ಈಗ ಎಲ್ಲೆಡೆ ವಿದ್ಯುಚ್ಛಾಲಿತ ವಾಹನಗಳದೇ ಸದ್ದು, ಅಲ್ಲವೇ? ಆದರೆ, ವಿದ್ಯುತ್ ಉತ್ಪಾದನೆ ಅಗತ್ಯಕ್ಕೆ ತಕ್ಕಷ್ಟು ಆದಲ್ಲಿ ಮಾತ್ರವೇ ಅಲ್ಲವೇ ಈ ವಿದ್ಯುತ್ ವಾಹನಗಳು ಸಂಚರಿಸುವುದು. ನಮ್ಮ ದಿನನಿತ್ಯ ಬಳಕೆಗೆ ವಿದ್ಯುತ್, ಕೈಗಾರಿಕೆಗಳಿಗೆ ವಿದ್ಯುತ್ – ಹೀಗೆ, ವಿದ್ಯುತ್ ನಮಗೆ ಅಪರಿಮಿತವಾಗಿ ಬೇಕಾಗಿದೆ. ಈಗಿರುವ ವಿದ್ಯುತ್ ಉತ್ಪಾದನಾ ತಂತ್ರಜ್ಞಾನ ಅದನ್ನು ಪೂರೈಸುವಷ್ಟು ಸಮರ್ಥವಾಗಿಲ್ಲ. ಈಗೊಂದು ಹೊಸ ಸಂಶೋಧನೆಯಾಗಿದೆ. ಅದುವೇ ‘ಕೃತಕ ಸೂರ್ಯ’!

‘ಕೃತಕ ಸೂರ್ಯ’! ಇದು ಅಚ್ಚರಿಯಾದರೂ ನಿಜ. ಹೀಗೊಂದು ಸಂಶೋಧನೆ ಚೀನಾದಲ್ಲಿ ನಡೆದಿದೆ. ಈ ಸಂಶೋಧನೆಯು ಸಮರ್ಥವಾಗಿ ಬಳಕೆಗೆ ಬಂದರೆ, ವಿದ್ಯುತ್ ಉತ್ಪಾದನೆಗಾಗಿ ಈಗಿರುವ ಸಾಕಷ್ಟು ವಿಧಾನಗಳು ಪಕ್ಕಕ್ಕೆ ಸರಿದು, ಸಂಪೂರ್ಣ ಹೊಸ ಅಲೆಯೇ ಸೃಷ್ಟಿಯಾಗುತ್ತದೆ.

ಕೃತಕ ಸೂರ್ಯ

ಕೃತಕ ಸೂರ್ಯನ ಬಗ್ಗೆ ಮಾತನಾಡುವ ಮುನ್ನ ನಮ್ಮ ನಿಜವಾದ ಸೂರ್ಯನ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ನಮ್ಮ ಶಕ್ತಿಮೂಲವಾದ ಸೂರ್ಯ ನಿಜವಾಗಿಯೂ ಒಂದು ಅತಿ ದೊಡ್ಡ ಒಲೆ ಇದ್ದಂತೆ. ಅದರಲ್ಲಿರುವ ಅಪಾರ ಪ್ರಮಾಣದ ಜಲಜನಕವು ಅಣುವಿದಳನಗೊಂಡು ಶಕ್ತಿ ಉತ್ಪಾದನೆಯಾಗುತ್ತದೆ. ಸೂರ್ಯನಲ್ಲಿ ಅದೆಷ್ಟು ಪ್ರಮಾಣದ ಜಲಜನಕ ಅನಿಲವಿದೆಯೆಂದರೆ, ಅದು ಖಾಲಿಯಾಗಲು ಇನ್ನೂ ಸಾವಿರಾರು ಕೋಟಿ ವರ್ಷಗಳು ಬೇಕಾಗುವುದು. ಖಾಲಿಯಾದಂತೆ ಸೂರ್ಯನಿಗೆ ವಯಸ್ಸಾಗ ತೊಡಗಿ, ವಿವಿಧ ಹಂತಗಳನ್ನು ದಾಟಿ ಅದು ಅದರ ಅಂತ್ಯಕ್ಕೆ ತಲುಪುವುದು. ಸೂರ್ಯನ ಈ ಜೀವನಶೈಲಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರುವ ವಿಜ್ಞಾನಿಗಳು ಇದುವರೆಗೂ ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದಾರೆ.

ಚೀನಾದ ಹಾಸ್ಹಾಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಸಹಪ್ರಾಧ್ಯಾಪಕ ಪ್ರೊ. ಪಿಂಗ್ ಝೂ ಅವರು ಈ ‘ಕೃತಕ ಸೂರ್ಯ’ನನ್ನು ಸಂಶೋಧಿಸಿದ್ದಾರೆ. ಈ ಸಂಶೋಧನೆಯು ಪ್ರತಿಷ್ಠಿತ ‘ನೇಚರ್’ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದ್ದು, ವಿಜ್ಞಾನಿಗಳ ಸಮುದಾಯವು ಕುತೂಹಲ–ಅಚ್ಚರಿಗಳ ಜೊತೆಗೆ ಕಳವಳವನ್ನೂ ವ್ಯಕ್ತಪಡಿಸಿದೆ.

