ಹೊಸದೊಂದು ಔಷಧವೊಂದನ್ನು ಶೋಧಿಸಿದರೆ ಅದನ್ನು ಪರೀಕ್ಷಿಸುವುದು ಹೇಗೆ? ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಹೇಗೆ? ಈ ಪರೀಕ್ಷೆಗಳಿಗೆಲ್ಲಾ ಈಗ ಬಹು ಕಠಿಣ ನಿಯಮಗಳಿವೆ. ಪ್ರಾಣಿಗಳ ಮೇಲೆ ಪರೀಕ್ಷಿಸಿ, ಬಳಿಕ ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಬರುವವರ ಮೇಲೆ ಮಾನವಪ್ರಯೋಗ ಮಾಡಿ, ಯಶಸ್ಸು ದೊರೆತ ಬಳಿಕ ಔಷಧವೊಂದಕ್ಕೆ ಮಾನ್ಯತೆ ಸಿಗುತ್ತದೆ. ಇದೊಂದು ಕ್ಲಿಷ್ಟಕರ ಪ್ರಕ್ರಿಯೆ. ಈ ಪ್ರಕ್ರಿಯೆಯನ್ನು ಪೂರೈಸಲು ವರ್ಷಗಟ್ಟಲೇ ಸಮಯ ಹಿಡಿಯುತ್ತದೆ.

ಈಗ ಈ ಬಗೆಯ ಪ್ರಯೋಗವನ್ನು ಸರಳಗೊಳಿಸುವ, ಸಮಯವನ್ನು ಕಡಿತಗೊಳಿಸುವ ಹಾಗೂ ಪ್ರಯೋಗಕ್ಕೆ ಪಶುಗಳ ಬಳಕೆಯನ್ನು ಇಲ್ಲವಾಗಿರುವ ಮಹತ್ತರವಾದ ಸಂಶೋಧನೆಯೊಂದು ನಡೆದಿದೆ. ಅಂದರೆ, ಯಾವುದೇ ಔಷಧ ಸಂಶೋಧನೆಯನ್ನು ಪ್ರಯೋಗಿಸಲು ಕೃತಕ ಅಂಗಾಂಗಗಳನ್ನು ನಿರ್ಮಿಸಲಾಗಿದೆ.

ಸಾಮಾನ್ಯವಾಗಿ ಔಷಧಪರೀಕ್ಷೆ ನಡೆಯುವುದು ಹೇಗೆ? ನಿರ್ದಿಷ್ಟವಾದ ದೇಹದ ಭಾಗಗಳ ಮೇಲೆ.ಎಂದರೆ, ಹೃದಯದ ಸಮಸ್ಯೆ ಇದ್ದಲ್ಲಿ, ಔಷಧವು ನೇರವಾಗಿ ಹೃದಯದ ಮೇಲೆ ಪ್ರಯೋಗಗೊಂಡರೆ ಒಳಿತು. ಆದರೆ, ಪ್ರಾಣಿಗಳನ್ನು ಬಳಸಿಕೊಂಡು ಮಾಡುವ ಪ್ರಯೋಗದಲ್ಲಿ ನೇರವಾಗಿ ಅಂಗವೊಂದರ ಮೇಲೆ ಔಷಧ ಪ್ರಯೋಗ ಮಾಡುವುದು ಇದೆಯಾದರೂ ಅದು ಬಹಳ ಅಪರೂಪ. ನೇರವಾಗಿ ಪ್ರಾಣಿಯ ರಕ್ತನಾಳದ ಮೂಲಕ ಔಷಧವನ್ನು ಚುಚ್ಚಿ, ದೇಹದೊಳಗೆ ಕಳುಹಿಸಲಾಗುತ್ತದೆ. ಔಷಧವು ರಕ್ತನಾಳದ ಮೂಲಕ ದೇಹದ ಒಳಗೆ ಪ್ರವೇಶಿಸಿ ಬಳಿಕ ಅದು ರೋಗಪೀಡಿತ ಅಂಗಕ್ಕೆ ತಲುಪುತ್ತದೆ. ಆಗ ಆ ಅಂಗವು ಔಷಧಕ್ಕೆ ಸ್ಪಂದಿಸುತ್ತದೆ. ಅಂದರೆ ಔಷಧ ಕೆಲಸ ಮಾಡಲು ರಕ್ತನಾಳ ಹಾಗೂ ರಕ್ತ ಅತಿ ಮುಖ್ಯ ಅಂಶಗಳು.

