಯಕ್ಕೆ ‘2023 OG40’ ಎಂದು ಹೆಸರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದಕ್ಷ್ ಮಲಿಕ್, ತನ್ನ ಇಬ್ಬರು ಸಹಪಾಠಿಗಳೊಂದಿಗೆ ಅಂತರರಾಷ್ಟ್ರೀಯ ಕ್ಷುದ್ರಗ್ರಹ ಡಿಸ್ಕವರಿ ಪ್ರಾಜೆಕ್ಟ್ (ಐಎಡಿಪಿ) ಅಡಿಯಲ್ಲಿ ಸಂಶೋಧನೆ ಕೈಂಗೊಂಡಿದ್ದಾರೆ.

‘ನಾನು ಚಿಕ್ಕಂದಿನಿಂದಲೂ ಬಾಹ್ಯಾಕಾಶದ ಬಗ್ಗೆ ಆಕರ್ಷಿತನಾಗಿದ್ದೆ. ನಾನು ನ್ಯಾಷನಲ್ ಜಿಯಾಗ್ರಫಿಕ್ನಲ್ಲಿ ಗ್ರಹಗಳು ಮತ್ತು ಸೌರವ್ಯೂಹದ ಕುರಿತು ಈ ಎಲ್ಲಾ ಸಾಕ್ಷ್ಯಚಿತ್ರಗಳನ್ನು ನೋಡುತ್ತಿದ್ದೆ. ಈಗ ಕನಸು ನನಸಾಗಿದೆ’ ಎಂದು ದಕ್ಷ್ ಮಲಿಕ್ ಸಂತಸ ವ್ಯಕ್ತಪಡಿಸಿದ್ದಾರೆ.
.ಭೂಮಿಗೆ ಅತಿ ಹತ್ತಿರದಲ್ಲಿ ಹಾಯ್ದುಹೋದ ಕ್ಷುದ್ರಗ್ರಹ ಪತ್ತೆ.ಜೇಮ್ಸ್ ವೆಬ್ ದೂರದರ್ಶಕ ಬಳಸಿ ಚಿಕ್ಕ ಕ್ಷುದ್ರಗ್ರಹ ಪತ್ತೆ ಮಾಡಿದ ವಿಜ್ಞಾನಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.