ಚೀನಾದಲ್ಲಿರುವ ‘ಎಕ್ಸ್ಪರಿಮೆಂಟಲ್ ಅಡ್ವಾನ್ಸಡ್ ಸೂಪರ್ಕಂಡಕ್ಟಿಂಗ್ ಟಾಕ್ಮಾಕ್’(EAST)ನಲ್ಲಿ ಜಲಜನಕ ಅಣುವಿದಳನ ಪ್ರಕ್ರಿಯೆಯನ್ನು ನಡೆಸಿದ್ದು, ‘ಒತ್ತಡ ರಹಿತ ದಹನ’ಕ್ರಿಯೆಯನ್ನು ನಡೆಸಿದ್ದಾರೆ. ಸಾಮಾನ್ಯವಾಗಿ ಯಾವುದೇ ಅಣುವಿದ್ಯುತ್ ಸ್ಥಾವರದಲ್ಲೂ ಅಣುವಿದಳನ ಪ್ರಕ್ರಿಯೆ ನಡೆಯುವಾದ ಒತ್ತಡ ದಹನ ನಡೆದೇ ನಡೆಯುತ್ತದೆ. ಹಾಗಾಗಿ, ಅಪಾರ ಪ್ರಮಾಣದ ಶಾಖ ಉತ್ಪಾದನೆಯಾಗುತ್ತದೆ. ಈ ಶಾಖವನ್ನೇ ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡು ಟರ್ಬೈನ್ಗಳನ್ನು ಚಾಲನೆಗೆ ಒಳಪಡಿಸಿ ವಿದ್ಯುತ್ ಉತ್ಪಾದಿಸುವುದು. ಆದರೆ, ಅಲ್ಲಿ ಉತ್ಪಾದನೆಯಾಗುವ ಒತ್ತಡ ಅಪಾರ ಪ್ರಮಾಣದಲ್ಲಿದ್ದು, ಅದನ್ನು ನಿಯಂತ್ರಿಸಬೇಕಾಗುತ್ತದೆ. ಇಲ್ಲವಾದರೆ, ಚರ್ನೋಬಿಲ್ ಇತ್ಯಾದಿ ಕಡೆಗಳಲ್ಲಿ ನಡೆದಿರುವ ದೊಡ್ಡ ಪ್ರಮಾಣದ ಅವಘಡಗಳಾಗುವ ಸಂಭವ ಇರುತ್ತದೆ. ಆದರೆ, ‘ಒತ್ತಡ ರಹಿತ ದಹನ’ಕ್ರಿಯೆಯಲ್ಲಿ ದಹನ ಆಗುವುದಾದರೂ, ವಿಧಾನ ಬೇರೆ. ಇಲ್ಲಿ ಒತ್ತಡವೇ ಇರುವುದಿಲ್ಲ. ಆದರೆ, ಶಕ್ತಿ ಅಪಾರ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. ಇದು ಸೂರ್ಯನಲ್ಲಿನ ಶಾಖದ ಮಟ್ಟವನ್ನು ತಲುಪುತ್ತದೆ. ಅದಕ್ಕಾಗಿಯೇ ಇದನ್ನು ‘ಕೃತಕಸೂರ್ಯ’ ಎಂದು ಕರೆದಿರುವುದು. ಜೊತೆಗೆ, ಈ ಪ್ರಕ್ರಿಯೆಲ್ಲಿ ಉತ್ಪಾದನೆಯಾಗುವ ಪ್ಲಾಸ್ಮಾ ನಿಯಂತ್ರಿಸಬಹುದಾದ ಸ್ಥಿತಿಯಲ್ಲಿ ಇರಲಿದ್ದು, ಅದನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಯನ್ನು ಸರಳವಾಗಿ ನಡೆಸಬಹುದು. ಜೊತೆಗೆ, ಅಪಾಯವೂ ಕಡಿಮೆ.