ಇದನ್ನೇ ಗಮನದಲ್ಲಿರಿಸಿಕೊಂಡು ಆಸ್ಟ್ರಿಯಾದ ಟಿಯು ವೀನ್ – ವಿಯೆನ್ನಾ ತಾಂತ್ರಿಕ ವಿಶ್ವವಿದ್ಯಾಲಯದ 3ಡಿ ಪ್ರಿಂಟಿಂಗ್ ಮತ್ತು ಜೈವಿಕ ಸಂರಚನೆಯ ವಿಭಾಗದ ಪ್ರಾಧ್ಯಾಪಕ ಅಲೆಕ್ಸಾಂಡರ್ ಆಫ್ಸಿಯನ್ಕಾವ್ ಅವರ ತಂಡವು ಹೊಸಬಗೆಯ ಕೃತಕ ಅಂಗಗಳನ್ನು ನಿರ್ಮಿಸಿದ್ದಾರೆ. ಈ ಕೃತಕ ಅಂಗಗಳಲ್ಲಿ ರಕ್ತವೂ ಇರುತ್ತದೆ; ರಕ್ತನಾಳಗಳೂ ಇರುತ್ತವೆ! ಇವಕ್ಕೆ ಔಷಧವಿಜ್ಞಾನಿಗಳು ಬೇಕಾದ ಔಷಧವನ್ನು ಪ್ರವಹಿಸಿ ಪರೀಕ್ಷಿಸಬಹುದು. ಈ ಅಂಗಗಳಿಗೆ ನೋವೂ ಆಗುವುದಿಲ್ಲ; ಪ್ರಾಣಹಾನಿಯ ಭಯವೂ ಇರುವುದಿಲ್ಲ.

ಕಾರ್ಯಾಚರಣೆ

ಮೈಕ್ರೋಚಿಪ್ ಆಧಾರಿತ ನ್ಯಾನೋ ತಂತ್ರಜ್ಞಾನ ಆಧಾರಿತ ಅಂಗಗಳಿವು. ನೈಸರ್ಗಿಕವಾಗಿ ಅಂಗಗಳು ಯಾವ ಗಾತ್ರದಲ್ಲಿ ಇರುತ್ತವೆಯೋ ಅಷ್ಟೆ ಗಾತ್ರದಲ್ಲಿ ಇವು ಇರುವುದಿಲ್ಲ. ಸಾಮಾನ್ಯವಾಗಿ ಸಣ್ಣದಾಗಿರುತ್ತವೆ. ಹಾಗಾಗಿಯೇ ಇಲ್ಲಿ ನ್ಯಾನೋ ತಂತ್ರಜ್ಞಾನ ಬಳಕೆ ಆಗಿರುವುದು. ಹಾಗಾಗಿ, ಕಡಿಮೆ ಪ್ರಮಾಣದ ಔಷಧವನ್ನು ಪ್ರಯೋಗಿಸಿದರೆ ಸಾಕು. ಈ ಅಂಗಗಳಲ್ಲಿ ಇರುವ ಚಿಪ್ನಲ್ಲಿ ಆಯಾ ಅಂಗಗಳಿಗೆ ಸಂಬಂಧಿಸಿದ ಈಗಾಗಾಲೇ ಇರುವ ರೋಗಗಳ ಮಾಹಿತಿ, ಔಷಧವಿಧಾನದ ಮಾಹಿತಿಯನ್ನು ಅಡಕಗೊಳಿಸಲಾಗಿರುತ್ತದೆ. ಹೊಸದೊಂದು ಔಷಧವು ಅಂಗವನ್ನು ಪ್ರವೇಶಿಸಿದಾಗ, ಆ ಅಂಗವು ಹೊಸದಾದ ರೀತಿಯಲ್ಲಿ ಸ್ಪಂದಿಸುತ್ತದೆ. ಏಕೆಂದರೆ, ಹೊಸ ಔಷಧದ ಬಗ್ಗೆ ಅದಕ್ಕೆ ಪೂರ್ವಮಾಹಿತಿ ಇರುವುದಿಲ್ಲ. ಈ ಸ್ಪಂದನೆಯನ್ನು ಅಧ್ಯಯನ ಮಾಡಿ, ಅಂಗವು ಔಷಧದಿಂದ ಗುಣ ಹೊಂದುತ್ತದೆಯೇ ಇಲ್ಲವೇ, ಗುಣ ಹೊಂದುವ ಪ್ರಮಾಣವೆಷ್ಟು, ಪರಿಣಾಮಗಳೇನೇನು ಇತ್ಯಾದಿ ದತ್ತಾಂಶಗಳನ್ನು ಒದಗಿಸುತ್ತದೆ.

ಪ್ರಯೋಜನ

ಈ ಅಂಗಗಳಿಂದ, ಔಷಧವಿಜ್ಞಾನಿಗಳಿಗೆ ತಮಗೆ ಬೇಕಾದ ದತ್ತಾಂಶವನ್ನು ಸಂಗ್ರಹಿಸಲು ಸುಲಭವಾಗುತ್ತದೆ. ಜೊತೆಗೆ, ಔಷಧ ಪರೀಕ್ಷೆಯ ಈಗಿನ ಕಠಿಣ ನಿಯಮಗಳ ಪಾಲನೆಯ ಇತಿಮಿತಿಗಳು ಇರುವುದಿಲ್ಲ. ಜೊತೆಗೆ, ಪ್ರಯೋಗಕ್ಕೆ ಬೇಕಾದ ಪ್ರಾಣಿಗಳನ್ನು ಹೊಂದಿಸಿಕೊಳ್ಳುವುದರ ಕಷ್ಟವೂ ಇರುವುದಿಲ್ಲ. ಇವೆಲ್ಲದಕ್ಕಿಂತ ಮುಖ್ಯವಾಗಿ ವಿಜ್ಞಾನಿಗಳು ತಮಗೆ ಎಷ್ಟು ಬಾರಿ ಬೇಕೋ ಅಷ್ಟು ಬಾರಿ ಪ್ರಯೋಗಗಳನ್ನು ನಡೆಸಲು ಇದರಿಂದ ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.