ಪ್ರಯೋಜನ

ಇದು ‘ಒತ್ತಡ ರಹಿತ ದಹನ’ವಾಗಿರುವ ಕಾರಣ, ಅತಿ ಕಡಿಮೆ ಅಪಾಯವಿರುತ್ತದೆ. ಆದ್ದರಿಂದ, ಒತ್ತಡ ನಿಯಂತ್ರಣಕ್ಕೆ ಬೇಕಾದ ಅಗತ್ಯ ಸೌಲಭ್ಯಗಳ ಬಳಕೆಯೇ ಕಡಿಮೆಯಾಗುತ್ತದೆ. ಸಹಜವಾಗಿ ಇದರಿಂದ ಅಪಾರ ಪ್ರಮಾಣದ ಹಣವೂ ಉಳಿತಾಯವಾಗುತ್ತದೆ. ಜೊತೆಗೆ, ಅಣುವಿದಳನ ಪ್ರಕ್ರಿಯೆಯ ಅತಿ ದೊಡ್ಡ ಅಪಾಯವೆಂದರೆ, ಅದರ ರೇಡಿಯೋ ಆ್ಯಕ್ಟಿವ್ (ವಿಕಿರಣಶೀಲತೆ). ಇದರಿಂದ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳು ಬರುತ್ತವೆ. ಈ ಅಪಾಯ ಇಲ್ಲಿ ಬಹುತೇಕ ಕಡಿಮೆ ಇರಲಿದೆ. ಹಾಗಾಗಿ, ವಿದ್ಯುತ್ ಸ್ಥಾವರಗಳಲ್ಲಿ ಕಾರ್ಯನಿರ್ವಹಿಸುವ ನೌಕರರು, ಕಡಿಮೆ ತೂಕದ ಸಮವಸ್ತ್ರಗಳನ್ನು ಧರಿಸಬಹುದು. ಇದರಿಂದ ವೃತ್ತಿಯ ಗುಣಮಟ್ಟ ಸುಧಾರಿಸಲಿದೆ. ಇದರಿಂದಾಗಿ ವ್ಯಕ್ತಿಗಳ ಕಾರ್ಯಕ್ಷಮತೆಯೂ ಸುಧಾರಿಸಲಿದೆ ಎಂದು ವಿಜ್ಞಾನಿ ಪಿಂಗ್ ಝೂ ಅವರ ತಂಡ ಸಮರ್ಥಿಸಿಕೊಂಡಿದೆ. ಇದದಿಂದ ಉಂಟಾಗುವ ಪರಿಸರಹಾನಿಯೂ ಕಡಿಮೆ; ವಿಕಿರಣ ತ್ಯಾಜ್ಯದ ಪ್ರಮಾಣವೂ ಕಡಿಮೆ ಇರಲಿದೆ.

‘ಒತ್ತಡ ರಹಿತ ದಹನ’ ಪ್ರಕ್ರಿಯೆ ಇರುವುದರಿಂದ ಪ್ಲಾಸ್ಮಾದಲ್ಲಿ ತ್ಯಾಜ್ಯದ ಪ್ರಮಾಣ ಕಡಿಮೆ ಇರಲಿದೆ. ಬಳಕೆಯಾದ ಪ್ಲಾಸ್ಮಾದಲ್ಲಿ ವಿಕಿರಣ ಪ್ರಮಾಣ ಇದ್ದರೂ ಅತಿ ಕಡಿಮೆ. ಹಾಗಾಗಿ, ತ್ಯಾಜ್ಯವನ್ನು ಸಂಸ್ಕರಿಸಿ ವಿಸರ್ಜಿಸುವ ಮಟ್ಟವೂ ಕಡಿಮೆಯಾಗುತ್ತದೆ. ಈಗಿರುವ ಸಾಂಪ್ರದಾಯಿಕ ವಿಧಾನದಲ್ಲಿ ಭೂಮಿಯ ಆಳದಲ್ಲಿ ತ್ಯಾಜ್ಯವನ್ನು ಶೇಖರಿಸಿ ಇಡಲಾಗುತ್ತಿದೆ. ಈ ತ್ಯಾಜ್ಯವು ಕಾಲಾಂತರದಲ್ಲಿ ಸೋರಿಕೆಯಾಗಿ ಭೂಮಿಯ ವಿವಿಧ ಪದರಗಳನ್ನು ಸೇರುವ ಅಪಾಯ ಇರುತ್ತದೆ. ಇಂಥ ಅಪಾಯ ಈ ಹೊಸ ವಿಧಾನದಲ್ಲಿ ಕಡಿಮೆ.

ಅಪಾಯ

ಯಾವುದೇ ತಂತ್ರಜ್ಞಾನಕ್ಕೂ ಅಪಾಯದ ಆಯಾಮವೂ ಇದ್ದೇ ಇರುತ್ತದೆ. ಈ ತಂತ್ರಜ್ಞಾನವು ಬಹುತೇಕ ಕಡಿಮೆ ಮೂಲಸೌಕರ್ಯ, ನೌಕರರನ್ನು ಬಯಸುತ್ತದೆ. ಅಲ್ಲದೇ, ಗಾತ್ರದಲ್ಲಿ ಕಡಿಮೆ ಜಾಗ ಸಾಕು. ಹಾಗಾಗಿ, ಇದು ಬಾಂಬ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೊಂದು ಕಾಲದಲ್ಲಿ ಅಣುವಿದಳನ ತಂತ್ರಜ್ಞಾನದ ಸಂಶೋಧನೆಯಾದಾಗ ಇದೇ ರೀತಿಯ ಆತಂಕವನ್ನು ವಿಜ್ಞಾನಿಗಳ ಸಮುದಾಯ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.